alex Certify ಆದಾಯದ ಮೂಲ ಇಲ್ಲದೇ ಅಂಗಾಂಗ ದಾನಕ್ಕೆ ಮುಂದಾದ ಬಡಪಾಯಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆದಾಯದ ಮೂಲ ಇಲ್ಲದೇ ಅಂಗಾಂಗ ದಾನಕ್ಕೆ ಮುಂದಾದ ಬಡಪಾಯಿ….!

ಕೊರೊನಾದಿಂದಾಗಿ ಸಾಕಷ್ಟು ಉದ್ಯಮಗಳು ನೆಲ ಕಚ್ಚಿವೆ. ಅನೇಕರು ತಮ್ಮ ನೌಕರಿಯನ್ನ ಕಳೆದುಕೊಂಡಿದ್ದಾರೆ. ಇದೆಲ್ಲದರ ಜೊತೆಯಲ್ಲಿ ಅನೇಕರು ತಮ್ಮ ಪ್ರೀತಿ ಪಾತ್ರರನ್ನ ಕಳೆದುಕೊಂಡಿದ್ದಾರೆ. ಒಟ್ನಲ್ಲಿ ಕೊರೊನಾದಿಂದಾಗಿ ಜನರ ಜೀವನವೇ ಸಂಪೂರ್ಣ ಅಲ್ಲೋಲಕಲ್ಲೋಲವಾಗಿದೆ.

ಇದೇ ರೀತಿ ಸಂಕಷ್ಟದಲ್ಲಿರುವ ಕೇರಳದ ತಿರುವನಂತಪುರಂನ 52 ವರ್ಷದ ರೋನಾಲ್ಡ್​ ಎಂಬವರ ಕತೆ ಎಂಥವರ ಕಣ್ಣಲ್ಲೂ ನೀರು ತರಿಸುತ್ತದೆ. ತಮ್ಮ ಸೋದರಳಿಯನ ಚಿಕಿತ್ಸೆಗೆ ಹಾಗೂ ತಮಗೆ ಖರ್ಚು ಮಾಡಲು ಯಾವುದೇ ಆದಾಯದ ಮೂಲ ಇಲ್ಲದ ಕಾರಣ ಅವರು ತಮ್ಮ ಕಿಡ್ನಿ ಹಾಗೂ ಲಿವರ್​ನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ. ತಮ್ಮ ಅಂಗಾಂಗಗಳು ಮಾರಾಟ ಮಾಡುವ ಬಗ್ಗೆ ದ್ವಿಚಕ್ರ ವಾಹನದಲ್ಲಿ ಜಾಹಿರಾತನ್ನೂ ಪ್ರಕಟಿಸಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ರೊನಾಲ್ಡೋ, ಈ ವಾಹನವು ನಮಗೆ ಮನೆ ಕೂಡ ಹೌದು. ನಮಗೆ ವಾಸಿಸಲು ಮನೆ ಇಲ್ಲ. ಹೀಗಾಗಿ ಈ ದ್ವಿಚಕ್ರವಾಹನವನ್ನೇ ಮನೆ ಮಾಡಿಕೊಂಡಿದ್ದೇನೆ. ಕೊರೊನಾ ಸಾಂಕ್ರಾಮಿಕಕ್ಕೂ ಮುನ್ನ ರಸ್ತೆ ಬದಿಯಲ್ಲಿ ಹಾಡು ಹಾಡುತ್ತಾ 700 ರೂಪಾಯಿ ಸಂಪಾದನೆ ಮಾಡುತ್ತಿದ್ದೆ. ಆದರೆ ಕೊರೊನಾ ದಾಳಿಯಿಟ್ಟ ಬಳಿಕ ನನ್ನ ಜೀವನವೇ ಅಲ್ಲೋಲ ಕಲ್ಲೋಲವಾಗಿದೆ. ನನಗೆ ಈಗ ಆದಾಯದ ಮೂಲವೇ ಇಲ್ಲವೆಂಬಂತಾಗಿದೆ ಎಂದು ಹೇಳಿದ್ರು.

ಕರಾವಳಿ ಭಾಗದ ಹಳ್ಳಿಯೊಂದರ ನಿವಾಸಿ ರೊನಾಲ್ಡೋ ಪತ್ನಿ ಐದು ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದಾರೆ. ನನ್ನ ಪುತ್ರಿ ತಮಿಳುನಾಡಿನ ವ್ಯಕ್ತಿಯೊಂದಿಗೆ ಹೋಗಿದ್ದಾಳೆ ಹಾಗೂ ಪುತ್ರ ಜೈಲಿನಲ್ಲಿದ್ದಾನೆ. ನನ್ನ ಸಹೋದರ ಪುತ್ರ ಅನಾರೋಗ್ಯದಿಂದ ಬಳಲುತ್ತಿದ್ದು ಆತನ ಚಿಕಿತ್ಸೆಗಾಗಿ ಅಂಗಾಗ ದಾನ ಮಾಡಲು ನಿರ್ಧರಿಸಿದ್ದೇನೆ ಅಂತಾರೆ ರೊನಾಲ್ಡೋ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...