alex Certify ರೈಲು ಪ್ರಯಾಣಿಕರಿಗೆ ಇಲ್ಲಿದೆ ಒಂದು ಬಹುಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಪ್ರಯಾಣಿಕರಿಗೆ ಇಲ್ಲಿದೆ ಒಂದು ಬಹುಮುಖ್ಯ ಮಾಹಿತಿ

ಲಾಕ್ ಡೌನ್ ನಿಂದಾಗಿ ರೈಲು ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ನಾಲ್ಕನೇ ಹಂತದ ಲಾಕ್ ಡೌನ್ ನಲ್ಲಿ ಸಾಕಷ್ಟು ವಿನಾಯ್ತಿ ನೀಡಲಾಗಿದೆ. ಇದರಲ್ಲಿ ರೈಲು ಸಂಚಾರ ಕೂಡ ಒಂದು. ಜೂನ್ ಒಂದರಿಂದ ಪ್ರಯಾಣಿಕರಿಗಾಗಿ 200 ಹೆಚ್ಚುವರಿ ರೈಲುಗಳು ಬಿಡಲು ಮುಂದಾಗಿದೆ ಸರ್ಕಾರ. ಈ ರೈಲು ಟಿಕೆಟ್ ಬುಕ್ಕಿಂಗ್ ನಲ್ಲಿ ಬದಲಾವಣೆ ಮಾಡಲಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಮೂರು ತಿಂಗಳ ಮುಂಚಿತವಾಗಿ ಟಿಕೆಟ್ ಬುಕ್ಕಿಂಗ್ ಮಾಡುವ ಅವಕಾಶವನ್ನು ರೈಲ್ವೇ ಇಲಾಖೆ ನೀಡಿದೆ. ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ ಇನ್ಮುಂದೆ ಮೂರು ತಿಂಗಳ ಮುಂಚಿತವಾಗಿ ನೀವು ಹೋಗುವ ಸ್ಥಳಗಳಿಗೆ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ. ಇನ್ನು ರೈಲುಗಳಲ್ಲಿ ಪ್ರಸ್ತುತ ಸೀಟುಗಳನ್ನು ಕಾಯ್ದಿರಿಸುವ ಸೇವೆ, ತ್ವರಿತ ಕೋಟಾ ಬುಕಿಂಗ್ ಮತ್ತು ಮಧ್ಯಮ ನಿಲ್ದಾಣಗಳಿಂದ ಟಿಕೆಟ್ ಕಾಯ್ದಿರಿಸುವ ಸೇವೆಯನ್ನು ಪ್ರಾರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಒಂದು ತಿಂಗಳು ಮುಂಚಿತವಾಗಿ ಟಿಕೆಟ್ ಬುಕ್ ಮಾಡುವ ಅವಕಾಶ ಮಾತ್ರ ಇತ್ತು. ಆದರೆ ಇದೀಗ ಮೂರು ತಿಂಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬಹುದಾಗಿದೆ. ಈ ಮೂಲಕ ಮೇ 31 ರಿಂದ ರೈಲ್ವೆ ಟಿಕೆಟ್ ಬುಕಿಂಗ್ ನಿಯಮ ಬದಲಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...