alex Certify ನೀವೂ ನೋಡಿದ್ರ ಸ್ಕೂಟರ್‌ ನಿಂದ ಬಿದ್ದ ಮಹಿಳೆ ಹಿಂದಿದ್ದವನಿಗೆ ಬೈದ ವಿಡಿಯೋ…? ಬೀಳಲೇನು ಕಾರಣವೆಂಬುದು ಈಗ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವೂ ನೋಡಿದ್ರ ಸ್ಕೂಟರ್‌ ನಿಂದ ಬಿದ್ದ ಮಹಿಳೆ ಹಿಂದಿದ್ದವನಿಗೆ ಬೈದ ವಿಡಿಯೋ…? ಬೀಳಲೇನು ಕಾರಣವೆಂಬುದು ಈಗ ಬಹಿರಂಗ

ಕಳೆದ ವಾರ ವೈರಲ್​ ಆದ 15 ದಿನದ ಹಿಂದಿನ ಘಟನೆಯ ಒಂದು ವಿಡಿಯೋದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇಬ್ಬರು ಏಕಾಏಕಿ ಸ್ಕೂಟರ್​ನಿಂದ ಕೆಳಗೆ ಬೀಳುತ್ತಾರೆ, ಆದರೆ ಹಿಂಬದಿ ಬರುತ್ತಿದ್ದ ಸವಾರನಿಗೆ ಅವರು ತರಾಟೆಗೆ ತೆಗೆದುಕೊಳ್ಳುತ್ತಾರೆ, ಇಂಥದ್ದೊಂದು ವಿಡಿಯೊವನ್ನು ಬಹಳ ಮಂದಿ ನೋಡಿರಬಹುದು. ಆ ಮಹಿಳೆಯ ತರಾಟೆಗೆ ನೆಟ್ಟಿಗರು ಉಗಿದು ಉಪ್ಪಿನಕಾಯಿ ಹಾಕಿರಲೂ ಬಹುದು.

ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಕಂಡಿದ್ದು, ಮಹಿಳೆಯ ವರ್ತನೆಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಆ ವಿಡಿಯೋ ಕ್ಲಿಪ್​ ಮಧ್ಯಪ್ರದೇಶದ ಭೋಪಾಲ್​ನ ವಿಐಪಿ ರಸ್ತೆಯಲ್ಲಿ ನಡೆದ ಘಟನೆಯದ್ದಾಗಿದೆ. ವ್ಯಕ್ತಿ ಜೊತೆ ಸ್ಕೂಟರ್​ನಲ್ಲಿ ತೆರಳುತ್ತಿದ್ದ ಮಹಿಳೆ ಏಕಾಏಕಿ ರಸ್ತೆಗೆ ಉರುಳುತ್ತಾರೆ. ಆದರೆ, ತಾವು ಉರುಳಿ ಬೀಳುವುದಕ್ಕೆ ಹಿಂದಿನಿಂದ ಬರುತ್ತಿದ್ದ ವಾಹನ ಸವಾರ ಕಾರಣ ಎಂಬುದು ಆಕೆಯ ಆರೋಪ.

ಆದರೆ ಅಪಘಾತ ಸಂಭವಿಸಿದಾಗ ಹಿಂದಿನ ವಾಹನ ಸವಾರನಾದ ವ್ಲಾಗರ್​ ತಮ್ಮ ಬೈಕ್​ ರೈಡ್​ ಅನ್ನು ಚಿತ್ರೀಕರಿಸುತ್ತಿದ್ದರು. ಇದ್ದಕ್ಕಿದ್ದಂತೆ ಸ್ಕೂಟರ್​ನಿಂದ ಬಿದ್ದ ಮಹಿಳೆ ಎದ್ದು ಬೈಕ್​ ಸವಾರನ ಬಳಿಗೆ ಹೋದಳು, ನೀನೇ ಅಪಘಾತಕ್ಕೆ ಕಾರಣ, ಬೀಳುವಂತೆ ಮಾಡಿದ್ದು ಎಂದು ಆಕೆ ದೂಷಿಸುತ್ತಾಳೆ. ಆ ವ್ಯಕ್ತಿ ತಾನು ಘಟನೆಯನ್ನು ವಿಡಿಯೊ ಮಾಡಿದ್ದು, ನಾನು ಕಾರಣನಲ್ಲ ಎಂದು ಪುರಾವೆ ತೋರಿಸಬಲ್ಲೆ ಎಂದು ಹೇಳುತ್ತಾನೆ. ಅದೇ ವಿಡಿಯೋ ಈಗ ವೈರಲ್​ ಆಗಿರುವುದಾಗಿದೆ.

