alex Certify ಸರ್ಕಾರಿ ಉದ್ಯೋಗ ಹುಡುಕುತ್ತಿದ್ದವರಿಗೊಂದು ಮಹತ್ವದ ಮಾಹಿತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಉದ್ಯೋಗ ಹುಡುಕುತ್ತಿದ್ದವರಿಗೊಂದು ಮಹತ್ವದ ಮಾಹಿತಿ…!

ಕೊರೊನಾ ಸಮಯದಲ್ಲಿ ಕೆಲಸ ಕಳೆದುಕೊಂಡು ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದೀರಾ..? ನಿಮಗಿದೋ ಇಲ್ಲೊಂದು ಸುವರ್ಣ ಅವಕಾಶ ನೀಡಿದೆ ಭಾರತೀಯ ಅಂಚೆ ಇಲಾಖೆ. ಪೋಸ್ಟ್ ಆಫೀಸ್‌ನಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಅರ್ಹರು ಇಲ್ಲಿ ಅರ್ಜಿ ಸಲ್ಲಿಸಿ ಕೆಲಸ ಗಿಟ್ಟಿಸಿಕೊಳ್ಳಬಹುದು.

ಹೌದು, ಭಾರತೀಯ ಅಂಚೆ ಇಲಾಖೆ ಮಹಾರಾಷ್ಟ್ರದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಆಗಿರೋದ್ರಿಂದ 10 ಮತ್ತು 12 ನೇ ಪಾಸ್ ಆದವರು ಅರ್ಜಿ ಸಲ್ಲಿಕೆ ಮಾಡಬಹುದು. ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್ ಮತ್ತು ಮಲ್ಟಿ ಟಾಸ್ಕಿಂಗ್ ಕೆಲಸಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ನವೆಂಬರ್ 3 ರ ಒಳಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು. ಪೋಸ್ಟ್‌ಮ್ಯಾನ್ ಹಾಗೂ ಮೇಲ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 18 ರಿಂದ 27 ವರ್ಷಗಳು ವಯಸ್ಸಿನ ಮಿತಿ ನೀಡಲಾಗಿದೆ. ಅದೇ ರೀತಿ ಮಲ್ಟಿ ಟಾಸ್ಕಿಂಗ್ ಸಿಬ್ಬಂದಿಗೆ ವಯಸ್ಸಿನ ಮಿತಿ 18 ರಿಂದ 25 ವರ್ಷಗಳು. ಈ ಹುದ್ದೆಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.

ಪೋಸ್ಟ್‌ಮ್ಯಾನ್ ಅಥವಾ ಮೇಲ್‌ಗಾರ್ಡ್‌ಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ಮಂಡಳಿಯಿಂದ 12 ನೇ ತರಗತಿ ಉತ್ತೀರ್ಣರಾಗಿರಬೇಕು. ನೀವು ಮಹಾರಾಷ್ಟ್ರದಲ್ಲಿ ಕೆಲಸ ಮಾಡಲಿಕ್ಕೆ ಇಚ್ಚೆ ಹೊಂದಿದ್ದರೆ ಮರಾಠಿ ಭಾಷೆಯನ್ನು ಕನಿಷ್ಠ 10 ನೇ ತರಗತಿಯವರೆಗೆ ಓದಿರಬೇಕು. ಹಾಗೆಯೇ ಗೋವಾ ರಾಜ್ಯದಲ್ಲಿ ಕೆಲಸ ಮಾಡಲು ಇಚ್ಚಿಸುವವರು 10ನೇ ತರಗತಿಯವರೆಗೆ ಕೊಂಕಣಿ ಅಥವಾ ಮರಾಠಿ ಭಾಷೆಯನ್ನು ಓದಿರಬೇಕು.

ಇನ್ನು ಮಲ್ಟಿ ಟಾಸ್ಕಿಂಗ್ ಸಿಬ್ಬಂದಿಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ಮಂಡಳಿಯಿಂದ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಮೇಲೆ ಹೇಳಿದ ಭಾಷೆಗಳು ಕಡ್ಡಾಯವಾಗಿವೆ. ಹಾಗೂ ಕಂಪ್ಯೂಟರ್ ಜ್ಞಾನ ಇರಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...