
ಕೆಲವೊಮ್ಮೆ ವೈಯಕ್ತಿಕ ಅಥವಾ ಕಚೇರಿ ವಿಷಯಗಳಿಂದಾಗಿ ನೀವು ವಿಪರೀತ ಒತ್ತಡದಲ್ಲಿ ಇರುತ್ತೀರಿ. ಆಗ ಈ ಕೆಲವು ವಿಷಯಗಳನ್ನು ಕಡ್ಡಾಯವಾಗಿ ಅವಾಯ್ಡ್ ಮಾಡಿ. ಅವುಗಳು ಯಾವುವು ಎಂದರೆ…
ಕಾರ್ ಡ್ರೈವ್ ಮಾಡಬೇಡಿ. ಸಮೀಪದ ಪ್ರದೇಶಕ್ಕೆ ಅನಿವಾರ್ಯವಾಗಿದ್ದರೆ ಮಾತ್ರ ಡ್ರೈವ್ ಮಾಡಿ. ದೂರದೂರಿನ ಪ್ರವಾಸವನ್ನು ಕೈಬಿಡಿ. ಒತ್ತಡದಲ್ಲಿ ಅವಘಡಗಳಾಗುವ ಸಾಧ್ಯತೆಗಳೇ ಹೆಚ್ಚು.
ಪದೇ ಪದೇ ನಿಮ್ಮ ಗೆಳೆಯರೊಂದಿಗೆ ನಿಮ್ಮ ಕಷ್ಟಗಳನ್ನು ಹಂಚಿಕೊಳ್ಳದಿರಿ. ಅವರಿಗೂ ನಿಮ್ಮ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದಾದ ಮೇಲೆ ಹೇಳಿಕೊಂಡು ಏನು ಪ್ರಯೋಜನ. ಒತ್ತಡದಿಂದ ಮುಕ್ತರಾಗುವ ಬಗ್ಗೆ ನೀವೇ ಅಲೋಚಿಸಿ.
ಆಲ್ಕೋಹಾಲ್ ಸ್ವಲ್ಪ ಹೊತ್ತು ಎಲ್ಲವನ್ನೂ ಮರೆಸಬಹುದು. ಆದರೆ ಅದಕ್ಕೆ ಸಮಸ್ಯೆಗಳನ್ನು ದೂರ ಮಾಡುವ ಶಕ್ತಿ ಇಲ್ಲ. ಮರುದಿನ ಬೆಳಗ್ಗೆ ಎದ್ದಾಗ ನಿಮ್ಮ ಸಮಸ್ಯೆಯೊಂದಿಗೆ ತಲೆನೋವು, ಸಂಕಟಗಳೂ ಸೇರಿಕೊಂಡಿರುತ್ತವೆ.
ರಾತ್ರಿಯಿಡೀ ನಿದ್ದೆ ಮಾಡದೆ ಕೊರಗುವುದನ್ನು ಬಿಟ್ಟು ಬಿಡಿ. ನಿಮ್ಮ ಮನಸ್ಸು ಬುದ್ಧಿ ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಿ. ಯಾವುದೇ ವಿಷಯಕ್ಕೂ ಮುಜುಗರ ಪಟ್ಟುಕೊಳ್ಳದೆ ಆಗುವುದಿಲ್ಲ ಎಂದಾದರೆ ನೋ ಹೇಳಲು ಕಲಿಯಿರಿ.