alex Certify BIG NEWS: ಐದು ಲಕ್ಷ ರೂ.ಗಿಂತ ಹೆಚ್ಚಿನ ಬೆಲೆ ಆಭರಣ, ವಾಹನ ಖರೀದಿ ವೇಳೆ ನೀಡ್ಬೇಕು ‘ಆಧಾರ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಐದು ಲಕ್ಷ ರೂ.ಗಿಂತ ಹೆಚ್ಚಿನ ಬೆಲೆ ಆಭರಣ, ವಾಹನ ಖರೀದಿ ವೇಳೆ ನೀಡ್ಬೇಕು ‘ಆಧಾರ್’

ಆಧಾರ್‌ ಜೊತೆ ಪಾನ್ ಲಿಂಕ್ ಅನಿವಾರ್ಯವಾಗಿದೆ. ಜೂನ್ 30ರೊಳಗೆ ಪಾನ್-ಆಧಾರ್ ಲಿಂಕ್ ಆಗದೆ ಹೋದಲ್ಲಿ ಪಾನ್ ಕಾರ್ಡ್ ಅಮಾನ್ಯವಾಗಲಿದೆ. ಇದರಿಂದಾಗಿ ಬ್ಯಾಂಕಿಗೆ ಸಂಬಂಧಿಸಿದ ಅನೇಕ ಕೆಲಸಗಳಿಗೆ ಅಡ್ಡಿಯಾಗಲಿದೆ. ಅಮಾನ್ಯವಾದ ಪಾನ್ ಕಾರ್ಡ್ ಬಳಸಿದ್ರೆ ದಂಡ ವಿಧಿಸಲಾಗುವುದು. ಅಲ್ಲದೆ ಪಾನ್ ಇಲ್ಲದೆ ಅನೇಕ ಕೆಲಸಗಳು ನಿಲ್ಲಲಿವೆ.

ಪಾನ್-ಆಧಾರ್  ಲಿಂಕ್ ಆಗದೆ ಹೋದಲ್ಲಿ ಪಾನ್ ಅಮಾನ್ಯವಾಗುತ್ತದೆ. ಇದ್ರಿಂದ ಕೆವೈಸಿ ಸಹ ಅಮಾನ್ಯವಾಗಿರುತ್ತದೆ. ಅಮಾನ್ಯ ಪಾನ್ ಬಳಸುವುದು ಅಪರಾಧವಾಗುತ್ತದೆ. ಇದನ್ನು ಬಳಸಿದ್ರೆ 1 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ದಂಡ ತೆರಬೇಕಾಗುತ್ತದೆ. ಮ್ಯೂಚುವಲ್ ಫಂಡ್‌ನಲ್ಲಿ ಹಣ ಹೂಡಿಕೆ ಮಾಡಲು ಪಾನ್ ಕಡ್ಡಾಯವಾಗಿದೆ. ಪಾನ್ ಅಮಾನ್ಯವಾಗಿದ್ದರೆ ಎಸ್‌ಐಪಿ ಮೂಲಕ ಅಥವಾ ಬೇರೆ ಯಾವುದೇ ರೀತಿಯಲ್ಲಿ ಎಂಎಫ್‌ನಲ್ಲಿ ಹಣವನ್ನು ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ.

ಬ್ಯಾಂಕ್ ಖಾತೆ ತೆರೆಯಲು ಅಥವಾ 50,000 ರೂಪಾಯಿಗಿಂತ ಹೆಚ್ಚಿನ ಹಣವನ್ನು ಠೇವಣಿ ಇಡಲು ಮತ್ತು ಹಿಂಪಡೆಯಲು ಪಾನ್ ಅಗತ್ಯವಿದೆ. ಪಾನ್ ಅಮಾನ್ಯವಾದ್ರೆ ಇದು ಸಾಧ್ಯವಾಗುವುದಿಲ್ಲ.

ಐದು ಲಕ್ಷ ರೂಪಾಯಿಗಿಂತ ಹೆಚ್ಚಿನ ಆಭರಣಗಳನ್ನು ಖರೀದಿಸಿದರೆ, ಖರೀದಿಸುವ ವೇಳೆ ಪಾನ್ ವಿವರ ನೀಡಬೇಕು. ಪಾನ್ ಇಲ್ಲವೆಂದಾದ್ರೆ ಆಭರಣ ಖರೀದಿ ಸಾಧ್ಯವಿಲ್ಲ. 6. 5 ಲಕ್ಷ ರೂಪಾಯಿಗಿಂತ ಹೆಚ್ಚಿನ ಬೆಲೆಯ ವಾಹನವನ್ನು ಖರೀದಿಸಲು ಪಾನ್ ಕಾರ್ಡ್ ವಿವರಗಳನ್ನು ನೀಡಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...