alex Certify ಶಿಕ್ಷಕ ಸಮುದಾಯಕ್ಕೆ ಕೇಂದ್ರ ಸರ್ಕಾರದಿಂದ ಭರ್ಜರಿ ʼಬಂಪರ್ʼ‌ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಕ ಸಮುದಾಯಕ್ಕೆ ಕೇಂದ್ರ ಸರ್ಕಾರದಿಂದ ಭರ್ಜರಿ ʼಬಂಪರ್ʼ‌ ಸುದ್ದಿ

सांकेतिक तस्वीर

ಹೊಸ ಶಿಕ್ಷಣ ನೀತಿಯನ್ನು ಸರ್ಕಾರ ಅಂಗೀಕರಿಸಿದೆ. ಇದ್ರಲ್ಲಿ ಶಿಕ್ಷಕರ ಜವಾಬ್ದಾರಿಗಳು ಹೆಚ್ಚಾಗಲಿವೆ. ಆದ್ರೆ ಅವರಿಗೆ ಅನೇಕ ಸೌಲಭ್ಯಗಳು ಸಿಗಲಿವೆ. ಅನಗತ್ಯ ವರ್ಗಾವಣೆ, ಬೋಧಕೇತರ ಚಟುವಟಕೆಯಿಂದ ಮುಕ್ತಿ ಸಿಗಲಿದೆ.

ಶಿಕ್ಷಕರನ್ನು ಪ್ರೋತ್ಸಾಹಿಸುವ ಕಾರ್ಯ ನಡೆಯಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಹೆಚ್ಚಿನ ವಸತಿ ಭತ್ಯೆ ಕೂಡ ನೀಡಲಾಗುವುದು. ವಿಶೇಷ ಸಂದರ್ಭದಲ್ಲಿ ಮಾತ್ರ ಶಿಕ್ಷಕರ ವರ್ಗಾವಣೆ ನಡೆಯಲಿದೆ. ಶಿಕ್ಷಕರ ವರ್ಗಾವಣೆಯನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಟ್ಟುನಿಟ್ಟಾದ ಮಾನದಂಡದಲ್ಲಿ ಮಾಡಲಿವೆ. ಎಲ್ಲಾ ವರ್ಗಾವಣೆಗಳು ಗಣಕೀಕೃತ ವ್ಯವಸ್ಥೆಯಡಿಯಲ್ಲಿರುತ್ತವೆ.

ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿ ವೇತನ ನೀಡಲಾಗುವುದು. ನಾಲ್ಕು ವರ್ಷಗಳ ಬಿ.ಎಡ್. ಅಧ್ಯಯನಕ್ಕೆ ಆಸಕ್ತಿ ಹೆಚ್ಚಿಸಲು ವಿದ್ಯಾರ್ಥಿ ವೇತನ ನೀಡಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಮೆರಿಟ್ ಆಧಾರಿತ ವಿದ್ಯಾರ್ಥಿ ವೇತನ ನೀಡುವ ಜೊತೆಗೆ ಅಧ್ಯಯನದ ನಂತ್ರ ಸ್ಥಳೀಯ ನಿಯೋಜನೆಗೆ ಆದ್ಯತೆ ನೀಡಲಾಗುವುದು. ವಿಶೇಷವಾಗಿ ಮಹಿಳೆಯರಿಗೆ ಇದ್ರಿಂದ ಅನುಕೂಲವಾಗಲಿದೆ.

ಶಿಕ್ಷಕರು ಇಷ್ಟು ದಿನ ಬೋಧಕೇತರ ಚಟುವಟಕೆಯಲ್ಲಿ ನಿರತರಾಗಿದ್ದರು.ಇನ್ಮುಂದೆ ಶಿಕ್ಷಕರು ಭೋಧನೆಗೆ ಹೆಚ್ಚು ಗಮನ ನೀಡಲಿದ್ದಾರೆ. ಮಕ್ಕಳ ಅಭಿವೃದ್ಧಿಗೆ ಶಿಕ್ಷಕರು ಗಮನ ನೀಡಲಿದ್ದಾರೆ. ಸಂದರ್ಶನದಲ್ಲಿ ಭಾಷೆಯನ್ನು ಪರೀಕ್ಷಿಸಲಾಗುವುದು. ನೇಮಕಾತಿಯಲ್ಲಿ ಸ್ಥಳೀಯ ಭಾಷಾ ಜ್ಞಾನ ಪರೀಕ್ಷಿಸಲಾಗುವುದು. ಇದರಿಂದ ಶಿಕ್ಷಕರು ಮಕ್ಕಳ ಮನಸ್ಸನ್ನು ಸುಲಭವಾಗಿ ಅರ್ಧ ಮಾಡಿಕೊಳ್ಳಬಹುದಾಗಿದೆ.  ಖಾಸಗಿ ಶಾಲೆಗಳಲ್ಲಿ ಬೋಧಿಸುವ ಶಿಕ್ಷಕರು ಸಹ ಈ ಮಾನದಂಡವನ್ನು ಅನುಸರಿಸಬೇಕಾಗುತ್ತದೆ.

ಶಾಲೆಯಲ್ಲಿ ಕುಡಿಯುವ ನೀರು, ಶೌಚಾಲಯಗಳು, ಸ್ವಚ್ಛತೆ, ಮುಕ್ತ ಸ್ಥಳ, ಕಂಪ್ಯೂಟರ್, ಇಂಟರ್ನೆಟ್, ಗ್ರಂಥಾಲಯ ಮತ್ತು ಆಟದ ಸೌಲಭ್ಯಗಳನ್ನು ಒದಗಿಸಲಾಗುವುದು. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಮಾನ ಹಕ್ಕು ನೀಡಲಾಗುವುದು.

ಶಿಕ್ಷಕರಿಗೆ ಸಹಾಯ ಮಾಡಲು ಸಲಹೆಗಾರರು, ಸಾಮಾಜಿಕ ಕಾರ್ಯಕರ್ತರು, ತಾಂತ್ರಿಕ ತಜ್ಞರ ತಂಡಗಳು ಇರಲಿವೆ. ಸ್ಥಳೀಯ ಮಟ್ಟದಲ್ಲಿ ಮಾಸ್ಟರ್ ಇನ್ಸ್ಟ್ರಕ್ಟರ್ ನೇಮಿಸಬೇಕಾಗುತ್ತದೆ. ಈ ಜನರು ಕಲೆ, ಕೃಷಿ ಮತ್ತು ಸ್ಥಳೀಯವಾಗಿ ಪ್ರಸಿದ್ಧವಾಗಿರುವ ಇತರ ತಂತ್ರಗಳ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...