alex Certify ‌ನಾಪತ್ತೆಯಾಗಿದ್ದ ಯುವತಿ ಶವ ಚೀಲದಲ್ಲಿ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ನಾಪತ್ತೆಯಾಗಿದ್ದ ಯುವತಿ ಶವ ಚೀಲದಲ್ಲಿ ಪತ್ತೆ

ಬಾರಾಬಂಕಿ: ಅತ್ಯಾಚಾರ ಪ್ರಕರಣಗಳಿಂದ ಸದಾ ಸುದ್ದಿಯಲ್ಲಿರುವ ಉತ್ತರ ಪ್ರದೇಶದಲ್ಲಿ ಮತ್ತೊಂದು ಅದೇ ಮಾದರಿಯ ಘಟನೆ ನಡೆದಿದೆ. ಬಾರಾಬಂಕಿ‌ ಜಿಲ್ಲೆಯ ಜುತೆಬಾಗದಿಂದ ನಾಪತ್ತೆಯಾಗಿದ್ದ ಯುವತಿ ಚೀಲ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಯುವತಿಯ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಎಂದು ಬಾರಾಬಂಕಿ ಎಸ್ ಪಿ ಅರವಿಂದ ಚತುರ್ವೇದಿ ತಿಳಿಸಿದ್ದಾರೆ.‌

ನಾಪತ್ತೆಯಾಗಿ ಎರಡು ದಿನದ ಬಳಿಕ ಶವ ಪತ್ತೆಯಾಗಿದೆ. ಯುವತಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಕಿಡ್ನಾಪಿಂಗ್ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬುದು ಖಚಿತವಾಗಲಿದೆ. ಎಲ್ಲ ಮಾದರಿಯಲ್ಲಿ ತನಿಖೆ ನಡೆದಿದೆ ಎಂದು ಎಸ್ಪಿ ಚತುರ್ವೇದಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...