alex Certify ಹೆಚ್ 1 ಬಿ ವೀಸಾ ನಿರ್ಬಂಧ ಸಡಿಲಿಕೆಗೆ ಮೋದಿ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್ 1 ಬಿ ವೀಸಾ ನಿರ್ಬಂಧ ಸಡಿಲಿಕೆಗೆ ಮೋದಿ ಸಲಹೆ

ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹೆಚ್ 1 ಬಿ ವೀಸಾ ಸಮಸ್ಯೆ ಕುರಿತಾಗಿ ಅಮೆರಿಕ ಅಧ್ಯಕ್ಷ ಬೈಡೆನ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.

ಕಳೆದ 5 ವರ್ಷಗಳಿಂದ ಹೆಚ್ 1 ಬಿ ವೀಸಾ ನಿರ್ಬಂಧ ಸಡಿಲಿಕೆ ಸಮಸ್ಯೆಯಾಗಿದ್ದು, ಈ ಕುರಿತಾಗಿ ಸಮಾಲೋಚನೆ ನಡೆಸಲಾಗಿದೆ. ವೃತ್ತಿಪರರಿಗೆ ನೀಡುವ ವಲಸೆ ರಹಿತ ವೀಸಾ ಇದಾಗಿದ್ದು, ಡೊನಾಲ್ಡ್ ಟ್ರಂಪ್ ಅವಧಿಯಲ್ಲಿ ಬಿಗಿ ನಿಯಮ ಜಾರಿಗೊಳಿಸಲಾಗಿತ್ತು.

ಪ್ರಧಾನಿ ಮೋದಿ ಬೈಡೆನ್ ಭೇಟಿಯ ವೇಳೆ ಈ ಬಗ್ಗೆ ಪ್ರಸ್ತಾಪಿಸಿ, ಅಮೆರಿಕದ ಕಂಪನಿಗಳಲ್ಲಿರುವ ಭಾರತದ ಲಕ್ಷಾಂತರ ಪರಿಣಿತ ಕೆಲಸಗಾರರಿಗೆ ಅನುಕೂಲವಾಗುವಂತೆ ನಿರ್ಬಂಧ ಸಡಿಲಗೊಳಿಸಲು ಮನವಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...