alex Certify ಹೈಟೆಕ್ ಕೃಷಿ ಮಾಡುವವರಿಗೆ ಬಂಪರ್….! ಡ್ರೋನ್ ಬಳಸಲು ಭರ್ಜರಿ ಅನುದಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈಟೆಕ್ ಕೃಷಿ ಮಾಡುವವರಿಗೆ ಬಂಪರ್….! ಡ್ರೋನ್ ಬಳಸಲು ಭರ್ಜರಿ ಅನುದಾನ

ರೈತರಿಗೆ ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸಲು , ಕೃಷಿಯ ಹೊಸ ತಂತ್ರಗಳನ್ನು ಉತ್ತೇಜಿಸಲಾಗುತ್ತಿದೆ. ಕೃಷಿಯ ಆಧುನಿಕ ಸಾಧನಗಳಲ್ಲಿ ಕೃಷಿಡ್ರೋನ್ ಗಳು ಕೂಡ ಒಂದಾಗಿದ್ದು, ಇದು ರೈತರಿಗೆ ಸಾಕಷ್ಟು ಉಪಯುಕ್ತವಾಗಿದೆ.‌

ಡ್ರೋನ್ ಮೂಲಕ ಕೀಟನಾಶಕ ಅಥವಾ ಔಷಧಿಗಳನ್ನು ಕೆಲವೇ ಗಂಟೆಗಳಲ್ಲಿ ದೊಡ್ಡ ಪ್ರದೇಶಕ್ಕೆ ಸಿಂಪಡಿಸಬಹುದು. ಇದರಿಂದ ರೈತರ ಖರ್ಚು ಕಡಿಮೆಯಾಗುವುದು, ಸಮಯ ಉಳಿತಾಯವಾಗಲಿದ್ದು, ಸರಿಯಾದ ಸಮಯಕ್ಕೆ ಹೊಲಗಳಲ್ಲಿ ಕೀಟ ನಿರ್ವಹಣೆ ಮಾಡುವುದರಿಂದ ಹೆಚ್ಚಿನ ಅನುಕೂಲವಾಗಲಿದೆ.

ಕೃಷಿಯಲ್ಲಿ ಡ್ರೋನ್ ಗಳು

ರೈತ ಸಮುದಾಯದಲ್ಲಿ ಡ್ರೋನ್ ಬಳಕೆ ಉತ್ತೇಜಿಸಲು, ಕೃಷಿ ಯಾಂತ್ರೀಕರಣದ ಉಪ-ಮಿಷನ್ (SMAM) ಯೋಜನೆಯಡಿಯಲ್ಲಿ ರೈತರಿಗೆ ಅನುದಾನ ನೀಡಲು ಭಾರತ ಸರ್ಕಾರ ತೀರ್ಮಾನಿಸಿದೆ.‌ ICAR ಸಂಸ್ಥೆಗಳು, ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳಿಂದ ಡ್ರೋನ್ ಖರೀದಿಗೆ 100% ಅಥವಾ 10 ಲಕ್ಷದವರೆಗೆ ಅನುದಾನವನ್ನು ನೀಡಲಾಗುತ್ತಿದೆ. ಇದರ 75% ಅನುದಾನ‌ ಡ್ರೋನ್ ಖರೀದಿಗೆಂದು ರೈತ ಉತ್ಪಾದಕ ಸಂಸ್ಥೆಗಳಿಗೆ (FPOS) ಒದಗಿಸಲಾಗುತ್ತದೆ.‌ ಹಣಕಾಸಿನ ನೆರವು ಮತ್ತು ಅನುದಾನಗಳು ಮಾರ್ಚ್ 31, 2023 ರವರೆಗೆ ಅನ್ವಯಿಸುತ್ತವೆ.

