alex Certify ಕೋವಿಡ್-19 ಲಸಿಕೆ ಕುರಿತ ವದಂತಿಗೆ ಕೇಂದ್ರ ಆರೋಗ್ಯ ಸಚಿವರ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್-19 ಲಸಿಕೆ ಕುರಿತ ವದಂತಿಗೆ ಕೇಂದ್ರ ಆರೋಗ್ಯ ಸಚಿವರ ಸ್ಪಷ್ಟನೆ

ಕೋವಿಡ್-19 ಲಸಿಕೆಯ ಬಗ್ಗೆ ಸಾಕಷ್ಟು ಅವ್ಯಕ್ತ ಭಯಗಳು ಜಗತ್ತಿನೆಲ್ಲೆಡೆ ನೆಲೆಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಭೀತಿ ಇನ್ನಷ್ಟು ರಂಗೇರುತ್ತಿದೆ.

ನಾಳೆಯಿಂದ ದೇಶವ್ಯಾಪಿ ಲಸಿಕೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ಕೊಡಲಿರುವ ಮುನ್ನವೇ ಹೊಸದೊಂದು ಆತಂಕವನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತಲಾಗಿದೆ. ಈ ಲಸಿಕೆ ಹಾಕಿಸಿಕೊಂಡ ಜನರಿಗೆ ಮಕ್ಕಳಾಗುವುದಿಲ್ಲ ಎಂಬ ವದಂತಿ ಹಬ್ಬಿದೆ.

ಈ ಕುರಿತು ಖುದ್ದು ಸ್ಪಷ್ಟನೆ ಕೊಟ್ಟಿರುವ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌, ಟ್ವೀಟ್‌ಗಳ ಸರಣಿ ಮುಖಾಂತರ ಸಾಮಾನ್ಯವಾದ ಅನುಮಾನಗಳನ್ನು ಪರಿಹರಿಸಿದ್ದಾರೆ.

“ಕೋವಿಡ್-19 ಲಸಿಕೆಗಳಿಂದ ಪುರುಷರಲ್ಲಿ/ಮಹಿಳೆಯರಲ್ಲಿ ಮಕ್ಕಳಾಗದಂತೆ ಆಗುತ್ತದೆ ಎಂದು ವೈಜ್ಞಾನಿಕವಾಗಿ ಯಾವುದೇ ಪುರಾವೆಗಳು ಇಲ್ಲ. ಕೋವಿಡ್-19 ಸೋಂಕಿನಿಂದಲೂ ಈ ಸಮಸ್ಯೆ ಉದ್ಭವಿಸುವುದಿಲ್ಲ. ದಯವಿಟ್ಟು ಕೇವಲ ಅಧಿಕೃತ ಮೂಲಗಳಿಂದ ಬರುವ ಮಾಹಿತಿಗಳನ್ನು ಮಾತ್ರವೇ ನಂಬಿ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ” ಎಂದು ತಿಳಿಸುವ ಕೋವಿಡ್-19 ಲಸಿಕೆಯ ಮಾರ್ಗಸೂಚಿಯೊಂದನ್ನು ಹರ್ಷ್‌ವರ್ಧನ್ ಇದೇ ವೇಳೆ ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...