alex Certify
ಕನ್ನಡ ದುನಿಯಾ       Mobile App
       

Kannada Duniya

ರಾಮಮಂದಿರ ಶಿಲಾನ್ಯಾಸಕ್ಕೆ ಅಯೋಧ್ಯೆಗೆ ಬರುವ ಮೋದಿ ಮೊದಲ ಭೇಟಿ ಎಲ್ಲಿ ಗೊತ್ತಾ…?

ಅಯೋಧ್ಯೆ: ಆಗಸ್ಟ್ 5 ರಂದು ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಹಿನ್ನೆಲೆಯಲ್ಲಿ ಶಿಲಾನ್ಯಾಸಕ್ಕೆ ಮೊದಲು ಹನುಮಾನ್ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ.

ಹನುಮಾನ್ ಗಡಿ ಎಂದು ಕರೆಯುವ ಹನುಮಾನ್ ಮಂದಿರಕ್ಕೆ ಅಯೋಧ್ಯೆಗೆ ಯಾರೇ ಬಂದರೂ ಭೇಟಿ ನೀಡುತ್ತಾರೆ. ಹನುಮಾನ್ ಮಂದಿರಕ್ಕೆ ಭೇಟಿ ಬಳಿಕ ರಾಮ ಮಂದಿರಕ್ಕೆ ಭೇಟಿ ನೀಡುವ ಸಂಪ್ರದಾಯವಿದೆ.

ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಹನುಮಾನ್ ಮಂದಿರಕ್ಕೆ ಭೇಟಿ ನೀಡಿದ ಬಳಿಕ ರಾಮಮಂದಿರ ಶಿಲಾನ್ಯಾಸ ಸ್ಥಳಕ್ಕೆ ತೆರಳಿದ್ದಾರೆ.

ಪ್ರಧಾನಿ ಆಗಮನ ಹಾಗೂ ಕೊರೊನಾ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬಿಗಿಭದ್ರತೆಯೊಂದಿಗೆ ಕಾರ್ಯಕ್ರಮ ಯೋಜನೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ಅಯೋಧ್ಯೆ ನಗರ ಭೂಮಿ ಪೂಜೆ ಸಮಾರಂಭಕ್ಕೆ ಶೃಂಗಾರಗೊಂಡಿದೆ.

Subscribe Newsletter

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...