alex Certify ಶಿಲ್ಪಕಲೆಗಳಿಗೆ ಹೆಸರುವಾಸಿ ಸ್ಥಳ ‘ಎಲ್ಲೋರಾ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಲ್ಪಕಲೆಗಳಿಗೆ ಹೆಸರುವಾಸಿ ಸ್ಥಳ ‘ಎಲ್ಲೋರಾ’

ಅಜಂತಾ, ಎಲ್ಲೋರಾ ಗುಹೆಗಳು ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿವೆ. ಔರಂಗಾಬಾದ್ ನಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ಎಲ್ಲೋರಾ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಶಿಲ್ಪಕಲೆಗಳ ಸೌಂದರ್ಯದಿಂದ ಎಲ್ಲೋರಾ ಗಮನ ಸೆಳೆಯುತ್ತದೆ.

ಗುಹೆಗಳಲ್ಲಿನ ಹಿಂದೂ, ಬೌದ್ಧ ಹಾಗೂ ಜೈನ ಧರ್ಮದ ಮೂರ್ತಿಗಳು ಮೂರೂ ಧರ್ಮಗಳ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಮೂರೂ ಧರ್ಮಗಳ ಸಮನ್ವಯವನ್ನು ಇಲ್ಲಿನ ಗುಹೆಗಳಲ್ಲಿ ಕಾಣಬಹುದಾಗಿದೆ. ಬೆಟ್ಟದಲ್ಲಿನ ಕಲ್ಲಿನ ಪದರದಲ್ಲಿ ನಿರ್ಮಿಸಲಾಗಿರುವ ಎಲ್ಲೋರಾದ 34 ಗುಹೆಗಳಲ್ಲಿ 16 ಗುಹೆಗಳು ಹಿಂದೂ ಧರ್ಮಕ್ಕೆ ಸಂಬಂಧಿಸಿದ್ದಾಗಿವೆ.

13 ಗುಹೆಗಳು ಬೌದ್ಧ ಧರ್ಮಕ್ಕೆ ಹಾಗೂ 5 ಗುಹೆಗಳು ಜೈನ ಧರ್ಮಕ್ಕೆ ಸಂಬಂಧಿಸಲ್ಪಟ್ಟಿವೆ. ಅಜಂತಾದಲ್ಲಿರುವ ಗುಹಾಲಯಗಳು ಅಪರೂಪದ ಭಿತ್ತಿಕಲೆಗೆ ಪ್ರಸಿದ್ಧವಾಗಿವೆ. ಎಲ್ಲೋರಾದಲ್ಲಿನ ಗುಹೆಗಳು ಶಿಲ್ಪಕಲೆಗಳಿಂದಾಗಿ ಪ್ರಖ್ಯಾತಿಯನ್ನು ಪಡೆದುಕೊಂಡಿವೆ.

ಬೆಟ್ಟಗಳ ಕಲ್ಲು ಬಂಡೆಗಳನ್ನು ಕೊರೆದು ನಿರ್ಮಿಸಲಾದ ಗುಹಾಲಯಗಳು ವಿಶಿಷ್ಟವಾಗಿವೆ. 5 ನೇ ಗುಹೆ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ದೊಡ್ಡ ಗುಹೆಯಾಗಿದ್ದು, 24 ಸ್ತಂಭಗಳನ್ನು ಒಳಗೊಂಡಿರುವ ದೊಡ್ಡ ಕೋಣೆಯ ರೂಪದಲ್ಲಿ ಇದನ್ನು ಕೆತ್ತಲಾಗಿದೆ. 6 ನೇ ಗುಹೆಯಲ್ಲಿ ಸರಸ್ವತಿ ದೇವಿಯ ಪ್ರತಿಮೆ ಮತ್ತು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ವಿಗ್ರಹಗಳನ್ನು ಕಾಣಬಹುದಾಗಿದೆ.

10 ನೇಯ ಗುಹೆಯಲ್ಲಿ ಬುದ್ಧನ ಬೃಹದಾಕಾರದ ಪ್ರತಿಮೆ ಇದೆ. 11 ನೇಯ ಗುಹೆಯಲ್ಲಿ 2 ಅಂತಸ್ತುಗಳಿವೆ. 12 ನೇ ಗುಹೆಯಲ್ಲಿ 3 ಅಂತಸ್ತುಗಳಿದ್ದು, 14 ನೇ ಗುಹೆಯಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಮೂರ್ತಿಗಳನ್ನು ಕಾಣಬಹುದಾಗಿದೆ. 15 ನೇ ಗುಹೆಯಲ್ಲಿ ಶಿವನ ದೇವಾಲಯವಿದೆ. 16 ನೇ ಗುಹೆಯನ್ನು ಕೈಲಾಸ್ ಮಂದಿರ ಎಂದು ಕರೆಯಲಾಗುತ್ತದೆ. ಇದು ಸುಮಾರು 50 ಮೀಟರ್ ಉದ್ದ, 33 ಮೀಟರ್ ಅಗಲ, 30 ಮೀಟರ್ ಎತ್ತರವಾಗಿದೆ.

21 ನೇ ಗುಹೆಯಲ್ಲಿ ಗಂಗಾ, ಯಮುನಾ ನದಿಗಳ ಮೂರ್ತಿಗಳು, ನಂದಿಯ ಮೂರ್ತಿ ಇದೆ. ಮಂದಿರದಲ್ಲಿನ ಗೋಡೆಯಲ್ಲಿ ಶಿವ, ಪಾರ್ವತಿಯರ ವಿಗ್ರಹಗಳು ಸುಂದರವಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...