alex Certify ವೈರಲ್ ಆಗಿತ್ತು ಭಾವೈಕ್ಯತೆ ಸಾರುವ ಇಫ್ತಾರ್‌ ಸಂದರ್ಭದ ಈ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್ ಆಗಿತ್ತು ಭಾವೈಕ್ಯತೆ ಸಾರುವ ಇಫ್ತಾರ್‌ ಸಂದರ್ಭದ ಈ ಫೋಟೋ

ರಂಜಾನ್ ತಿಂಗಳಿನಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಪ್ರಮುಖ ಹಾಗೂ ವಿಶಿಷ್ಟವಾದದ್ದು, ಆದರೆ ಈ ಬಾರಿ ಲಾಕ್‌ ಡೌನ್‌ ಕಾರಣಕ್ಕೆ ಇಫ್ತಾರ್ ಆಚರಿಸಲು ಸಾಧ್ಯವಾಗುತ್ತಿಲ್ಲ.

ಹೌದು, ಹಲವು ಜಾತಿ, ಧರ್ಮ, ಸಂಸ್ಕೃತಿಯನ್ನು ಒಳಗೊಂಡ ಭಾರತದಲ್ಲಿ ಅಕ್ಕಪಕ್ಕದ ಮನೆಯವರು ಯಾವ ರೀತಿ ಇರುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ‌. ಈ ಹಿಂದೆ ಇಫ್ತಾರ್ ಆರಂಭಗೊಂಡ ಬಗ್ಗೆ ಟ್ವೀಟ್ ಮಾಡಿರುವ ವ್ಯಕ್ತಿಯೊಬ್ಬರು, ಎರಡು ಫೋಟೋಗಳನ್ನ ಶೇರ್ ಮಾಡಿದ್ದಾರೆ. ಒಂದರಲ್ಲಿ ಸಹಜವಾಗಿ ಇಫ್ತಾರ್ ಕೂಟದಲ್ಲಿರುವ ಆಹಾರವಿದ್ದರೆ, ಇನ್ನೊಂದರಲ್ಲಿ ಜೈನ್ ಊಟವಿದೆ.

ಫೋಟೋ ಜತೆ ಯುವಕ, ಮನೆಯಲ್ಲಿ ಇಫ್ತಾರ್ ಊಟ ಆರಂಭಗೊಳ್ಳಬೇಕು ಎನ್ನುವಷ್ಟರಲ್ಲಿ ಮನೆಗೆ ಯಾರೋ ಬಂದರು. ಯಾರೆಂದು ನೋಡಲು ಹೋದರೆ, ಅದು ಪಕ್ಕದ ಮನೆಯ ಜೈನ್ ಸಮುದಾಯದ ಅಂಟಿ. ಇಫ್ತಾರ್ ಅಂಗವಾಗಿ ಅವರು ಆಹಾರವನ್ನು ನಮಗೆಂದು ತಯಾರಿಸಿ ಕೊಟ್ಟಿದ್ದರು ಎಂದು ಬರೆದುಕೊಂಡಿದ್ದರು.

ಸಮಾಜದಲ್ಲಿ ಸಾಮರಸ್ಯ ಸಾರುವ ಈ ಫೋಟೋ ಹಿಂದೆ ಭಾರಿ ವೈರಲ್‌ ಆಗಿದ್ದು, ಭಾರತದ ವೈಶಿಷ್ಟ್ಯತೆಯನ್ನು ನೆಟ್ಟಿಗರು ಕೊಂಡಾಡಿದ್ದರು. ಈ ಘಟನೆಯನ್ನು ಭಿನ್ನತೆಯಲ್ಲಿ ಏಕತೆ ಕಾಣುವ ರಾಷ್ಟ್ರದ ಕುರುಹು ಎಂದು ಬಣ್ಣಿಸಿದ್ದರು‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...