alex Certify ಗಮನಿಸಿ: ನಾಳೆಯಿಂದಲೇ ವೃದ್ಧರು – ರೋಗಿಗಳಿಗೆ ‘ಕೊರೊನಾ’ ಲಸಿಕೆ ನೋಂದಣಿ – ಇಲ್ಲಿದೆ ಈ ಕುರಿತ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ನಾಳೆಯಿಂದಲೇ ವೃದ್ಧರು – ರೋಗಿಗಳಿಗೆ ‘ಕೊರೊನಾ’ ಲಸಿಕೆ ನೋಂದಣಿ – ಇಲ್ಲಿದೆ ಈ ಕುರಿತ ಸಂಪೂರ್ಣ ಮಾಹಿತಿ

60 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ 45 ವರ್ಷ ಮೇಲ್ಪಟ್ಟ ಅನಾರೋಗ್ಯ ಹೊಂದಿರುವವರಿಗೆ ನಾಳೆಯಿಂದ ಕೊರೊನಾ ಲಸಿಕೆ ನೀಡಲು ಭಾರತ ಸಜ್ಜಾಗುತ್ತಿದೆ.

ಸೋಮವಾರದಿಂದ ನಡೆಯಲಿರುವ ಕೊರೊನಾ ಲಸಿಕೆ ನೋಂದಣಿ ನಾಳೆ ಬೆಳಗ್ಗೆ 9 ಗಂಟೆಯಿಂದ ಆರಂಭವಾಗಲಿದೆ. https://www.cowin.gov.in/home ಲಿಂಕ್​ ಮೂಲಕ ನೀವು ಕೋವಿನ್​ ಪೋರ್ಟಲ್​ನ್ನು ಪ್ರವೇಶಿಸಬಹುದಾಗಿದೆ.

ಈ ಪೋರ್ಟಲ್​​ ಅಥವಾ ಆರೋಗ್ಯ ಸೇತು ಮುಂತಾದ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಅಪ್ಲಿಕೇಶನ್​ಗಳ ಮೂಲಕ ಸಾರ್ವಜನಿಕರು ಯಾವುದೇ ಸಮಯದಲ್ಲಿ ಮತ್ತು ಎಲ್ಲಿಯಾದರೂ ಲಸಿಕೆಗಾಗಿ ನೋಂದಣಿ ಮಾಡಬಹುದಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ.

ಇನ್ನು ಒಂದು ದಿನಕ್ಕೆ 100 ಮಂದಿಗೆ ಕೊರೊನಾ ಲಸಿಕೆ ನೀಡಲಾಗುತ್ತೆ. ಕೊರೊನಾ ಲಸಿಕೆಯ ನೋಂದಣಿ ಮಾಡುವವರಿಗೆ ಮಧ್ಯಾಹ್ನ 3ಗಂಟೆಯವರೆಗೆ ಅವಕಾಶ ಸಿಗಲಿದೆ. ಉದಾಹರಣೆಗೆ ಮಾರ್ಚ್​ 1ರ ಸ್ಲಾಟ್​ ಬೆಳಗ್ಗೆ 9ರಿಂದ ಮಧ್ಯಾಹ್ನ 3ಗಂಟೆಯವರೆಗೆ ಇರಲಿದೆ.

ಇದು ಮಾತ್ರವಲ್ಲದೇ ಮಾರ್ಚ್​ 1ರಂದು ಬೇರೆ ಯಾವುದೇ ದಿನಾಂಕಕ್ಕೆ ನೋಂದಣಿ ಮಾಡಬಹುದಾಗಿದೆ.

ನೀವು ಒಂದು ನಿಗದಿತ ದಿನಾಂಕಕ್ಕೆ ಲಸಿಕೆ ಪಡೆಯಲು ನೋಂದಾಯಿಸಿದ ಬಳಿಕ ಆ ದಿನಾಂಕದ 29 ದಿನದ ಬಳಿಕ ಎರಡನೇ ಡೋಸ್​ ತೆಗೆದುಕೊಳ್ಳಬೇಕು. ಫಲಾನುಭವಿ ತನ್ನ ಮೊದಲ ದಿನದ ನೇಮಕಾತಿ ರದ್ದು ಮಾಡಿದ್ರೆ ಆತನ ಎರಡನೇ ಡೋಸ್​ ದಿನಾಂಕವೂ ರದ್ದಾಗಲಿದೆ.

ಇನ್ನು ಕೊರೊನಾ ಲಸಿಕೆ ಅದರ ನೋಂದಾವಣಿ ಈ ಎಲ್ಲದರ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ವೆಬ್​ಸೈಟ್​ನಲ್ಲಿ ಸಂಪೂರ್ಣ ಮಾಹಿತಿ ನೀಡಿದೆ. 45 ವರ್ಷದ ಒಳಗಿನವರು ಲಸಿಕೆ ಪಡೆದುಕೊಳ್ಳಲು 20 ಆರೋಗ್ಯ ಸಮಸ್ಯೆಗಳನ್ನ ಆಯ್ಕೆ ಮಾಡಲಾಗಿದೆ. ಇದರಲ್ಲಿ ಹೃದಯ ಸಮಸ್ಯೆ, ಮಧುಮೇಹ, ಕಿಡ್ನಿ ಸಮಸ್ಯೆ, ಕ್ಯಾನ್ಸರ್​ ಸೇರಿದಂತೆ ಇನ್ನೂ ಅನೇಕ ಕಾಯಿಲೆಗಳು ಸೇರಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...