alex Certify ಸದಾಕಾಲ ಭಕ್ತರನ್ನ ಕಾಯುವ ಶ್ರೀ ಕ್ಷೇತ್ರ ಪಣೋಲಿಬೈಲಿಗೆ ಭೇಟಿ ನೀಡಿದ್ದೀರಾ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸದಾಕಾಲ ಭಕ್ತರನ್ನ ಕಾಯುವ ಶ್ರೀ ಕ್ಷೇತ್ರ ಪಣೋಲಿಬೈಲಿಗೆ ಭೇಟಿ ನೀಡಿದ್ದೀರಾ……?

ಕರಾವಳಿ ಜಿಲ್ಲೆಯಲ್ಲಿ ದೇವಸ್ಥಾನಗಳು ಎಷ್ಟು ಇದೆಯೋ ಅಷ್ಟೇ ದೈವಸ್ಥಾನಗಳು ಇದೆ. ದೇವರಷ್ಟೆ ದೈವಗಳನ್ನು ಸಹ ಭಕ್ತಿ ಭಾವದಿಂದ ಜನ ಆರಾಧಿಸುತ್ತಾರೆ. ಇಂತಹುದೇ ಒಂದು ಕಾರಣಿಕ ದೈವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಅದುವೇ ಶ್ರೀ ಕ್ಷೇತ್ರ ಪಣೋಲಿಬೈಲು.

ಹೌದು..ಬಂಟ್ವಾಳ ತಾಲೂಕಿನ, ಸಜೀಪ ಮೂಡ ಗ್ರಾಮದಲ್ಲಿರುವ ಈ ದೈವಸ್ಥಾನದಲ್ಲಿ ತುಳುನಾಡಿನ ದೈವ ಕಲ್ಲುರ್ಟಿ ಕಲ್ಕುಡರನ್ನು ಆರಾಧಿಸಲಾಗುತಿದೆ. ಇಲ್ಲಿ ಪಟ್ಟೆ ಸೀರೆ ಹರಕೆ, ಅಗೆಲು ಕೋಲ, ಮಲ್ಲಿಗೆ ಹೂ, ಬೆಳ್ಳಿ ಬಂಗಾರ ತೆಗೆದುಕೊಳ್ಳುವ ಸಂಪದ್ಭರಿತ ಜೋಡಿ ದೈವವಾಗಿ ಕಲ್ಲುರ್ಟಿ-ಕಲ್ಕುಡ ನೆಲೆಯಾಗಿ ನಂಬಿ ಬಂದ ಭಕ್ತರನ್ನು ಹರಸುತ್ತಿದ್ದಾರೆ.

ಪಣೋಲಿಬೈಲ್ ಕಲ್ಲುರ್ಟಿ ಕ್ಷೇತ್ರ ತುಳುನಾಡಿನ ಅತ್ಯಂತ ಶ್ರೀಮಂತ ಕ್ಷೇತ್ರ. ಅಷ್ಟು ಮಾತ್ರವಲ್ಲ, ಬಡವ ಬಲ್ಲಿದನೆಂಬ ಭೇದಭಾವವಿಲ್ಲದೆ ಸರ್ವರನ್ನೂ ಕಾಯುತ್ತಿರುವ ಈ ಕ್ಷೇತ್ರ ಇವತ್ತಿನ ದಿನದಲ್ಲಿ ವಾರಕ್ಕೆ ಐದು ದಿವಸ ಇಪ್ಪತ್ತು ಹರಕೆಯ ಕೋಲ, ಅದೇ ರೀತಿ ವಾರದ ಮೂರು ದಿನ ನಾಲ್ಕು ಸಾವಿರಕ್ಕೂ ಮಿಕ್ಕಿ ಅಗೆಲು ಸೇವೆ ಹರಕೆಯನ್ನು ಪಡೆಯುತ್ತಿರುವ ಕ್ಷೇತ್ರವಾಗಿದೆ.

ಮದುವೆ, ವಿದ್ಯೆ, ಕಷ್ಟಕಾರ್ಪಣ್ಯ, ಕಳ್ಳತನ, ಉದ್ಯೋಗ, ಅಲ್ಲದೆ ಶರೀರದಲ್ಲಿರುವ ಪ್ರೇತಾತ್ಮ ಇನ್ನಿತರ ದುಷ್ಟಶಕ್ತಿಗಳನ್ನು ಕೋಲದಲ್ಲಿ ವಿಮೋಚನೆಗೊಳಿಸುತ್ತಾರೆ. ಈ ಜಾಗದಲ್ಲಿ ಪಟ್ಟ ಹರಕೆ ಹೇಳುತ್ತಾ ಜನರು ಕಷ್ಟ ಕಳೆಯುತ್ತಾ ಇರುವ ಶ್ರೀ ಕ್ಷೇತ್ರ ಪಣೋಲಿಬೈಲು. ಈ ಕ್ಷೇತ್ರಕ್ಕೆ ಜಿಲ್ಲೆಯವರು ಮಾತ್ರವಲ್ಲದೇ ಹೊರ ಜಿಲ್ಲೆಯವರು ಸಹ ಬಂದು ದೈವದ ಮುಂದೆ ತಮ್ಮ ಕಷ್ಟ ಕಾರ್ಪಣ್ಯವನ್ನು ತೋಡಿಕೊಂಡು ಹರಕೆಯನ್ನು ಹೇಳಿಕೊಳ್ಳುತ್ತಾರೆ. ಒಟ್ಟಿನಲ್ಲಿ ಕಲ್ಲುರ್ಟಿ ಕಲ್ಕುಡ ದೈವ ನಂಬಿ ಬಂದ ಭಕ್ತರನ್ನು ಸದಾ ಕಾಯುತ್ತಿರುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...