alex Certify ಪ್ರವಾಸದ ಪ್ಲಾನ್ ನಲ್ಲಿದ್ರೆ ಇದನ್ನೊಮ್ಮೆ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸದ ಪ್ಲಾನ್ ನಲ್ಲಿದ್ರೆ ಇದನ್ನೊಮ್ಮೆ ಓದಿ

ಕೊರೊನಾ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸೋದ್ಯಮದ ಮೇಲೆ ಪ್ರಭಾವ ಬೀರಿದೆ. ನಿಧಾನವಾಗಿ ಅನೇಕ ರಾಜ್ಯಗಳು ಗಡಿ ಬಾಗಿಲು ತೆರೆದಿವೆ. ಕೊರೊನಾ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯಗಳು ಪ್ರವಾಸಿಗರಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿವೆ. ಕೊರೊನಾ ಮಧ್ಯೆಯೂ ಪ್ರವಾಸಕ್ಕೆ ತೆರಳಲು ಮನಸ್ಸು ಮಾಡಿದ್ರೆ ಆಯಾ ರಾಜ್ಯಗಳ ನಿಯಮಗಳನ್ನು ತಿಳಿದುಕೊಳ್ಳಬೇಕು.

ಆಂಧ್ರಪ್ರದೇಶ, ತೆಲಂಗಾಣಕ್ಕೆ ಬರುವ ಬೇರೆ ರಾಜ್ಯಗಳ ಪ್ರವಾಸಿಗರು 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರಬೇಕು. ಅಂತರ ರಾಜ್ಯ ಪ್ರಯಾಣವನ್ನು ನಿಷೇಧಿಸಲಾಗಿಲ್ಲ.

ಅರುಣಾಚಲ ಪ್ರದೇಶಕ್ಕೆ ಪ್ರವೇಶಿಸುವ ಪ್ರಯಾಣಿಕರು ರಾಜ್ಯದ ಚೆಕ್ ಗೇಟ್ ಮತ್ತು ಹೆಲಿಪ್ಯಾಡ್‌ನಲ್ಲಿ ಕ್ಷಿಪ್ರ ಪ್ರತಿಜನಕ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಕೊರೊನಾ ಸಕಾರಾತ್ಮಕವಾಗಿದ್ದರೆ 14 ದಿನಗಳ ಕಾಲ ಮನೆ ಅಥವಾ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಬೇಕು.

ಅಸ್ಸಾಂನಲ್ಲಿ ಪ್ರಯಾಣಕ್ಕೆ ಯಾವುದೇ ನಿರ್ಬಂಧವಿಲ್ಲ. 96 ಗಂಟೆಗಳಲ್ಲಿ ರಾಜ್ಯಕ್ಕೆ ಮರಳುವ ಜನರು ಪ್ರತಿ ಜನಕ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಪರೀಕ್ಷೆ ಫಲಿತಾಂಶ ಸಕಾರಾತ್ಮಕವಾಗಿದ್ದರೆ 10 ದಿನ ಕ್ವಾರಂಟೈನ್ ನಲ್ಲಿರಬೇಕು.

ಛತ್ತೀಸ್ಗಢನಲ್ಲಿ ಇ-ಪಾಸ್ ಅಗತ್ಯವಿಲ್ಲ. ಇತರ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ 14 ದಿನಗಳ ಕ್ವಾರಂಟೈನ್ ಅಗತ್ಯ. ರಾಯ್ಪುರ ಸೇರಿದಂತೆ ಹಲವಾರು ಜಿಲ್ಲೆಗಳನ್ನು ಕಂಟೈನ್‌ಮೆಂಟ್ ವಲಯಗಳಾಗಿ ಘೋಷಿಸಲಾಗಿದೆ.

ಗೋವಾಕ್ಕೆ ಇತರ ರಾಜ್ಯಗಳಿಂದ ಬರುವ ಪ್ರಯಾಣಿಕರು ಕೊರೊನಾ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ. ಪ್ರಯಾಣಿಕರು ಇ-ಪಾಸ್ ತರುವ ಅಗತ್ಯವಿಲ್ಲ. ಬಾರ್‌ಗಳು ತೆರೆದಿದ್ದು, ಗ್ರಾಹಕರು ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ. ಬೀಚ್ ಷಾಕ್ಸ್ ಮತ್ತು ಕ್ಯಾಸಿನೊಗಳು ಮುಚ್ಚಿವೆ.

