alex Certify ಅಜ್ಜಿಯೊಂದಿಗೆ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಹಾರ್ದಿಕ್ ಪಾಂಡ್ಯಾ; ಇಬ್ಬರ ಜೋಡಿಗೆ ಫಿದಾ ಆದ ನೆಟ್ಟಿಗರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಜ್ಜಿಯೊಂದಿಗೆ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಹಾರ್ದಿಕ್ ಪಾಂಡ್ಯಾ; ಇಬ್ಬರ ಜೋಡಿಗೆ ಫಿದಾ ಆದ ನೆಟ್ಟಿಗರು…!

ಅಲ್ಲುಅರ್ಜುನ್ ಹಾಗೂ ರಶ್ಮಿಕಾಮಂದಣ್ಣ ಅಭಿನಯದ ಪುಷ್ಪಾ ಚಿತ್ರ ಬಿಗ್ ಸ್ಕ್ರೀನ್ ನಲ್ಲಿ‌ ಮಾತ್ರವಲ್ಲ‌ ಸಾಮಾಜಿಕ ಮಾಧ್ಯಮಗಳಲ್ಲು ಸಿಕ್ಕಾಪಟ್ಟೆ ಟ್ರೆಂಡ್‌ ಆಗ್ತಿದೆ. ಪುಷ್ಪಾ ಚಿತ್ರದ ಹಾಡುಗಳಂತು ಅಕ್ಷರಶಃ ಎಲ್ಲಾ ಪ್ಲಾಟ್ ಫಾರ್ಮ್ ಗಳನ್ನ ಆಳುತ್ತಿವೆ.‌ ಚಿತ್ರದ  ’ಶ್ರೀವಲ್ಲಿ’ ಹಾಡು ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಸದ್ದು ಮಾಡುತ್ತಿದೆ.

ಜನಸಾಮಾನ್ಯರು ಮಾತ್ರವಲ್ಲ ಸಿನಿಮಾ ತಾರೆಯರು ಸೇರಿದಂತೆ ಕ್ರೀಡಾಪಟುಗಳು ಕೂಡ ’ಪುಷ್ಪ’ ಮೋಡಿಗೆ ಒಳಗಾಗಿದ್ದು ಶ್ರೀವಲ್ಲಿ ಹಾಡಿಗೆ ಭರ್ಜರಿಯಾಗಿ ಹೆಜ್ಜೆ ಹಾಕುತ್ತಿದ್ದಾರೆ.

ಇತ್ತೀಚೆಗಷ್ಟೇ ಅಜ್ಜಿಯೊಬ್ಬರೂ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಅಜ್ಜಿ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಅಜ್ಜಿ.  ವಯಸ್ಸು ಸಹಕರಿಸದಿದ್ದರೂ ತುಂಬಾ ಉತ್ಸಾಹದಿಂದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಜ್ಜಿಗೆ ಹಾರ್ದಿಕ್ ಪಾಂಡ್ಯ ಸಾಥ್ ನೀಡಿದ್ದಾರೆ.

ಅಜ್ಜಿ ಜೊತೆ ಹೆಜ್ಜೆ ಹಾಕಿರುವ ವಿಡಿಯೋ ಪೋಸ್ಟ್ ಮಾಡಿ, ಅದಕ್ಕೆ “ಅವರ್ ಓನ್ ಪುಷ್ಪಾ ನಾನಿ(Our own Pushpa nani)” ಎಂದು ಶೀರ್ಷಿಕೆ ನೀಡಿದ್ದಾರೆ. ಅಜ್ಜಿ ಜೊತೆಗೆ ಹೆಜ್ಜೆ ಹಾಕುವ ಮೂಲಕ ಹಾರ್ದಿಕ್‌ ಪಾಂಡ್ಯ ನೆಟ್ಟಿಗರ ಮನಗೆದ್ದಿದ್ದಾರೆ. ವಿಶೇಷ ಅಂದ್ರೆ ಹಾಡಿನ ಕೊನೆಗೆ ‘ತಗ್ಗೆದೆ ಲೆ’ ಎಂದು ಖಡಕ್ ಪೋಸ್‌ ಕೊಟ್ಟಿರುವುದಕ್ಕೆ ನೆಟಿಜೆನ್ಸ್ ಫಿದಾ ಆಗಿದ್ದಾರೆ.‌

ಇವರಿಬ್ಬರ ಈ ಕ್ಯೂಟ್ ವಿಡಿಯೋಗೆ ಸ್ವತಃ ಅಲ್ಲು ಅರ್ಜುನ್ ಕಾಮೆಂಟ್ ಮಾಡಿದ್ದಾರೆ. ಸೋ ಕ್ಯೂಟ್ ಎಂದಿರುವ ಅವರು ನಿಮ್ಮ ಈ ವಿಡಿಯೋಗೆ ನಾನು ಪ್ರೀತಿ‌ ಮತ್ತು ಗೌರವ ಅರ್ಪಿಸುತ್ತೇನೆ ಎಂದಿದ್ದಾರೆ. ಜೊತೆಗೆ ಹಾರ್ದಿಕ್, ಪತ್ನಿ ಕೂಡ ಕಾಮೆಂಟ್ ಮಾಡಿದ್ದಾರೆ. ಈ ಹಿಂದೆ ಕ್ರಿಕೆಟಿಗರಾದ ಡೇವಿಡ್‌ ವಾರ್ನರ್‌, ಸುರೇಶ್‌ ರೈನಾ, ಬ್ರಾವೊ ಕೂಡ ಪುಷ್ಪ ಹಾಡುಗಳಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಕ್ರಿಕೆಟಿಗರಾದ ಡೇವಿಡ್‌ ವಾರ್ನರ್‌, ಸುರೇಶ್‌ ರೈನಾ, ಬ್ರಾವೊ ಕೂಡ ಪುಷ್ಪ ಹಾಡುಗಳಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...