alex Certify ಇಲ್ಲಿದೆ ರಾಮಮಂದಿರ ನಿರ್ಮಾಣಕ್ಕೆ ಬಳಸಲಾಗ್ತಿರುವ ಕಲ್ಲಿನ ವಿಶೇಷತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ರಾಮಮಂದಿರ ನಿರ್ಮಾಣಕ್ಕೆ ಬಳಸಲಾಗ್ತಿರುವ ಕಲ್ಲಿನ ವಿಶೇಷತೆ

अयोध्या में राम मंदिर बनाने के लिए कहां से आ रहा पत्थर, क्यों है खास?

ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ಯಾವ ಕಲ್ಲುಗಳನ್ನು ಆಯ್ಕೆ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ರಾಜಸ್ಥಾನದ ಭಾರತ್ಪುರ ಜಿಲ್ಲೆಯಲ್ಲಿರುವ ಬಯಾನದ ಕಲ್ಲುಗಳನ್ನು ರಾಮ ಮಂದಿರ ನಿರ್ಮಾಣಕ್ಕೆ ಆಯ್ಕೆ ಮಾಡಲಾಗಿದೆ. ಅಲ್ಲಿ ಕಲ್ಲು ಕತ್ತರಿಸುವ ಕೆಲಸ ಚುರುಕು ಪಡೆದಿದೆ.

ಭಾರತ್ಪುರದ ಬನ್ಶಿ ಪಹಾರ್ಪುರದ ಕಲ್ಲುಗಳ ಗುಣಮಟ್ಟವು ತುಂಬಾ ಉತ್ತಮವಾಗಿದೆ. ಇದು ದೀರ್ಘಕಾಲದವರೆಗೆ ಮಿನುಗುತ್ತಿರುತ್ತದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಭರತ್ಪುರದಿಂದ ಹೆಚ್ಚಿನ ಸಂಖ್ಯೆಯ ಕಲ್ಲುಗಳು ಬಂದಿವೆ. ಈ ಹಿಂದೆಯೂ ಪ್ರಾಚೀನ ಕಟ್ಟಡಗಳ ನಿರ್ಮಾಣಕ್ಕೆ ಇಲ್ಲಿನ ಕಲ್ಲುಗಳನ್ನು ಬಳಸಿಕೊಳ್ಳಲಾಗಿದೆ.

ಬನ್ಸಿ ಪಹಾರ್‌ಪುರದ ಕಲ್ಲಿನ ಆಯಸ್ಸು ಸುಮಾರು 5000 ವರ್ಷಗಳು ಎಂದು ನಂಬಲಾಗಿದೆ. ಸಾವಿರಾರು ವರ್ಷಗಳಿಂದ ಒಂದೇ ರೂಪದಲ್ಲಿ ಉಳಿಯುತ್ತದೆ ಎಂದು ಹೇಳಲಾಗುತ್ತದೆ. ಭರತ್‌ಪುರ ಜಿಲ್ಲಾ ಕೇಂದ್ರದಿಂದ 55 ಕಿ.ಮೀ ದೂರದಲ್ಲಿರುವ ಬಯಾನಾ ಉಪವಿಭಾಗದಲ್ಲಿರುವ ಬನ್ಶಿ ಪಹರ್‌ಪುರ್ ಪ್ರದೇಶದ ಸುತ್ತಲೂ ಬೆಟ್ಟಗಳಿವೆ. ಅದರಿಂದ ಕೆಂಪು ಕಲ್ಲು ಹೊರಬರುತ್ತದೆ. ದೇಶದ ಹೆಚ್ಚಿನ ಐತಿಹಾಸಿಕ ಕಟ್ಟಡಗಳನ್ನು ಈ ಕಲ್ಲಿನಿಂದ ನಿರ್ಮಿಸಲಾಗಿದೆ. ರಾಮ ಮಂದಿರಕ್ಕೆ ಈ ಕಲ್ಲುಗಳನ್ನು ಬಳಸುತ್ತಿರುವುದು ಅಲ್ಲಿನ ಜನರಿಗೆ ಖುಷಿ ತಂದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...