alex Certify GOOD NEWS: 2-DG ಡ್ರಗ್ ಬಳಕೆಗೆ ಅನುಮತಿ; ಆಕ್ಸಿಜನ್ ಅವಲಂಬನೆ ಕಡಿಮೆ ಮಾಡುತ್ತೆ ಈ ಪೌಡರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: 2-DG ಡ್ರಗ್ ಬಳಕೆಗೆ ಅನುಮತಿ; ಆಕ್ಸಿಜನ್ ಅವಲಂಬನೆ ಕಡಿಮೆ ಮಾಡುತ್ತೆ ಈ ಪೌಡರ್

ನವದೆಹಲಿ: ಕೊರೊನಾ ಸೋಂಕಿತರ ತುರ್ತು ಚಿಕಿತ್ಸೆಗಾಗಿ ಡಿ ಆರ್ ಡಿ ಒ ಅಭಿವೃದ್ಧಿಪಡಿಸಿರುವ 2-DG (ಡಿಯೊಕ್ಸಿ-ಡಿ-ಗ್ಲೂಕೋಸ್) ಡ್ರಗ್ ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ. ಈ ಡ್ರಗ್ ಬಳಕೆಯಿಂದ ಮೆಡಿಕಲ್ ಆಕ್ಸಿಜನ್ ಅವಲಂಬನೆಯನ್ನು ಕಡಿಮೆ ಮಾಡಬಹುದು ಎಂದು ಹೇಳಿದೆ.

ಡಿ ಆರ್ ಡಿ ಒ ಲ್ಯಾಬ್ ನಲ್ಲಿ ಈ 2-DG ಡ್ರಗ್ ಸಂಶೋಧನೆ ಮಾಡಲಾಗಿತ್ತು. ಇನ್ಸ್ ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ ನಿಂದ ಹೈದರಾಬಾದ್ ನ ಡಾಕ್ಟರ್ ರೆಡ್ಡೀಸ್ ಜೊತೆಗೂಡಿ ಈ ಡ್ರಗ್ ಅಭಿವೃದ್ಧಿಪಡಿಸಲಾಗಿದೆ. ಈ ಡ್ರಗ್ ಆಸ್ಪತ್ರೆಗೆ ದಾಖಲಾದ ಸೋಂಕಿತರ ಶೀಘ್ರ ಚೇತರಿಕೆಗೆ ಸಹಾಯಕವಾಗಲಿದೆ ಎಂದು ಡಿ ಆರ್ ಡಿ ಒ ತಿಳಿಸಿದೆ.

ʼಕೊರೊನಾʼ ಸೋಂಕು ಶ್ವಾಸಕೋಶಕ್ಕೆ ಹರಡದಂತೆ ತಡೆಯಲು ನೆರವಾಗುತ್ತೆ ಈ ವ್ಯಾಯಾಮ

ಈ ಡ್ರಗ್ ಪೌಡರ್ ರೂಪದಲ್ಲಿರಲಿದ್ದು, ನೀರಿನಲ್ಲಿ ಮಿಶ್ರಣ ಮಾಡಿ ಸೇವಿಸುವುದರಿಂದ ಕೇವಲ ಮೂರು ದಿನಗಳಲ್ಲಿ ಶೇ.42ರಷ್ಟು ಆಕ್ಸಿಜನ್ ಅವಲಂಬನೆ ಕಡಿಮೆಯಾಗುತ್ತದೆ ಎಂದು ಡಿ ಆರ್ ಡಿ ಒ ತಿಳಿಸಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮೆಡಿಕಲ್ ಆಕ್ಸಿಜನ್ ಕೊರತೆಯಿಂದ ರೋಗಿಗಳು ಬಳಲುತ್ತಿದ್ದಾರೆ. ಈ ಸಮಸ್ಯೆಗೆ 2-DG ಬಳಕೆ ಪರಿಹಾರವಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...