ಪ್ರದರ್ಶನಗಳಿಗಾಗಿ ಡ್ರೋನ್‌ಗಳನ್ನು ಬಾಡಿಗೆಗೆ ಪಡೆಯುವ ಅನುಷ್ಠಾನ ಏಜೆನ್ಸಿಗಳಿಗೆ ಪ್ರತಿ ಹೆಕ್ಟೇರ್‌ಗೆ 6,000 ರೂ.ಗಳನ್ನು ವೆಚ್ಚವಾಗಿ ನೀಡಲಾಗುತ್ತದೆ. ಡ್ರೋನ್ ಪ್ರದರ್ಶನಗಳಿಗಾಗಿ ಡ್ರೋನ್‌ಗಳನ್ನು ಖರೀದಿಸುವ ಅನುಷ್ಠಾನ ಏಜೆನ್ಸಿಗಳಿಗೆ ಪ್ರತಿ ಹೆಕ್ಟೇರ್‌ಗೆ 3,000 ರೂ. ಗಳನ್ನು ಅನಿಶ್ಚಿತ ವೆಚ್ಚವಾಗಿ ನೀಡಲಾಗುತ್ತದೆ. ರೈತರು, ಎಫ್‌ಪಿಒಎಸ್ ಮತ್ತು ಗ್ರಾಮೀಣ ಉದ್ಯಮಿಗಳ ಸಹಕಾರ ಸಂಘದಿಂದ ಸ್ಥಾಪಿಸಲಾದ ಅಸ್ತಿತ್ವದಲ್ಲಿರುವ ಕಸ್ಟಮ್ ಬಾಡಿಗೆ ಕೇಂದ್ರಗಳು ಡ್ರೋನ್ ಖರೀದಿಸಲು ಮುಂದೆ ಬಂದರೆ 40% ಅಥವಾ 4ಲಕ್ಷ ರೂ. ಅನುದಾನ ನೀಡಲಾಗುತ್ತದೆ ಎಂದು ಡ್ರೋನ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಸ್ಮಿತ್ ಶಾ ಹೇಳಿದರು.

ಕಸ್ಟಮ್ ಹೈರಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಕೃಷಿ ಪದವೀಧರರಿಗೆ ಡ್ರೋನ್ ಖರೀದಿಗೆ ಶೇಕಡ ಐವತ್ತು ಅಥವಾ 5 ಲಕ್ಷ ರೂ.ವರೆಗೆ ಅನುದಾನ ನೀಡಲಾಗುವುದು. ಹಣ ಹಂಚಿಕೆಗಾಗಿ ಪರಿಗಣಿಸಲು ಡ್ರೋನ್ ಖರೀದಿಯ ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರದ ಮೂಲಕ ಯೋಜನೆಯ ಕಾರ್ಯಕಾರಿ ಸಮಿತಿಗೆ ಸಲ್ಲಿಸಬೇಕು ಎಂದು ಮಾರ್ಗಸೂಚಿ ತಿಳಿಸುತ್ತದೆ.

ಸಾಮಾನ್ಯವಾಗಿ ಕೃಷಿ ಡ್ರೋನ್ ಗಳು 8-10 ಲಕ್ಷ ವೆಚ್ಚದಲ್ಲಿ ಸಿಗುತ್ತವೆ.‌ ಸರ್ಕಾರದ ಈ ಯೋಜನೆ ಕೃಷಿ-ಸಂಶೋಧನೆ ಮತ್ತು ಕೃಷಿ-ತರಬೇತಿ ಸಂಸ್ಥೆಗಳಿಗೆ ಕೃಷಿ ಡ್ರೋನ್‌ಗಳ ಖರೀದಿಯನ್ನು ಬಹುತೇಕ ಉಚಿತವಾಗಿ ಮಾಡಿದೆ. ಈ ಸಂಸ್ಥೆಗಳು ಕೃಷಿಯನ್ನು ಉತ್ತೇಜಿಸಲು ದೇಶಾದ್ಯಂತ ಪ್ರದರ್ಶನಗಳನ್ನು ನೀಡುತ್ತವೆ.
ಕೃಷಿ-ಡ್ರೋನ್‌ಗಳ ಸಬ್ಸಿಡಿಯು FPOS, CHCS ಮತ್ತು ಕೃಷಿ-ಉದ್ಯಮಿಗಳಿಗೆ ಡ್ರೋನ್ ಗಳನ್ನ ಕೈಗೆಟುಕುವಂತೆ ಮಾಡುತ್ತದೆ ಎಂದು ಸ್ಮಿತ್ ಷಾ ಹೇಳಿದ್ದಾರೆ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...