alex Certify ಗುಜರಾತ್ ​ನಲ್ಲಿ ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಮೃಗಾಲಯ ನಿರ್ಮಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಜರಾತ್ ​ನಲ್ಲಿ ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಮೃಗಾಲಯ ನಿರ್ಮಾಣ

ಗುಜರಾತ್​ನ ಜಾಮ್​ ನಗರದಲ್ಲಿ ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಪ್ರಾಣಿ ಸಂಗ್ರಹಾಲಯ ನಿರ್ಮಾಣವಾಗಲಿದೆ ಅಂತಾ ರಾಜ್ಯ ಸರ್ಕಾರದ ಅಧಿಕಾರಿ ಮಾಹಿತಿ ನೀಡಿದ್ದಾರೆ .‌

ಪ್ರತಿಷ್ಠಿತ ರಿಲಯನ್ಸ್ ಇಂಡಸ್ಟ್ರೀಸ್​ ಈ ಮೃಗಾಲಯವನ್ನ ಜಾಮ್​ನಗರದಲ್ಲಿ ಅಭಿವೃದ್ಧಿಪಡಿಸುತ್ತಿದೆ ಎಂದು ಗುಜರಾತ್​ ಮುಖ್ಯಮಂತ್ರಿ ಕಚೇರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ.ಕೆ. ದಾಸ್ ಹೇಳಿದ್ದಾರೆ.

ನಿಮ್ಮಗೆಲ್ಲರಿಗೂ ತಿಳಿದಿರುವಂತೆ ವಿಶ್ವದ ಅತಿ ಎತ್ತರದ ಪ್ರತಿಮೆಯನ್ನ ಗುಜರಾತ್​ ಹೊಂದಿದೆ. ಶೀಘ್ರದಲ್ಲೇ ಗುಜರಾತ್ ವಿಶ್ವದಲ್ಲೇ ಅತಿದೊಡ್ಡ ಪ್ರಾಣಿ ಸಂಗ್ರಹಾಲಯವನ್ನ ಹೊಂದಲಿದೆ ಎಂದು ಎಂ.ಕೆ. ದಾಸ್​ ಹೇಳಿದ್ರು.

ಕೇಂದ್ರ ಮೃಗಾಲಯ ಸಮಿತಿ ನೀಡಿರುವ ಮಾಹಿತಿ ಪ್ರಕಾರ ಹಸಿರು ಮೃಗಾಲಯ ರಕ್ಷಣಾ ಹಾಗೂ ಪುನರ್ವಸತಿ ಸಾಮ್ರಾಜ್ಯ ಸ್ಥಾಪನೆಗೆ ಈಗಾಗಲೇ ಯೋಜನಾ ವಿವರಣೆಯನ್ನ ಸಲ್ಲಿಕೆ ಮಾಡಲಾಗಿದೆ. ಈ ವಿವರಣೆಯನ್ನ ಮೃಗಾಲಯ ಪ್ರಾಧಿಕಾರದ 33ನೇ ಸಭೆಯಲ್ಲಿ ಅಂಗೀಕರಿಸಲಾಗಿದೆ.

ಮೂಲಗಳ ಪ್ರಕಾರ ಈ ಮೃಗಾಲಯದಲ್ಲಿ ವಿಶ್ವದ ಮೂಲೆ ಮೂಲೆಯ ಪಕ್ಷಿಗಳು, ಪ್ರಾಣಿಗಳು, ಡ್ರ್ಯಾಗನ್​ ವಂಶ, ಮತ್ಸ್ಯ ಜೀವಿಗಳು ಸೇರಿದಂತೆ ಅನೇಕ ಪ್ರಬೇಧಗಳನ್ನ ಹೊಂದುವ ಇರಾದೆಯನ್ನ ಹೊಂದಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...