alex Certify ಗಳಿಕೆಗೆ ಹೊಸ ಮಾರ್ಗ ಕಂಡುಕೊಂಡ ಸೆಕ್ಸ್ ವರ್ಕರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಳಿಕೆಗೆ ಹೊಸ ಮಾರ್ಗ ಕಂಡುಕೊಂಡ ಸೆಕ್ಸ್ ವರ್ಕರ್ಸ್

ದೇಶದಲ್ಲಿ ಅನ್ ಲಾಕ್ ಜಾರಿಯಲ್ಲಿದ್ದರೂ ಕೊರೊನಾ ವೈರಸ್‌ ಅಬ್ಬರ ನಿಲ್ಲಿಸಿಲ್ಲ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಸೆಕ್ಸ್ ವರ್ಕರ್ಸ್ ಕೂಡ ಇದರಿಂದ ಹೊರತಾಗಿಲ್ಲ. ಕೊರೊನಾ ಮಧ್ಯೆ ಜೀವನ ಸಾಗಿಸಲು ಸೆಕ್ಸ್ ವರ್ಕರ್ಸ್ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಸೆಕ್ಸ್ ವರ್ಕರ್ಸ್ ಗ್ರಾಹಕರ ಜೊತೆ ವಿಡಿಯೋ ಚಾಟ್‌ನಲ್ಲಿ ಮಾತನಾಡುತ್ತಾರೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಅವರ ಫೋಟೋಗಳನ್ನು ಕಳುಹಿಸುತ್ತಾರೆ.  ದೈಹಿಕ ಸಂಪರ್ಕವಿಲ್ಲದೆ ಡಾನ್ಸ್ ಕೆಲ ಫೋಸ್ ವಿಡಿಯೋಗಳನ್ನು ಕಳುಹಿಸುತ್ತಿದ್ದಾರೆ. ಇದಕ್ಕೆ ಸೆಕ್ಸ್ ವರ್ಕರ್ಸ್ ಆನ್‌ಲೈನ್‌ನಲ್ಲಿ ಪಾವತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಕೋಲ್ಕತ್ತಾದ ರೆಡ್ ಲೈಟ್ ಪ್ರದೇಶದಲ್ಲಿ ಲೈಂಗಿಕ ಕಾರ್ಯಕರ್ತೆಯರ ಜೀವನ ದುಸ್ಥರವಾಗಿದೆ. ಸರ್ಕಾರ ಸಹಾಯ ಮಾಡಲಿಲ್ಲ. ಗ್ರಾಹಕರು ಸಹ ಬರುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಲೈಂಗಿಕ ಕಾರ್ಯಕರ್ತರು ತಮ್ಮ ಉಳಿವಿಗಾಗಿ ಫೋನ್ ಮೊರೆ ಹೋಗಿದ್ದಾರೆ. ಫೋನ್ ಸೆಕ್ಸ್  ಸದ್ಯ ಇವರ ಹೊಟ್ಟೆ ತುಂಬಿಸುತ್ತಿದೆ. ಸುಮಾರು 30 ನಿಮಿಷಗಳ ಕಾಲ ನಡೆಯುವ ವೀಡಿಯೊ ಕರೆಗಾಗಿ ಲೈಂಗಿಕ ಕಾರ್ಯಕರ್ತರು 500 ರೂಪಾಯಿಗಳನ್ನು ಪಡೆಯುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...