alex Certify ಸಂಚಾರಿ ನಿಯಮ ಜಾಗೃತಿಗೆ ಮೋನಾಲಿಸಾಳನ್ನ ಬಳಸಿಕೊಂಡ ಮುಂಬೈ ಪೊಲೀಸರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಚಾರಿ ನಿಯಮ ಜಾಗೃತಿಗೆ ಮೋನಾಲಿಸಾಳನ್ನ ಬಳಸಿಕೊಂಡ ಮುಂಬೈ ಪೊಲೀಸರು…!

Da Vinci Code of Safety': Mumbai Police Puts a Spin on the Iconic 'Mona Lisa 'ಮುಂಬೈ ಪೊಲೀಸ್​ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಫೇಮಸ್​. ಅದರಲ್ಲೂ ಕೊರೊನಾ ವೈರಸ್​ ಮಾರ್ಗಸೂಚಿಗಳನ್ನ ಉಲ್ಲಂಘಿಸಿ ಪಾರ್ಟಿ ಮಾಡಿ ಸ್ಟೇಷನ್​ಗೆ ಸೆಲೆಬ್ರಿಟಿಗಳು ಅಲೆದಿದ್ದ ವಿಚಾರ ನಿಮಗೆ ನೆನಪಿದ್ದಿರಬಹುದು. ಈ ವೇಳೆಯಲ್ಲೂ ಪಾರ್ಟಿ ( ನಹಿ) ಚಲೇಗಿ ಸಿಕ್ಸ್ ಇನ್​​ ದ ಮಾರ್ನಿಂಗ್​ ಎಂಬ ಬಾಲಿವುಡ್​ ಗೀತೆಯ ಸಾಲೊಂದನ್ನ ಟ್ವೀಟ್​ ಮಾಡೋ ಮೂಲಕ ಸ್ಟಾರ್​ ಸೆಲೆಬ್ರಿಟಿಗಳಿಗೆ ಚೆನ್ನಾಗಿಯೇ ಟಾಂಗ್​ ನೀಡಿತ್ತು.

ಇದೀಗ ಇನ್​ಸ್ಟಾಗ್ರಾಂನಲ್ಲಿ ಮೊನಾಲಿಸಾ ಸೀಟ್​ ಬೆಲ್ಟ್​ ಧರಿಸಿ ಕಾರಿನಲ್ಲಿ ಕುಳಿತಿರುವ ರೀತಿಯ ಫೋಟೋ ಶೇರ್​ ಮಾಡಿರುವ ಮುಂಬೈ ಪೊಲೀಸರು ಟ್ರಾಫಿಕ್​ ನಿಯಮಗಳ ಪಾಲಿಸಿ ಅಂತಾ ಸಲಹೆ ನೀಡಿದ್ದಾರೆ. ಮುಂಬೈ ಪೊಲೀಸರ ಈ ಪೋಸ್ಟ್ ಕಂಡ ಜನತೆ ಬಿದ್ದು ಬಿದ್ದು ನಕ್ಕಿದ್ದಾರೆ.

ಈ ರೀತಿಯ ಅನೇಕ ಹಾಸ್ಯಮಯ ಪೋಸ್ಟ್​ಗಳ ಮೂಲಕ ಮುಂಬೈ ಪೊಲೀಸರು ಜನ ಜಾಗೃತಿ ಮೂಡಿಸ್ತಾನೆ ಇರ್ತಾರೆ. ಕೆಲ ದಿನಗಳ ಹಿಂದಷ್ಟೇ ಎಲಾನ್​ ಮಸ್ಕ್​ ಸಿಗ್ನಲ್​ ಬಳಸಿ ಎಂದು ಟ್ವೀಟ್​ ಮಾಡಿದ್ದರು. ಇದನ್ನೇ ರಿ ಟ್ವೀಟ್​ ಮಾಡಿದ್ದ ಮುಂಬೈ ಪೊಲೀಸರು ರಸ್ತೆಯ ಮೇಲಿದ್ದಾಗಲಂತೂ ಸಿಗ್ನಲ್​ ಬಳಸೋಕೆ ಮರೆಯದಿರಿ ಎಂದು ಹೇಳೋ ಮೂಲಕ ಟ್ವೀಟ್​ಗೆ ಇನ್ನೊಂದು ಅರ್ಥವನ್ನೇ ನೀಡಿದ್ದರು.

View this post on Instagram

A post shared by Mumbai Police (@mumbaipolice)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...