ಗುಜರಾತ್ ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಅನಿವಾರ್ಯ. ಕ್ವಾರಂಟೈನ್ ಇಲ್ಲ. ಅಹಮದಾಬಾದ್ ಮತ್ತು ಸೂರತ್ ಬಸ್ಸುಗಳು ಶೇಕಡಾ 50 ರಷ್ಟು ಪ್ರಯಾಣಿಕರ ಸಾಮರ್ಥ್ಯದಲ್ಲಿ ಚಲಿಸಬೇಕಾಗುತ್ತದೆ. ಇತರ ಸ್ಥಳಗಳಲ್ಲಿ ಬಸ್ಸುಗಳು ಶೇಕಡಾ 60 ರಷ್ಟು ಪ್ರಯಾಣಿಕರ ಸಾಮರ್ಥ್ಯದಲ್ಲಿ ಚಲಿಸುತ್ತವೆ.

ಹಿಮಾಚಲ ಪ್ರದೇಶಕ್ಕೆ ಬರುವ ಪ್ರವಾಸಿಗರು ರಾಜ್ಯದ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳುವುದು ಅಥವಾ ಗಡಿಯನ್ನು ಪ್ರವೇಶಿಸುವ ಸಮಯದಲ್ಲಿ ಕೊರೊನಾ ನಕಾರಾತ್ಮಕ ವರದಿ ನೀಡುವ ಅಗತ್ಯವಿಲ್ಲ. ಆದರೆ ಅಂತರರಾಜ್ಯ ಬಸ್ ಸೇವೆಯನ್ನು ಇಲ್ಲಿ ಸ್ಥಗಿತಗೊಳಿಸಲಾಗಿದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಅಕ್ಟೋಬರ್ ಅಂತ್ಯದವರೆಗೆ ಮುಚ್ಚಲಾಗಿದೆ. ಪ್ರವಾಸಿಗರು ಆರೋಗ್ಯ ಸೇತು ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ.

ಜಾರ್ಖಂಡ್ನಲ್ಲಿ ಅಂತರರಾಜ್ಯ ಬಸ್ ಸೇವೆಗಳನ್ನು ಮುಚ್ಚಲಾಗಿದೆ. ಹೋಟೆಲ್‌ಗಳು, ವಸತಿಗೃಹಗಳು, ರೆಸ್ಟೋರೆಂಟ್‌ಗಳು ಮತ್ತೆ ತೆರೆಯುತ್ತಿವೆ. ಎಲ್ಲಾ ಪ್ರಯಾಣಿಕರು ತಮ್ಮ ವೈಯಕ್ತಿಕ ವಿವರಗಳನ್ನು ಅಧಿಕೃತ ವೆಬ್‌ಸೈಟ್ www.jharkhandtravel.nic.in ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.

ಜಮ್ಮು ಮತ್ತು ಕಾಶ್ಮೀರಕ್ಕೆ  ಬರುವ ಪ್ರವಾಸಿಗರು ಕೋವಿಡ್ -19 ಆಂಟಿಜೆನ್ ಪರೀಕ್ಷೆಗೆ ಒಳಗಾಗುವುದು ಕಡ್ಡಾಯವಾಗಿದೆ. ವಿಮಾನ ಮತ್ತು ರೈಲು ಪ್ರಯಾಣಿಕರು 14 ದಿನಗಳ ಕಾಲ ಕ್ವಾರಂಟೈನ್ ಆಗಬೇಕು.ಪ್ರಯಾಣಿಕರ ಫೋನ್‌ನಲ್ಲಿ ಆರೋಗ್ಯ ಸೇತು ಆಪ್ ಇರುವುದು ಮುಖ್ಯ.

ಕರ್ನಾಟಕ್ಕೆ ಇತರ ರಾಜ್ಯಗಳಿಂದ ಬರುವ ಪ್ರಯಾಣಿಕರು 14 ದಿನಗಳವರೆಗೆ ಕ್ವಾರಂಟೈನ್ ನಲ್ಲಿರುವುದು ಕಡ್ಡಾಯವಿಲ್ಲ. ಪ್ರವಾಸಿಗರು ಸೇವಾ ಸಿಂಧೂ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ.

ಕೇರಳ ಪ್ರವಾಸಿಗರು ಜಾಗ್ರತಾ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಇದು ಎಂಟ್ರಿ ಪಾಸ್ ಆಗಿ ಕಾರ್ಯನಿರ್ವಹಿಸುತ್ತದೆ. ವಿದೇಶದಿಂದ ಅಥವಾ ದೂರದಿಂದ ಬರುವವರು 14 ದಿನ ಕ್ವಾರಂಟೈನ್ ನಲ್ಲಿರಬೇಕು.

