alex Certify ಈ ವಿಷ್ಣುವಿಗೆ ರಾಜಮನೆತನದ ಪೂಜೆ ಇಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಷ್ಣುವಿಗೆ ರಾಜಮನೆತನದ ಪೂಜೆ ಇಲ್ಲ

ನೇಪಾಳದಲ್ಲಿರುವ ದೇವಾಲಯವೊಂದು ಹಲವು ಕಾರಣಗಳಿಗೆ ಪ್ರಸಿದ್ಧಿ ಪಡೆದಿದೆ. ಇದರ ವಿಶೇಷವೆಂದರೆ ಇಲ್ಲಿಗೆ ನಾಗರಿಕರು ಭೇಟಿ ನೀಡುತ್ತಾರೆ ಅದರೆ ನೇಪಾಳದ ರಾಜಮನೆತನದವರು ಮಾತ್ರ ಇಲ್ಲಿಗೆ ಭೇಟಿ ನೀಡುವುದಿಲ್ಲ.

ಈ ದೇವಾಲಯ ಇರುವುದು ಕಠ್ಮಂಡುವಿನಲ್ಲಿ. ಇದರ ಹೆಸರು ಬುದ್ಧ ನೀಲಕಂಠ ದೇವಾಲಯ. ಕಠ್ಮಂಡುವಿನಿಂದ 8 ಕಿಮಿ ದೂರದಲ್ಲಿರುವ ಶಿವಪುರಿ ಬೆಟ್ಟದ ತಪ್ಪಲಿನಲ್ಲಿ ಈ ದೇಗುಲವಿದೆ. ಹೆಸರು ಕೇಳಿ ಇದು ಬುದ್ಧ ದೇವನ ದೇವಾಲಯ ಎಂದುಕೊಳ್ಳದಿರಿ. ಇದು ನೀಲಿ ಬಣ್ಣದ ವಿಗ್ರಹವಿರುವ ವಿಷ್ಣು ದೇವಾಲಯವಾಗಿದೆ.

ಈ ದೇವಾಲಯದ ವಿಗ್ರಹವನ್ನು ನೋಡಿದ ತಕ್ಷಣ ರಾಜ ಪರಿವಾರದ ಮಂದಿ ಸಾಯುತ್ತಾರೆ. ಹಾಗಾಗಿ ಇಲ್ಲಿನ ವಿಗ್ರಹಕ್ಕೆ ರಾಜ ಮನೆತನದವರು ಪೂಜೆ ಸಲ್ಲಿಸುವುದಿಲ್ಲ. ಇಲ್ಲಿರುವ ವಿಗ್ರಹ 11 ಹಾವುಗಳ ಸುರುಳಿಯಲ್ಲಿ ಶ್ರೀ ವಿಷ್ಣು ಒಂದು ಕಾಲಿನ ಮೇಲೆ ಮತ್ತೊಂದು ಕಾಲನ್ನಿಟ್ಟು ಮಲಗಿದಂತೆ ಕಾಣಿಸುತ್ತದೆ. 5 ಮೀಟರ್ ಉದ್ದವಿರುವ ಈ ವಿಗ್ರಹ 13 ಮೀಟರ್ ಉದ್ದದ ಕೊಳದೊಳಗಿದೆ. ಇಲ್ಲಿ ವಿಷ್ಣುವಿನ ಕಾಲುಗಳು ಒಂದರ ಮೇಲೊಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...