alex Certify ತಂದೆ – ಸಹೋದರನ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದ ಯುವತಿ ಬಣ್ಣ ಬಯಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ – ಸಹೋದರನ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದ ಯುವತಿ ಬಣ್ಣ ಬಯಲು

ಹಿಂದಿನ ವರ್ಷ ಉನ್ನಾವೋದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣವೊಂದು ದಾಖಲಾಗಿತ್ತು. ಮದುವೆಯಾದ 19 ದಿನಕ್ಕೆ ಯುವತಿ ಮಗುವಿಗೆ ಜನ್ಮ ನೀಡಿದ್ದಳು. ನಂತ್ರ ತಂದೆ-ಸಹೋದರ ಸೇರಿ 10 ಮಂದಿ ಮೇಲೆ ಸಾಮೂಹಿಕ ಅತ್ಯಾಚಾರದ ದೂರು ನೀಡಿದ್ದಳು. ಈ ಪ್ರಕರಣ ಬಣ್ಣ ಈಗ ಬಯಲಾಗಿದೆ.

ಮೂರು ವರ್ಷಗಳಿಂದ ಯುವತಿ ವ್ಯಕ್ತಿಯೊಬ್ಬನ ಪ್ರೀತಿಯಲ್ಲಿದ್ದಳು. ಯುವತಿ ಗರ್ಭ ಧರಿಸಿದ ವಿಷ್ಯ ಮನೆಯವರಿಗೆ ತಿಳಿಯಿತು. ತಕ್ಷಣ ಬೇರೆ ಹುಡುಗನ ಜೊತೆ ಮದುವೆ ಮಾಡಿಸಿದ್ದರು. 7 ತಿಂಗಳ ಗರ್ಭಿಣಿಗೆ ಮದುವೆಯಾದ 19ನೇ ದಿನಕ್ಕೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪ್ಪು ಮುಚ್ಚಿಡಲು ಮಹಿಳೆ, ತಂದೆ ಹಾಗೂ ಸಹೋದರ ಸೇರಿ 10 ಮಂದಿ ಮೇಲೆ ಸಾಮೂಹಿಕ ಅತ್ಯಾಚಾರದ ದೂರು ದಾಖಲಿಸಿದ್ದಳು.

ಪೊಲೀಸರು ಈಗ ವಿಚಾರಣೆ ಮುಗಿಸಿದ್ದಾರೆ. ಮಗುವಿನ ಡಿಎನ್ಎ ಪರೀಕ್ಷೆ ನಡೆಸಲಾಗಿದೆ. ಪರೀಕ್ಷಾ ವರದಿಯಲ್ಲಿ ಮಗು ಯಾರದ್ದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮಗು ತಂದೆ-ಸಹೋದರನದ್ದಲ್ಲ. ಆಕೆ ಪ್ರೇಮಿಯದ್ದು ಎಂಬುದು ಗೊತ್ತಾಗ್ತಿದ್ದಂತೆ ಯುವತಿ ತಪ್ಪೊಪ್ಪಿಕೊಂಡಿದ್ದಾಳೆ. ಪ್ರೇಮಿ ಹೇಳಿಕೆ ಮೇರೆಗೆ ಹೀಗೆ ನಡೆದುಕೊಂಡಿದ್ದೇನೆ ಎಂದಿದ್ದಾಳೆ. ಈಗ ಪ್ರೇಮಿಯನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...