alex Certify ಏರ್ ಇಂಡಿಯಾ ಮಧ್ಯದ ಸೀಟ್ ಬುಕ್ಕಿಂಗ್ ವಿಚಾರ: ಸುಪ್ರೀಂನಿಂದ ಮಹತ್ವದ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏರ್ ಇಂಡಿಯಾ ಮಧ್ಯದ ಸೀಟ್ ಬುಕ್ಕಿಂಗ್ ವಿಚಾರ: ಸುಪ್ರೀಂನಿಂದ ಮಹತ್ವದ ಆದೇಶ

ವಿಮಾನ ಪ್ರಯಾಣದ ವೇಳೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್  ಮಹತ್ವದ ತೀರ್ಪು ನೀಡಿದೆ. ಈಗಾಗಲೇ ಬುಕಿಂಗ್ ಮುಗಿದಿರುವುದರಿಂದ ಮುಂದಿನ 10 ದಿನಗಳವರೆಗೆ ಏರ್ ಇಂಡಿಯಾ ಎಂದಿನಂತೆ ವಿಮಾನ ಹಾರಾಟ ನಡೆಸಲಿದೆ. ಆದ್ರೆ 10 ದಿನಗಳ  ನಂತರ ಮಧ್ಯದ ಸೀಟುಗಳ ಬುಕ್ಕಿಂಗ್ ಗೆ ಅವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅಂತರರಾಷ್ಟ್ರೀಯ ವಿಮಾನಯಾನಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಪ್ರತ್ಯೇಕ ಆದೇಶ ಹೊರಡಿಸುವಂತೆ ಬಾಂಬೆ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರ ಮತ್ತು ಏರ್ ಇಂಡಿಯಾ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು. ಮಧ್ಯದ ಸೀಟನ್ನು ಕಾಯ್ದಿರಿಸದಂತೆ ಹೈಕೋರ್ಟ್ ಆದೇಶಿಸಿತ್ತು.

ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸಿದ್ಧವಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಈಗಾಗಲೇ ಮಧ್ಯದ ಸೀಟ್ ಬುಕ್ ಆಗಿರುವ ಕಾರಣ 10 ದಿನಗಳವರೆಗೆ ಏರ್ ಇಂಡಿಯಾ ಎಂದಿನಂತೆ ವಿಮಾನ ಹಾರಾಟ ನಡೆಸಬಹುದು. ಆದ್ರೆ 10 ದಿನಗಳ ನಂತ್ರ ಮಧ್ಯದ ಸೀಟ್ ಬುಕ್ಕಿಂಗ್ ಗೆ ಅವಖಾಶ ನೀಡಬಾರದು ಎಂದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...