alex Certify 8 ವರ್ಷಗಳಿಂದ ಪತಿ-ಪತ್ನಿಯಾಗಿದ್ದವರ ಗುಟ್ಟು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

8 ವರ್ಷಗಳಿಂದ ಪತಿ-ಪತ್ನಿಯಾಗಿದ್ದವರ ಗುಟ್ಟು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗ

ಮಧ್ಯಪ್ರದೇಶದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಗಂಡ-ಹೆಂಡತಿಯಂತೆ ಬದುಕುತ್ತಿದ್ದ ಜೋಡಿಯೊಂದರ ರಹಸ್ಯ ಬಯಲಾಗಿದೆ. ಇಬ್ಬರ ಮಧ್ಯೆ ವಿವಾದ ನಡೆದು ಪತ್ನಿ ಬೆಂಕಿ ಹಚ್ಚಿಕೊಂಡಿದ್ದಾಳೆ. ಆಕೆಯನ್ನು ರಕ್ಷಿಸಲು ಹೋದ ಪತಿಯೂ ಬೆಂಕಿಗೆ ಆಹುತಿಯಾಗಿದ್ದಾನೆ.

ಇಬ್ಬರು ಮರಣೋತ್ತರ ಪರೀಕ್ಷಾ ವರದಿ ದಂಗಾಗಿಸಿದೆ. ದಂಪತಿಯಂತೆ ಜೀವನ ನಡೆಸ್ತಿದ್ದವರಿಬ್ಬರೂ ಯುವಕರು ಎಂಬುದು ಗೊತ್ತಾಗಿದೆ. ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 2012ರಲ್ಲಿ ಇಬ್ಬರು ಮದುವೆಯಾಗಿದ್ದರು. ಎರಡು ವರ್ಷಗಳ ನಂತ್ರ ಮಗುವೊಂದನ್ನು ದತ್ತು ಪಡೆದಿದ್ದರಂತೆ.

ಆಗಸ್ಟ್ 11ರಂದು ರಾತ್ರಿ ಇಬ್ಬರ ಮಧ್ಯೆ ಜಗಳ ನಡೆದಿದೆ. ಪತ್ನಿ ಬೆಂಕಿ ಹಚ್ಚಿಕೊಂಡಿದ್ದಾಳೆ. ಪತಿ ಬಿಡಿಸಲು ಹೋಗಿ ಆಸ್ಪತ್ರೆ ಸೇರಿದ್ದಾನೆ. ಇಬ್ಬರೂ ಆಗಸ್ಟ್ 16ರಂದು ಸಾವನ್ನಪ್ಪಿದ್ದಾರೆ. ಅವರ ಮರಣೋತ್ತರ ಪರೀಕ್ಷೆ ನಡೆದಿದೆ. ಈ ವೇಳೆ ಪತ್ನಿ ರೂಪದಲ್ಲಿದ್ದಿದ್ದು ಮಹಿಳೆಯಲ್ಲ ಯುವಕ ಎಂಬುದು ಗೊತ್ತಾಗಿದೆ. ಇಬ್ಬರು 8 ವರ್ಷಗಳ ಕಾಲ ಸಂಸಾರ ನಡೆಸಿದ್ದರು. ಆದ್ರೆ ಜನರಿಗೆ ಈ ಗುಟ್ಟು ಗೊತ್ತಿರಲಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...