alex Certify ಕೋವಿಡ್ ಲಸಿಕೆ ಉತ್ಪಾದನೆಯಲ್ಲಿ ಐದು ರಾಷ್ಟ್ರಗಳದ್ದೇ ಪಾರಮ್ಯ: ಭಾರತಕ್ಕೂ ಇದೆ ಇದರಲ್ಲಿ ಸ್ಥಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಲಸಿಕೆ ಉತ್ಪಾದನೆಯಲ್ಲಿ ಐದು ರಾಷ್ಟ್ರಗಳದ್ದೇ ಪಾರಮ್ಯ: ಭಾರತಕ್ಕೂ ಇದೆ ಇದರಲ್ಲಿ ಸ್ಥಾನ

ಜಾಗತಿಕವಾಗಿ ವಿಶ್ವ ವಾಣಿಜ್ಯ ಸಂಸ್ಥೆಯ ಐದು ಸದಸ್ಯ ರಾಷ್ಟ್ರಗಳು ಮಾತ್ರ ಈ ವರ್ಷ ಕೋವಿಡ್ -19 ಲಸಿಕೆಗಳ ಉತ್ಪಾದನೆಯ ಮುಕ್ಕಾಲು ಪಾಲು ಹೊಂದಲಿದೆ ಎಂದು ಡಬ್ಲ್ಯುಟಿಒ ಮಹಾನಿರ್ದೇಶಕರಾದ ಎನ್ ಗೊಜಿ ಒಕೊಂಜೊ-ಐವಾಲಾ ಹೇಳಿಕೆ ನೀಡಿದ್ದಾರೆ.

ಪ್ರಸ್ತುತ ಲಸಿಕೆ ಉತ್ಪಾದನೆಯು ಹೆಚ್ಚು ಕೇಂದ್ರೀಕೃತವಾಗಿದೆ. ಈ ವರ್ಷದಲ್ಲಿ ಶೇಕಡಾ 75ರಷ್ಟು ಲಸಿಕೆಗಳು ಚೀನಾ, ಭಾರತ, ಜರ್ಮನಿ, ಯುನೈಟೆಡ್ ಸ್ಟೇಟ್ಸ್ ಮತ್ತು ಫ್ರಾನ್ಸ್ (ಡಬ್ಲ್ಯುಟಿಒ ಸದಸ್ಯರಿಂದ) ಬರುತ್ತಿದೆ ಎಂದು ಉನ್ನತ ಮಟ್ಟದ ಸಂವಾದದಲ್ಲಿ ಅವರು‌ ಹೇಳಿದರು.

ಜಾಗತಿಕವಾಗಿ ಆರ್ಥಿಕ ಅಸಮಾನತೆಗೆ ಲಸಿಕೆ ವಿತರಣೆ ತಾರತಮ್ಯವೂ ಕಾರಣ ಎಂದು ಒಕೊಂಜೊ-ಐವಾಲಾ ಹೇಳಿದ್ದಾರೆ. ಅಭಿವೃದ್ಧಿ ಹೊಂದಿದ ಆರ್ಥಿಕತೆಗಳು ಶೀಘ್ರವಾಗಿ ಪರಿಸ್ಥಿತಿಯನ್ನು ಹಿಮ್ಮೆಟ್ಟುತ್ತಿವೆ ಮತ್ತು ಉಳಿದವುಗಳು ಹಿಂದುಳಿದಿವೆ ಎಂದು ಅಭಿಪ್ರಾಯಪಟ್ಟಿವೆ.

‘ಜಿನ್ನಾ ಹೌಸ್’​ನ್ನು ಕಲಾ ಕೇಂದ್ರವನ್ನಾಗಿಸುವಂತೆ ಬಿಜೆಪಿ ಮುಖಂಡರಿಂದ ಕೇಂದ್ರಕ್ಕೆ ಮನವಿ

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಪ್ರತಿ 100 ನಿವಾಸಿಗಳ ಪೈಕಿ ಶೇ.94ರಷ್ಟು ಲಸಿಕೆ ನೀಡಲಾಗುತ್ತದೆ. ಆಫ್ರಿಕಾದಲ್ಲಿ ಈ ಸಂಖ್ಯೆ ಶೇಕಡಾ 4.5ರಷ್ಟಿದೆ. ಕಡಿಮೆ ಆದಾಯದ ದೇಶಗಳಲ್ಲಿ ಇದು ಶೇಕಡಾ 1.6ರಷ್ಟಿದೆ.

ಆಫ್ರಿಕಾದಲ್ಲಿ 20 ಮಿಲಿಯನ್ ಜನರು, ಅಥವಾ ಜನಸಂಖ್ಯೆಯ 1.5 ಪ್ರತಿಶತದಷ್ಟು ಜನರಿಗೆ ಮಾತ್ರ ಪೂರ್ಣ ಲಸಿಕೆ ನೀಡಲಾಗುತ್ತಿದೆ. ಆದರೆ, ಇದೇ ಅವಧಿಯಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ 42 ಪ್ರತಿಶತದಷ್ಟು ಜನರಿಗೆ ಲಸಿಕೆ ಪೂರ್ಣಗೊಂಡಿದೆ. ನೈತಿಕ, ಮತ್ತು ಆರ್ಥಿಕ ಕಾರಣಗಳಿಗಾಗಿ ನಾವು ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...