
ಬೆಂಗಳೂರು: ಗೃಹ ಸಚಿವರ ಮನೆಗೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮೆಮೋ ನೀಡಲಾಗಿದೆ.
ವರ್ಗಾವಣೆ ಕೆಲಸದ ವಿಚಾರವಾಗಿ ಪೊಲೀಸರು ಗೃಹ ಸಚಿವರ ಮನೆ, ಕಚೇರಿಗೆ ಭೇಟಿ ಮಾಡುತ್ತಿದ್ದಾರೆ. ಈ ನಡುವೆ ಗೃಹ ಸಚಿವರ ಕಚೇರಿಯಿಂದ ಡಿಜಿ, ಐಜಿಪಿ ಕಚೇರಿಗೆ ಮಾಹಿತಿ ನೀಡಲಾಗಿದೆ.
ಹೀಗಾಗಿ ಪೊಲೀಸ್ ಅಧಿಕಾರಿಗಳಿಗೆ ಮೆಮೋ ನೀಡಲಾಗಿದ್ದು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಗೃಹ ಸಚಿವರ ಮನೆಗೆ ಹೋಗುವಂತಿಲ್ಲ. ಒಂದು ವೇಳೆ ಗೃಹ ಸಚಿವರ ಮನೆ, ಅಥವಾ ಕಚೇರಿಗೆ ಹೋಗಬೇಕೆಂದರೆ ಡಿಜಿ ಐಜಿಪಿ ಕಚೇರಿಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯ. ನೋಂದಣಿ ಮಾಡಿಸಿಕೊಳ್ಳದೆ ಗೃಹ ಸಚಿವರ ಮನೆಗೆ ಹೋಗುವಂತಿಲ್ಲ ಎಂದು ಹೇಳಲಾಗಿದೆ.