ಫ್ರೆಶರ್ ಕುಕ್ಕರ್ ಅಡುಗೆಗೆ ಬೇಕಾಗುವಂತಹ ಮುಖ್ಯವಾದ ವಸ್ತುವಾಗಿದೆ. ಇದರಲ್ಲಿ ಅಡುಗೆ ಮಾಡುವುದರಿಂದ ಸಮಯ ಉಳಿತಾಯವಾಗುತ್ತದೆ. ಮತ್ತು ಆಹಾರದ ರುಚಿ ಹೆಚ್ಚಿಸುತ್ತದೆ. ಹಾಗಾಗಿ ಇದರ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಇದರಲ್ಲಿ ಮುಖ್ಯವಾಗಿ ಬೇಕಾಗುವುದು ರಬ್ಬರ್. ಈ ರಬ್ಬರ್ ತ್ವರಿತವಾಗಿ ಹಾಳಾಗುವುದನ್ನು ತಪ್ಪಿಸಲು ಈ ಮಾರ್ಗಗಳನ್ನು ಅನುಸರಿಸಿ.
-ಪ್ರತಿಬಾರಿ ಅಡುಗೆ ಮಾಡಿದಾಗ ಕೆಲವರು ಕುಕ್ಕರ್ ರಬ್ಬರನ್ನು ತೊಳೆಯದೆ ಹಾಗೇ ಇಡುತ್ತಾರೆ. ಇದು ರಬ್ಬರ್ ಹಾಳಾಗಲು ಮುಖ್ಯ ಕಾರಣವಾಗಿದೆ. ಹಾಗಾಗಿ ಅಡುಗೆಯ ಬಳಿಕ ರಬ್ಬರನ್ನು ಚೆನ್ನಾಗಿ ತೊಳೆದು ಇಡಿ. ಇದರಿಂದ ದೀರ್ಘಕಾಲದವರೆಗೆ ಬಾಳಿಕೆ ಬರುತ್ತದೆ.
-ಕೆಲವೊಮ್ಮೆ ಅವಸರದಲ್ಲಿ ಕುಕ್ಕರ್ ಮುಚ್ಚಳದ ಜೊತೆಗೆ ರಬ್ಬರ್ ಇಡುತ್ತೇವೆ. ಮತ್ತು ಮುಚ್ಚಳವನ್ನು ತಲೆಕೆಳಗಾಗಿ ಇಡುತ್ತೇವೆ. ಇದರಿಂದ ರಬ್ಬರ್ ಮೇಲೆ ಒತ್ತಡ ಹೆಚ್ಚಾಗಿ ಅದು ಬೇಗನೆ ಹಾಳಾಗುತ್ತದೆ.
-ಅಡುಗೆ ಸೋಡಾ ರಬ್ಬರ್ ಅನ್ನು ಸ್ವಚ್ಛಗೊಳಿಸಲು ಸಹಕಾರಿಯಾಗಿದೆ. ಇದನ್ನು ಬಳಸಿ ರಬ್ಬರ್ ನ ವಾಸನೆಯನ್ನು ಹೋಗಲಾಡಿಸಬಹುದು. ಮತ್ತು ರಬ್ಬರನ್ನು ಬಳಸದೆ ಹಾಗೇ ಇಡುವಾಗ ಅಡುಗೆ ಸೋಡಾದೊಂದಿಗೆ ಇಟ್ಟರೆ ಅದರ ತೇವಾಂಶ ಹಾಗೇ ಇರುತ್ತದೆ.
-ರಬ್ಬರ್ ವಾಶ್ ಮಾಡಲು ಡಿಶ್ ವಾಶ್ ಬಳಸಬೇಡಿ. ಇದರಿಂದ ರಬ್ಬರ್ ಸಡಿಲಗೊಂಡು ಬೇಗನೆ ಹಾಳಾಗುತ್ತದೆ. ದೀರ್ಘಕಾಲ ಬಾಳಿಕೆ ಬರುವುದಿಲ್ಲ. ಹಾಗೇ ಕುಕ್ಕರ್ ರಬ್ಬರ್ ಅನ್ನು ಸ್ವಚ್ಛಗೊಳಿಸಲು ಸೋಪ್ ಮತ್ತು ನೀರಿನಿಂದ ತೊಳೆಯಿರಿ.