ಮಹಾರಾಷ್ಟ್ರದಲ್ಲಿ ಅಂತರರಾಜ್ಯ ಪ್ರಯಾಣವನ್ನು ನಿಷೇಧಿಸಲಾಗಿದೆ. ರಾಜ್ಯದಲ್ಲಿ ವಾಸಿಸುವ ಜನರು ಇಲ್ಲಿ ಸಂಚರಿಸಲು ಯಾವುದೇ ನಿರ್ಬಂಧವಿಲ್ಲ.

ಮಿಜೋರಾಂನಲ್ಲಿ ಸೋಮವಾರ, ಗುರುವಾರ ಮತ್ತು ಶನಿವಾರದಂದು ಮಾತ್ರ ಪ್ರಯಾಣಿಕರಿಗೆ ವಿಮಾನ ಸೌಲಭ್ಯ ಲಭ್ಯವಿದೆ. ಬೆಳಿಗ್ಗೆ 8.30 ರಿಂದ 4.30 ರವರೆಗೆ ಕರ್ಫ್ಯೂ ಮುಂದುವರಿಯಲಿದೆ

ಎಲ್ಲಾ ಪ್ರವಾಸಿಗರು ರಾಜಸ್ತಾನಕ್ಕೆ ಬರಬಹುದು. ಜೈಪುರ, ಜೋಧ್‌ಪುರ, ಕೋಟಾ, ಅಜ್ಮೀರ್, ಅಲ್ವಾರ್, ಭಿಲ್ವಾರಾ, ಬಿಕಾನೆರ್, ಉದಯಪುರ, ಸಿಕಾರ್, ಪಾಲಿ ಮತ್ತು ನಾಗೌರ್ ಸೇರಿದಂತೆ 11 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸೆಕ್ಷನ್ 144 ವಿಧಿಸಲಾಗಿದೆ. ಕ್ಯಾಬ್, ಬಸ್, ಆಟೋರಿಕ್ಷಾ ಸೇರಿದಂತೆ ಎಲ್ಲಾ ವಾಹನಗಳು ಓಡುತ್ತಿವೆ.

ಸಿಕ್ಕಿಂ ಹೋಟೆಲ್‌ಗಳು, ಹೋಂಸ್ಟೇಗಳು ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಇತರ ಸೇವೆಗಳು ಅಕ್ಟೋಬರ್ 10 ರಿಂದ ಪುನರಾರಂಭಗೊಳ್ಳಲಿವೆ. ಸೆಪ್ಟೆಂಬರ್ 27 ರಿಂದ ಹೋಟೆಲ್ ಮತ್ತು ಹೋಂಸ್ಟೇಗಾಗಿ ಬುಕಿಂಗ್ ಪ್ರಾರಂಭವಾಗಿದೆ. ಅಕ್ಟೋಬರ್ 1 ರಿಂದ ಪಶ್ಚಿಮ ಬಂಗಾಳದ ಗಡಿ ತೆರೆಯಲಿದೆ.

ತಮಿಳುನಾಡಿಗೆ ಇತರ ರಾಜ್ಯಗಳಿಂದ ರೈಲು, ವಿಮಾನ ಅಥವಾ ರಸ್ತೆ ಮೂಲಕ ಬರುವವರಿಗೆ ಇ-ಪಾಸ್ ಕಡ್ಡಾಯವಾಗಿದೆ. ಕ್ಲಬ್‌ಗಳು, ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಅಗತ್ಯ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸಲಿವೆ.

ಉತ್ತರ ಪ್ರದೇಶದ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಪರೀಕ್ಷೆ ನಡೆಯುತ್ತದೆ. 14 ದಿನ ಕ್ವಾರಂಟೈನ್ ಕಡ್ಡಾಯವಾಗಿದೆ.

ಉತ್ತರಾಖಂಡಕ್ಕೆ ಬೇರೆ ರಾಜ್ಯದಿಂದ ಬರುವವರು www.smartcitydehonto.uk.gov.in  ಎಂಬ ವೆಬ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಪ್ರವಾಸಿಗರು ಎರಡು ದಿನ ಕ್ವಾರಂಟೈನ್ ನಲ್ಲಿರಬೇಕು. ಪ್ರವಾಸಿಗರು ಆರೋಗ್ಯ ಸೇತು ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಪಶ್ಚಿಮ ಬಂಗಾಳದಲ್ಲಿ ವಿಮಾನಗಳ ಹಾರಾಟ ಶುರುವಾಗಿಲ್ಲ. ವಿಶೇಷ ರೈಲು ಮಾತ್ರ ಓಡಾಟ ನಡೆಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...