alex Certify ಧೂಮ್‌ ಸ್ಟೈಲ್ ನಲ್ಲಿ ಬೈಕ್ ಚೇಸ್ ಮಾಡಿ ಕಳ್ಳನನ್ನು ಹಿಡಿದ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೂಮ್‌ ಸ್ಟೈಲ್ ನಲ್ಲಿ ಬೈಕ್ ಚೇಸ್ ಮಾಡಿ ಕಳ್ಳನನ್ನು ಹಿಡಿದ ಪೊಲೀಸ್

ಚೆನ್ನೈ: ಬೈಕ್‌ನಲ್ಲಿ ಪರಾರಿಯಾಗಲೆತ್ನಿಸಿದ ಮೊಬೈಲ್ ಕಳ್ಳನನ್ನು ಅಂಟಿಲಿನ್‌ ರಮೇಶ್ ಎಂಬ ಸಬ್ ಇನ್ಸ್ ಪೆಕ್ಟರ್ ‌ʼಧೂಮ್ʼ ಬಾಲಿವುಡ್ ಚಿತ್ರದಲ್ಲಿರುವ ಬೈಕ್ ಚೇಸಿಂಗ್ ಮಾದರಿಯಲ್ಲಿ ಚೇಸ್ ಮಾಡಿ ಹಿಡಿದ ಸಿಸಿ ಕ್ಯಾಮರಾ ಫುಟೇಜ್ ವೈರಲ್ ಆಗಿದೆ. ಪಿಎಸ್‌ಐ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಎಂಎಂಡಿಎ ಕಾಲೋನಿಯಲ್ಲಿ ಕಳ್ಳನೊಬ್ಬ 56 ವರ್ಷ ವ್ಯಕ್ತಿಯ‌ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಲೆತ್ನಿಸಿದ ಸ್ಥಳದಲ್ಲೇ ಇದ್ದ ಪಿಎಸ್ಐ ಅಂಟಿಲಿನ್ ರಮೇಶ್, ಬೈಕ್ ನಲ್ಲಿ ಕಳ್ಳನನ್ನು ಚೇಸ್ ಮಾಡಿದರು. ಒಂದೇ ಕೈಯ್ಯಲ್ಲಿ ಬೈಕ್ ಓಡಿಸುತ್ತ ಮತ್ತೊಂದು ಕೈಯ್ಯಲ್ಲಿ ಆತನನ್ನು ಹಿಡಿಯಲೆತ್ನಿಸಿದರು. ಕೊನೆಯಲ್ಲಿ ಅರ್ಜುನ್‌(20) ಎಂಬ ಆರೋಪಿಯನ್ನು ಬಂಧಿಸಿದ್ದಾರೆ.

ಚೆನ್ನೈ ಕಮೀಷನರ್ ಮಹೇಶ ಅಗರವಾಲ್ ಅವರು ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಪಿಎಸ್ಐ ರಮೇಶ ಅವರನ್ನು ಕರೆಸಿ ಬಹುಮಾನ ನೀಡಿರುವ ಫೋಟೋವನ್ನೂ ಟ್ವೀಟ್ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...