alex Certify ಇಲ್ಲಿದೆ ಪ್ರಾಣ ರಕ್ಷಿಸಿದ ವೈದ್ಯನನ್ನು 25 ವರ್ಷಗಳ ಬಳಿಕ ಭೇಟಿಯಾದ ವ್ಯಕ್ತಿಯ ಹೃದಯಸ್ಪರ್ಶಿ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಪ್ರಾಣ ರಕ್ಷಿಸಿದ ವೈದ್ಯನನ್ನು 25 ವರ್ಷಗಳ ಬಳಿಕ ಭೇಟಿಯಾದ ವ್ಯಕ್ತಿಯ ಹೃದಯಸ್ಪರ್ಶಿ ಕಥೆ

ಗುಂಡೇಟಿನಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬನನ್ನು ರಕ್ಷಿಸಿದ ವೈದ್ಯನನ್ನು ಸುಮಾರು 25 ವರ್ಷಗಳ ನಂತರ ಪುನರ್ಮಿಲನವಾಗಿರುವ ಹೃದಯಸ್ಪರ್ಶಿ ಘಟನೆ ನಡೆದಿದೆ.

1996ರಲ್ಲಿ ಹೊಸವರ್ಷದ ಸಂಭ್ರಮಾಚರಣೆಯಲ್ಲಿದ್ದ ವೇಳೆ ದರೋಡೆಕೋರರ ಗುಂಪು ಡ್ಯಾಮನ್ ವಾಕರ್ ಅನ್ನು ಲೂಟಿ ಮಾಡಿತ್ತು. ಬಾಲ್ಟಿಮೋರ್‌ನ ಹ್ಯಾಂಬರ್ಗ್ ಸ್ಟ್ರೀಟ್ ಸೇತುವೆಯ ಬಳಿ ದಾಳಿಗೊಳಗಾದ ಡ್ಯಾಮನ್ ಮೇಲೆ ಫೈರಿಂಗ್ ಮಾಡಲಾಗಿತ್ತು. ಇದರಿಂದ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಡ್ಯಾಮನ್ ನರಳುತ್ತಿದ್ದ.

ಡ್ಯಾಮನ್ ರಕ್ತದ ಮಡುವಿನಲ್ಲಿ ನರಳುತ್ತಿದ್ದುದನ್ನು ಗಮನಿಸಿದ, ಅದೇ ದಾರಿಯಲ್ಲಿ ಹೋಗುತ್ತಿದ್ದ ಆಗಿನ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಡಾ. ಮೈಕೆಲ್ ಫ್ರಾಂಕ್ಸ್ ಅವರು ಅವನನ್ನು ರಕ್ಷಿಸಿದ್ದಾರೆ. ಆಂಬುಲೆನ್ಸ್ ಗೆ ಕರೆ ಮಾಡಿದ್ರೆ ಬರುವುದು ತಡವಾಗುತ್ತದೆ ಎಂದುಕೊಂಡ ಫ್ರಾಂಕ್ಸ್, ಕೂಡಲೇ ಡ್ಯಾಮನ್ ನನ್ನು ತನ್ನ ಕಾರಿನಲ್ಲಿ ಹೊತ್ತೊಯ್ದು ಕೆಲವು ನಿಮಿಷಗಳ ದೂರದಲ್ಲಿರುವ ಟ್ರಾಮಾ ಸೆಂಟರ್‌ಗೆ ಕರೆದೊಯ್ದಿದ್ದರು.

ಅಪ್ರಾಪ್ತನೊಂದಿಗೆ ಆರು ಮಕ್ಕಳ ತಾಯಿ ಪರಾರಿ….!

ಆ ರಾತ್ರಿ ತನ್ನ ಜೀವವನ್ನು ಉಳಿಸಿದ ವ್ಯಕ್ತಿಯನ್ನು ಹುಡುಕಲು ಡೇಮನ್‌ಗೆ 25 ವರ್ಷಗಳು ಬೇಕಾಯಿತು. ಡ್ಯಾಮನ್ ಮತ್ತು ಅವನ ತಾಯಿ ಇಂಟರ್‌ನೆಟ್‌ನಲ್ಲಿ ಫ್ರಾಂಕ್ಸ್‌ಗಾಗಿ ಹುಡುಕಾಟ ನಡೆಸಿದ ನಂತರ ಅವರನ್ನು ಕಂಡುಕೊಂಡಿದ್ದಾರೆ. ಪ್ರಸ್ತುತ ವರ್ಜೀನಿಯಾದಲ್ಲಿ ಮೂತ್ರಶಾಸ್ತ್ರಜ್ಞರಾಗಿರುವ ಫ್ರಾಂಕ್ಸ್‌ಗೆ ದೂರವಾಣಿ ಕರೆಯು ಪುನರ್ಮಿಲನವನ್ನು ಸಾಧ್ಯವಾಗಿಸಿದೆ. ಈಗ 52 ವರ್ಷವಾಗಿರುವ ಡಾ.ಫ್ರಾಂಕ್ಸ್ ಅವರಿಗೆ ಡ್ಯಾಮನ್‌ಗೆ ಏನಾಯಿತು ಅಥವಾ ಅವರು ಬದುಕುಳಿದಿದ್ದಾರೆಯೇ ಎಂಬ ಬಗ್ಗೆ ಆರಂಭದಲ್ಲಿ ತಿಳಿದಿರಲಿಲ್ಲವಂತೆ.

25 ವರ್ಷಗಳ ನಂತರ ಪುನರ್ಮಿಲನವು ಡ್ಯಾಮನ್ ಹಾಗೂ ವೈದ್ಯ ಫ್ರಾಂಕ್ಸ್ ಗೆ ಬಹಳ ಸಂತಸ ತಂದಿದೆ. ಇಬ್ಬರೂ ಕೂಡ ಒಬ್ಬರನ್ನೊಬ್ಬರು ತಬ್ಬಿಕೊಂಡು, ಪರಸ್ಪರ ಉಭಯಕುಶಲೋಪರಿ ವಿಚಾರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...