alex Certify ಹಬ್ಬದ ಋತುವಿನಲ್ಲಿ ಏನಾದ್ರೂ ಖರೀದಿ ಮಾಡಿ, ಆದರೆ ಖರೀದಿ ಮಾಡಿ ಎಂದ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬದ ಋತುವಿನಲ್ಲಿ ಏನಾದ್ರೂ ಖರೀದಿ ಮಾಡಿ, ಆದರೆ ಖರೀದಿ ಮಾಡಿ ಎಂದ ಮೋದಿ

ಬಿಹಾರದಲ್ಲಿ ಚುನಾವಣೆ ಪ್ರಚಾರ ರಂಗೇರಿದೆ. ಬಿಹಾರದ ಭಾಗಲ್ಪುರದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ನಡೆಸಿದ್ರು. ಈ ವೇಳೆ ಮೋದಿ ಮಹತ್ವದ ಘೋಷಣೆ ಮಾಡಿದ್ದಾರೆ. ಹಬ್ಬದ ಋತುವಿನಲ್ಲಿ ಏನಾದ್ರೂ ಖರೀದಿ ಮಾಡಿ, ಆದ್ರೆ ಖರೀದಿ ಅವಶ್ಯವಾಗಿ ಮಾಡಿ ಎಂದು ಮೋದಿ ಹೇಳಿದ್ದಾರೆ.

ಭಾಗಲ್ಪುರ್ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸ್ವಾವಲಂಬಿ ಬಿಹಾರ ವೋಕಲ್ ಫಾರ್ ಲೋಕಲ್ ಘೋಷಣೆಯನ್ನು ಪುನರಾವರ್ತಿಸಿದರು. ಹಬ್ಬದ ಋತುವಿನಲ್ಲಿ ಸ್ಥಳೀಯ ವಸ್ತುಗಳನ್ನು ಖರೀದಿ ಮಾಡಿ ಎಂದು ಮೋದಿ ಹೇಳಿದ್ದಾರೆ. ಭಾಗಲ್ಪುರದ ಸಿಲ್ಕ್ ಸೀರೆ, ಮಂಜುಸಾ ಪೇಟಿಂಗ್ ಸೇರಿದಂತೆ ಅಲ್ಲಿನ ಸ್ಥಳೀಯ ವಸ್ತುಗಳನ್ನು ಉಲ್ಲೇಖಿಸಿದ ಅವರು ಈ ಉತ್ಪನ್ನಗಳನ್ನು ಖರೀದಿ ಮಾಡಿ ಸ್ವಾವಲಂಭಿ ಬಿಹಾರಕ್ಕೆ ಪ್ರೋತ್ಸಾಹ ನೀಡಿ ಎಂದ್ರು. ಸ್ಥಳೀಯವಾಗಿ ತಯಾರಾಗುವ ಮಣ್ಣಿನ ವಸ್ತು, ದೀಪ, ಆಟಿಕೆಗಳನ್ನು ಅವಶ್ಯಕವಾಗಿ ಖರೀದಿ ಮಾಡಿ ಎಂದು ಮೋದಿ ಹೇಳಿದ್ದಾರೆ.

ಮೋದಿ, ಬಿಹಾರದ ಅನೇಕ ಕಾರ್ಯಕ್ರಮಗಳಲ್ಲಿ ಸ್ವಾವಲಂಭಿ ಭಾರತದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಮನ್ ಕಿ ಬಾತ್ ನಲ್ಲಿ ಕೂಡ ಬಿಹಾರದ ಉತ್ಪನ್ನಗಳ ಬಗ್ಗೆ ಹೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...