alex Certify
ಕನ್ನಡ ದುನಿಯಾ       Mobile App
       

Kannada Duniya

ಒಳ ಉಡುಪು ತೆಗೆದು ಮುಟ್ಟಾಗಿಲ್ಲವೆಂಬುದನ್ನು ತೋರಿಸಿದ 68 ಹುಡುಗಿಯರು…!

Gujarat news

ಗುಜರಾತ್‌ನ ಭುಜ್‌ನ ಕಾಲೇಜೊಂದರಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.  68 ಹುಡುಗಿಯರು ತಮ್ಮ ಒಳ ಉಡುಪು ತೆಗೆದು ತಾವು ಮುಟ್ಟಾಗಿಲ್ಲ ಎಂಬುದನ್ನು ಸಾಭೀತುಪಡಿಸಿದ್ದಾರೆ. ಮುಟ್ಟಾದ ಹುಡುಗಿಯರು ಧಾರ್ಮಿಕ ಆಚರಣೆ ಉಲ್ಲಂಘನೆ ಮಾಡ್ತಿದ್ದಾರೆ. ಮುಟ್ಟಾದ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡ್ತಿದ್ದಾರೆ. ಅಡುಗೆ ಮನೆಗೆ ಹೋಗ್ತಿದ್ದಾರೆಂದು ಹಾಸ್ಟೆಲ್ ವಾರ್ಡನ್, ಪ್ರಾಂಶುಪಾಲರಿಗೆ ದೂರು ನೀಡಿದ್ದರು.

ಭುಜ್ ನ ಎಸ್‌ಎಸ್‌ಜಿಐನಲ್ಲಿ ಈ ಘಟನೆ ನಡೆದಿದೆ. ಸಂಸ್ಥೆಯ ಧ್ಯೇಯವು ಆಧುನಿಕ, ವೈಜ್ಞಾನಿಕ ಮತ್ತು ಮೌಲ್ಯ ಆಧಾರಿತ ಶಿಕ್ಷಣದ ಮೂಲಕ ಹುಡುಗಿಯರ ಸ್ವ-ಅಭಿವೃದ್ಧಿ ಮತ್ತು ಸಬಲೀಕರಣ. ಆದ್ರೆ ಇಂಥ ಸಂಸ್ಥೆಯಲ್ಲೇ ಈ ಘಟನೆ ನಡೆದಿರುವುದು ಆಘಾತ ತಂದಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

ಆದರೆ ಈ ಬಗ್ಗೆ ತನಿಖೆ ನಡೆಸಲು ವಿಶ್ವವಿದ್ಯಾಲಯದ ಉಸ್ತುವಾರಿ ಉಪಕುಲಪತಿ ಸಮಿತಿ ರಚಿಸಿದ್ದಾರೆ. ಭುಜ್ ಸ್ವಾಮಿನಾರಾಯಣ ಮಂದಿರದ ಅನುಯಾಯಿಗಳು ಕಾಲೇಜು ನಡೆಸುತ್ತಿದ್ದಾರೆ. ಇದನ್ನು 2012 ರಲ್ಲಿ ಸ್ಥಾಪಿಸಲಾಯಿತು. 2014 ರಲ್ಲಿ ಇದು ಶ್ರೀ ಸ್ವಾಮಿನಾರಾಯಣ್ ಕನ್ಯಾ ಮಂದಿರದ ಆವರಣದಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಬಿಕಾಂ, ಬಿಎಸ್ಸಿ, ಬಿಎ ಮುಂತಾದ ವಿವಿಧ ಕೋರ್ಸ್‌ಗಳಲ್ಲಿ ಸುಮಾರು 1,500 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕಾಲೇಜಿನ ಕ್ಯಾಂಪಸ್‌ನಲ್ಲಿ ಹಾಸ್ಟೇಲ್ ಸೌಲಭ್ಯವಿದ್ದು, ದೂರದ ಹಳ್ಳಿಯ ವಿದ್ಯಾರ್ಥಿನಿಯರು ಇಲ್ಲಿ ಉಳಿದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...