alex Certify ವಿಮಾನ ನಿಲ್ದಾಣದಿಂದ ತಪ್ಪಾಗಿ ಆಮ್ಲಜನಕ ಸಾಂದ್ರಕ ಹೊತ್ತೊಯ್ದ CSK ಸದಸ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ನಿಲ್ದಾಣದಿಂದ ತಪ್ಪಾಗಿ ಆಮ್ಲಜನಕ ಸಾಂದ್ರಕ ಹೊತ್ತೊಯ್ದ CSK ಸದಸ್ಯ….!

ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 25,986 ಹೊಸ ಕೊರೊನಾ ಕೇಸ್​ ಹಾಗೂ 368ಕ್ಕೂ ಅಧಿಕ ಕೊರೊನಾ ಸಾವುಗಳನ್ನ ವರದಿ ಮಾಡಿದೆ. ವೈದ್ಯಕೀಯ ಆಮ್ಲಜನಕಗಳ ಕೊರತೆಯಿಂದಾಗಿ ಕೊರೊನಾವನ್ನ ಎದುರಿಸೋದು ಇನ್ನಷ್ಟು ಕಷ್ಟವಾಗುತ್ತಿದೆ.

ಇಂತಹ ಕಠಿಣ ಸಂದರ್ಭದ ನಡುವೆಯೇ ತಂದೆಯ ಚಿಕಿತ್ಸೆಗೆಂದು ವಿಮಾನದಲ್ಲಿ ಆಮ್ಲಜನಕ ಸಾಂದ್ರಕ ತಂದಿದ್ದ ವ್ಯಕ್ತಿಯ ಬ್ಯಾಗನ್ನ ತಪ್ಪಾಗಿ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಸದಸ್ಯ ಎತ್ತುಕೊಂಡು ಹೋಗಿದ್ದಾರೆ.

ಅನ್ವರ್​ ಎಂಬವರ ತಂದೆ ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದರು. ಇದಕ್ಕಾಗಿ ಅನ್ವರ್​ ಆಮ್ಲಜನಕ ಸಿಲಿಂಡರ್​ ಬದಲಾಗಿ ಆಮ್ಲಜನಕ ಸಾಂದ್ರಕವನ್ನ ತರಲು ನಿರ್ಧರಿಸಿದ್ರು. ಬೆಂಗಳೂರಿನಲ್ಲಿ ಸಾಂದ್ರಕವನ್ನ ಖರೀದಿ ಮಾಡಿದ ಅನ್ವರ್​ ಇಂಡಿಗೋ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಆದರೆ ವಿಮಾನ ನಿಲ್ದಾಣ ತಲುಪಿದಾಗ ಅನ್ವರ್​ಗೆ ಆಮ್ಲಜನಕ ಸಾಂದ್ರಕದ ಬ್ಯಾಗ್​ ತಮ್ಮ ಬಳಿ ಇಲ್ಲ ಎಂಬ ವಿಚಾರ ಗೊತ್ತಾಗಿದೆ. ಅನ್ವರ್​ ಬರೋಬ್ಬರಿ 24 ಗಂಟೆಗಳ ಕಾಲ ಏರ್​ಲೈನ್​ ಅಧಿಕಾರಿಗಳ ಸಂಪರ್ಕದಲ್ಲಿದ್ದು ಸಾಂದ್ರಕದ ಹುಡುಕಾಟ ನಡೆಸಿದ್ರು.

ಅಂದಹಾಗೆ ಬೆಂಗಳೂರಿನಿಂದ ದೆಹಲಿಗೆ ಸಾಂದ್ರಕ ಸರಿಯಾದ ಸಮಯಕ್ಕೆ ದೆಹಲಿಗೆ ಬಂದಿಳಿದಿದೆ. ಆದರೆ ಅನ್ವರ್​ ತೆಗೆದುಕೊಳ್ಳಬೇಕಿದ್ದ ಈ ಬ್ಯಾಗ್​ನ್ನು ಮಿಸ್​ ಆಗಿ ಸಿಎಸ್​ಕೆ ತಂಡದ ಸದಸ್ಯರೊಬ್ಬರು ಕೊಂಡೊಯ್ದಿದ್ದಾರೆ. ನಿನ್ನೆ ದೆಹಲಿ ಅರುಣ್​ ಜೆಟ್ಲಿ ಮೈದಾನದಲ್ಲಿ ಪಂದ್ಯವಿದ್ದುದರಿಂದ ಸಿಎಸ್​ಕೆ ತಂಡ ಕೂಡ ದೆಹಲಿಗೆ ಬಂದಿಳಿದಿತ್ತು. ಕೊರೊನಾ ಮಾರ್ಗಸೂಚಿಗಳಿಂದಾಗಿ ಆಟಗಾರರು ವೈಯಕ್ತಿಕ ಕೆಲ ಅಗತ್ಯ ಸಾಮಗ್ರಿಗಳನ್ನ ತಮ್ಮ ಬಳಿ ಇಟ್ಟುಕೊಳ್ಳಬೇಕೆಂಬ ನಿಯಮ ಇದೆ. ಹೀಗಾಗಿ ಈ ಎಲ್ಲಾ ಲಗೇಜ್​ಗಳು ಹೋಟೆಲ್​ ರೂಮ್​ಗೆ ಹೋಗಿದ್ದು ಸ್ಯಾನಿಟೈಸ್​ ಆಗಿದೆ.

ಏಪ್ರಿಲ್​ 27ರ ರಾತ್ರಿ ಸಿಎಸ್​​ಕೆ ತಂಡದ ಸದಸ್ಯನಿಗೆ ತನ್ನ ಬಳಿ ಒಂದು ಹೆಚ್ಚುವರಿ ಬ್ಯಾಗ್​ ಇದೆ ಎಂಬ ವಿಚಾರ ತಿಳಿದಿದೆ. ಏರ್​ಪೋರ್ಟ್​ಗೆ ಈ ಬಗ್ಗೆ ಮಾಹಿತಿ ನೀಡಿದ ಬಳಿಕ ಇದು ಅನ್ವರ್​ಗೆ ಸೇರಿದ ಬ್ಯಾಗ್​ ಎಂಬ ವಿಚಾರ ಬೆಳಕಿಗೆ ಬಂದಿದೆ. ಅನ್ವರ್​ ಬರೋಬ್ಬರಿ 36 ಗಂಟೆಗಳ ಬಳಿಕ ಆಮ್ಲಜನಕ ಸಾಂದ್ರಕವನ್ನ ಪಡೆದಿದ್ದಾರೆ. ಕೂಡಲೇ ಆಮ್ಲಜನಕ ಸಾಂದ್ರಕವನ್ನ ಸಂಗ್ರಹಿಸಿದ ಇಂಡಿಗೋ ಸಿಬ್ಬಂದಿ ಆಸ್ಪತ್ರೆಗೆ ತೆರಳಿ ರೋಗಿಗೆ ಆಮ್ಲಜನಕ ಸಾಂದ್ರಕ ತಲುಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...