alex Certify ಕೊರೊನಾ 3ನೇ ಅಲೆ ಆತಂಕದಲ್ಲಿರುವವರಿಗೊಂದು ಶುಭ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ 3ನೇ ಅಲೆ ಆತಂಕದಲ್ಲಿರುವವರಿಗೊಂದು ಶುಭ ಸುದ್ದಿ

ಮೂರನೇ ಕೊರೊನಾ ಅಲೆಯು ದೇಶಾದ್ಯಂತ ಇನ್ನೇನು ಅಪ್ಪಳಿಸಲಿದೆ ಎಂಬ ಅಳುಕಿನಲ್ಲಿಯೇ ಬಹುತೇಕರು ಇನ್ನೂ ಕೂಡ ಜೀವನ ನಡೆಸುತ್ತಿದ್ದಾರೆ. ಆದರೆ, ಅಂತಹ ಭೀಕರ ಅಪಾಯ ಆಗುವುದಿಲ್ಲ ಎಂದು ವಿಜ್ಞಾನಿಗಳು ಸಮಾಧಾನಕರ ಮಾತುಗಳನ್ನು ಹೇಳಿದ್ದಾರೆ.

ಹೌದು, ಮೂರನೇ ಕೊರೊನಾ ಅಲೆಯು ಅಪ್ಪಳಿಸಬಹುದು ಅಥವಾ ಈಗಾಗಲೇ ಸಣ್ಣ ಪ್ರಮಾಣದಲ್ಲಿ ಶುರು ಆಗಿರಬಹುದು ಕೂಡ. ಆದರೆ ಏಪ್ರಿಲ್‌-ಮೇನಲ್ಲಿ ದೇಶಾದ್ಯಂತ ರಣಕೇಕೆ ಹಾಕಿದ ಮಾದರಿಯಲ್ಲಿ ಮೂರನೇ ಅಲೆಯು ಭೀಕರ ಸಾವು-ನೋವುಗಳಿಗೆ ಕಾರಣ ಆಗುವ ಸಾಧ್ಯತೆ ಬಹಳ ಕಡಿಮೆ. ಯಾಕೆಂದರೆ ದೇಶದಲ್ಲಿ ಬಹುತೇಕ ಪ್ರಮಾಣದ ವೃದ್ಧರು, ಮಧ್ಯವಯಸ್ಕರು ಈಗಾಗಲೇ ಕೊರೊನಾ ನಿರೋಧಕ ಲಸಿಕೆಯ ಕನಿಷ್ಠ ಒಂದಾದರೂ ಡೋಸ್‌ ಪಡೆದಿದ್ದಾರೆ. ಅವರ ದೇಹದ ರೋಗ ನಿರೋಧಕ ಶಕ್ತಿಗೆ ಕೊರೊನಾ ಮೂಲ ವೈರಸ್‌ ಪರಿಚಯ ಆಗಿದೆ ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಪ್ರಾಧಿಕಾರ (ಸಿಎಸ್‌ಐಆರ್‌) ಹೇಳಿದೆ.

ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ; ಶೇ.100 ಹಾಜರಾತಿಯೊಂದಿಗೆ 5 ದಿನ ತರಗತಿ

ಕೊರೊನಾ ಮೂರನೇ ಅಲೆಯ ಭಾಗವಾಗಿ ಬಹುತೇಕರಲ್ಲಿ ವೈರಾಣು ಸೋಂಕು ಕಾಣಿಸಿಕೊಳ್ಳಬಹುದು. ಅವರಲ್ಲಿ ಜ್ವರ, ಶೀತ, ಸುಸ್ತು ಲಕ್ಷ ಣಗಳು ಗೋಚರವಾಗಬಹುದು. ಟೆಸ್ಟ್‌ ಮಾಡಿದಾಗ ಕೊರೊನಾ ಪಾಸಿಟಿವ್‌ ಕೂಡ ಬರಬಹುದು. ಆದರೆ, ಲಸಿಕೆ ಪಡೆದಿದ್ದರೆ ಸೋಂಕಿತರ ದೇಹಕ್ಕೆ ವೈರಾಣುವನ್ನು ಹತ್ತಿಕ್ಕಲು ಬಹಳ ದಿನಗಳು ಬೇಕಾಗುವುದಿಲ್ಲ. ವೈರಾಣುವು ದೇಹಕ್ಕೆ ಬಹಳ ಹಾನಿ ಮಾಡಲು ಕೂಡ ಸಾಧ್ಯವಾಗಲ್ಲ ಎಂದು ಸಿಎಸ್‌ಐಆರ್‌ ನಿರ್ದೇಶಕ ಡಾ. ಶೇಖರ್‌ ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಮೂರನೇ, ನಾಲ್ಕನೇ ಕೊರೊನಾ ಅಲೆಗಳು ಕಾಣಿಸಿಕೊಳ್ಳಬೇಕಾದಲ್ಲಿ ಪ್ರಮುಖವಾಗಿ ಕೊರೊನಾ ವೈರಾಣುವಿನ ರೂಪಾಂತರಿಗಳು ಮತ್ತು ವಿವಿಧ ತಳಿಗಳು ಸೋಂಕಿತರಲ್ಲಿ ಪತ್ತೆ ಆಗಬೇಕು. ಹಾಗೇ ಸದ್ಯದ ಮಟ್ಟಿಗೆ ಆಗಿಲ್ಲ. ಪರಿಣಾಮವಾಗಿ ಕೊರೊನಾ ಅಲೆಗಳು ಬಹಳ ದೂರ ಇವೆ ಎಂದು ಭಾವಿಸಬಹುದು ಎಂದು ಕೆಲ ದಿನಗಳ ಮುನ್ನ ವಿಜ್ಞಾನಿ ಡಾ. ಮಣೀಂದ್ರ ಅಗರ್‌ವಾಲ್‌ ಅವರು ಹೇಳಿದ್ದರು.

ಜನರು ಮಾಸ್ಕ್‌ ತೊಡುವುದು, ಸಾಮಾಜಿಕ ಅಂತರ ಪಾಲನೆ , ಕೈಗಳನ್ನು ಸ್ಯಾನಿಟೈಸ್‌ ಮಾಡುತ್ತಿದ್ದರೆ ಕೊರೊನಾ ವೈರಾಣು ಆರ್ಭಟಿಸಲು ಆಗಲ್ಲ ಎಂದು ತಜ್ಞ ವೈದ್ಯರು ಹಲವು ಸಂದರ್ಭಗಳಲ್ಲಿ ಕಿವಿಮಾತು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...