ವಾಹನ ತಿರುಗಿಸುವಾಗ ಇಂಡಿಕೇಟರ್​ ಬಳಸದಿರುವುದು ಮತ್ತು ನಿಧಾನವಾಗಿ ಲೇನ್​ ಬದಲಾಯಿಸುವ ಇತರ ದ್ವಿಚಕ್ರ ವಾಹನ ಸವಾರರನ್ನು ಗಮನ ಹರಿಸದಿರುವುದು ಮಹಿಳೆಯ ತಪ್ಪಾಗಿದೆ. ಇನ್ನೊಂದು ಸಂಗತಿ ಎಂದರೆ ಅವರ ಸ್ಕೂಟರ್​ ಎಡಕ್ಕೆ ಚಲಿಸಲು ಪ್ರಯತ್ನಿಸಿದಾಗ, ಒಂದು ಬ್ರೇಕ್​ ಹಾಕಿದ್ದು, ಸ್ಕೂಟರ್​ ಬಿದ್ದಿದೆ.

ರೈತರಿಗೆ ಬಿಗ್ ಶಾಕ್: ರಾಜ್ಯದಲ್ಲಿ ಮುಂಗಾರು ಶೇ. 24 ರಷ್ಟು ಕುಂಠಿತ

ವಿಡಿಯೊದಲ್ಲಿ ಕಾಣುತ್ತಿರುವ ಸ್ಕೂಟರ್​ ಹೀರೋ ಡ್ಯುಯೆಟ್.​ ಆ ಮಾದರಿಯನ್ನು ಭಾರತೀಯ ಮಾರುಕಟ್ಟೆಗೆ ಸರಬರಾಜು ಮಾಡುವುದನ್ನು ನಿಲ್ಲಿಸಲಾಗಿದೆ. ಸ್ಕೂಟರ್​ 10 ಇಂಚಿನ ಟೈರ್​ಗಳ ಮೇಲೆ ಸವಾರಿ ಮಾಡಿದ್ದರಿಂದ ಸ್ಕೂಟರ್​ ಪಲ್ಟಿಯಾಗುತ್ತದೆ.

ಡ್ಯುಯೆಟ್​ ಇಂಟಿಗ್ರೇಟೆಡ್​ ಬ್ರೇಕಿಂಗ್​ ಸಿಸ್ಟಮ್​ ಸಹ ಹೊಂದಿದ್ದು, ರೈಡರ್​ ಒಂದು ಬ್ರೇಕ್​ ಅನ್ವಯಿಸಿದಾಗ ಇನ್ನೊಂದು ಬ್ರೇಕ್​ ಸ್ವಯಂಚಾಲಿತವಾಗಿ ಅನ್ವಯಿಸುತ್ತದೆ. ಈ ಘಟನೆಯಲ್ಲಿ ಸ್ಕೂಟರ್​ಗೆ ಇಂಟಿಗ್ರೇಟೆಡ್​ ಬ್ರೇಕಿಂಗ್​ ಸಿಸ್ಟಂ ಅಳವಡಿಸಿರುವುದರಿಂದ ಎರಡೂ ಟೈರ್​ಗಳು ತಕ್ಷಣವೇ ಲಾಕ್​ ಆಗಿದ್ದು, ಸ್ಕೂಟರ್​ ಬೀಳುವಂತೆ ಮಾಡಿದೆ.

ಅದೃಷ್ಟವಶಾತ್​ ಹಿಂಬದಿ ಸವಾರ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಇಲ್ಲವಾದರೆ ಬಿಸಿಬಿಸಿ ಕಜ್ಜಾಯ ಪಡೆಯುವ ಸಂದರ್ಭವಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...