alex Certify ಗಂಡ – ಹೆಂಡತಿ ಜಗಳದಲ್ಲಿ ಪ್ರಾಣತೆತ್ತ 22 ದಿನದ ಹಸುಗೂಸು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಡ – ಹೆಂಡತಿ ಜಗಳದಲ್ಲಿ ಪ್ರಾಣತೆತ್ತ 22 ದಿನದ ಹಸುಗೂಸು..!

ಗಂಡ – ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಮಾತಿದೆ. ಆದರೆ ಹೈದರಾಬಾದ್​ನಲ್ಲಿ ಗಂಡ ಹೆಂಡತಿಯ ಕಲಹದ ನಡುವೆ ಕೂಸು ಪ್ರಾಣವನ್ನೇ ಕಳೆದುಕೊಂಡಿದೆ..! ಹೌದು, ಮಗುವಿಗೆ ಹಾಲುಣಿಸುವುದು ತಡವಾಗುತ್ತಿದೆ ಎಂಬ ವಿಚಾರಕ್ಕೆ ಪತಿ – ಪತ್ನಿ ಜಗಳ ಮಾಡಿಕೊಂಡರೆ ಇವರಿಬ್ಬರ ಗಲಾಟೆಯಲ್ಲಿ ಪುಟ್ಟ ಕಂದಮ್ಮ ಜೀವವನ್ನೇ ತೆತ್ತಿದೆ. ತೆಲಂಗಾಣ ರಾಜಧಾನಿ ಹೈದರಾಬಾದ್​ನ ಸೈದಾಬಾದ್​ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.

ಗಂಡ – ಹೆಂಡತಿ ಜಗಳ ಮಾಡಿಕೊಳ್ಳುವ ಭರದಲ್ಲಿ 22 ದಿನದ ಹಸುಗೂಸಿನ ಸಾವಿಗೆ ಕಾರಣವಾಗಿದ್ದಾರೆ. ಕೋಪಗೊಂಡಿದ್ದ ಪತಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪತ್ನಿ ಮಗುವನ್ನು ತನ್ನ ತೋಳುಗಳಲ್ಲಿ ಬಿಗಿಯಾಗಿ ಹಿಡಿದಿದ್ದರಿಂದ ಗಂಡು ಮಗುವಿನ ಕುತ್ತಿಗೆ ಮುರಿದುಹೋಗಿತ್ತು ಎನ್ನಲಾಗಿದೆ.

ಪತ್ನಿ ಮಗುವಿಗೆ ತಡವಾಗಿ ಹಾಲುಣಿಸುತ್ತಾಳೆ ಎಂಬ ವಿಚಾರಕ್ಕೆ ಪತಿ – ಪತ್ನಿ ನಡುವೆ ಕಲಹ ಏರ್ಪಟ್ಟಿತ್ತು. ಕೋಪಗೊಂಡಿದ್ದ ಪತಿಯು ಪತ್ನಿಗೆ ಪೈಪ್​ನಿಂದ ಹಲ್ಲೆ ನಡೆಸಿದ್ದ.

ಪತಿಯಿಂದ ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಮಗುವನ್ನು ತಾಯಿ ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಮಗುವಿನ ಕುತ್ತಿಗೆ ಮುರಿದು ಹೋಗಿದೆ. ಉದ್ದೇಶಪೂರ್ವಕವಾಗಿ ಅಲ್ಲದೇ ಇದ್ದರೂ ಸಹ ದಂಪತಿ ಕಲಹದಲ್ಲಿ ಕೂಸು ಸಾವನ್ನಪ್ಪಿದೆ ಎಂದು ಸೈದಾಬಾದ್ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣ ಸಂಬಂಧ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...