ಕೊರೊನಾದಿಂದಾಗಿ ಮಾರ್ಚ್ ತಿಂಗಳಲ್ಲಿ ಮುಚ್ಚಿದ್ದ ಶಾಲಾ ಕಾಲೇಜುಗಳು ಇನ್ನೂ ತೆರೆದಿಲ್ಲ. ನಾಲ್ಕನೇ ಹಂತದ ಲಾಕ್ಡೌನ್ನಲ್ಲಿ ಒಂದಿಷ್ಟು ಚಟುವಟಿಕೆಗಳಿಗೆ ವಿನಾಯ್ತಿ ನೀಡಿದರೂ ಶಾಲಾ-ಕಾಲೇಜು ತೆರೆಯಲು ಅನುಮತಿ ನೀಡಿಲ್ಲ.
ಹೀಗಾಗಿ ಯಾವಾಗ ಶಾಲಾ-ಕಾಲೇಜು ಎಂಬ ಪ್ರಶ್ನೆ ಉದ್ಭವವಾಗಿತ್ತು. ಆದರೆ ಇತ್ತೀಚೆಗೆ ಜುಲೈನಿಂದ ಶಾಲಾ ಕಾಲೇಜುಗಳು ತೆರೆಯಬಹದು ಎಂದು ಊಹಿಸಲಾಗಿತ್ತು. ಆದರೆ ಇದೀಗ ಕೇಂದ್ರ ಗೃಹ ಇಲಾಖೆ ಟ್ವಿಟ್ ಮೂಲಕ ಸ್ಪಷ್ಟನೆ ನೀಡಿದೆ.
ಹೌದು, ಕೊರೊನಾ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಯಾವಾಗ ಓಪನ್ ಮಾಡಬೇಕು ಎಂಬುದು ಇನ್ನು ನಿರ್ಧರಿಸಿಲ್ಲ. ಆದರೆ ಕೇಂದ್ರ ಸರ್ಕಾರ ಶಾಲಾ-ಕಾಲೇಜು ತೆರೆಯಲು ಅನುಮತಿ ನೀಡಿದೆ ಎಂದು ಕೆಲ ಮಾಧ್ಯಮದಲ್ಲಿ ವರದಿಯಾಗಿವೆ. ಆದರೆ ಇನ್ನೂ ಯಾವ ನಿರ್ಧಾರವನ್ನು ನಾವು ತೆಗೆದುಕೊಂಡಿಲ್ಲ. ದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳ ಮೇಲೆ ನಿರ್ಬಂಧ ಮುಂದುವರೆಯಲಿದೆ ಎಂದು ಸ್ಪಷ್ಟನೆ ನೀಡಿದೆ ಕೇಂದ್ರ ಗೃಹ ಇಲಾಖೆ.
ಶಿಕ್ಷಣ ತಜ್ಞರ ಸಮಿತಿಯೊಂದು ದೇಶಾದ್ಯಂತ ಜುಲೈನಿಂದಲೇ ಶಾಲೆಗಳನ್ನು ಪುನಾರಂಭ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಈ ಹಿನ್ನೆಲೆಯಲ್ಲೇ ಜುಲೈನಲ್ಲಿ ಶಾಲಾ-ಕಾಲೇಜುಗಳು ತೆರೆಯುತ್ತವೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಬಗ್ಗೆ ಇದೀಗ ಕೇಂದ್ರವೇ ಸ್ಪಷ್ಟನೆ ನೀಡಿದೆ.