alex Certify ಬೆರಗಾಗಿಸುವಂತಿದೆ ಈ ರೈತ ಬೆಳೆದಿರುವ ‘ಮೂಲಂಗಿ’ ತೂಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುವಂತಿದೆ ಈ ರೈತ ಬೆಳೆದಿರುವ ‘ಮೂಲಂಗಿ’ ತೂಕ….!

ಮಹಾರಾಷ್ಟ್ರದ ರೈತರೊಬ್ಬರು ತಮ್ಮ  ಹೊಲದಲ್ಲಿ ದಾಖಲೆ ತೂಕದ ಮೂಲಂಗಿ ಬೆಳೆದಿದ್ದು, ಇದು ಈಗ ಆ ಪ್ರಾಂತ್ಯದ ಸಾರ್ವಜನಿಕರನ್ನು ಅಚ್ಚರಿಗೀಡು ಮಾಡಿದೆ. ಈ ರೈತ ಬೆಳೆದಿರುವ ಒಂದೊಂದು ಮೂಲಂಗಿಯೂ ಬರೋಬ್ಬರಿ 5 ಕೆಜಿ ತೂಗುತ್ತಿವೆ.

ಬೀಡ್ ಜಿಲ್ಲೆಯ ಕೂಲೆವಾಡಿ ಗ್ರಾಮದ ನಿವಾಸಿ ಜ್ಞಾನದೇವ ಶೇಷರಾವ್ ನೆಟ್ಗೆ ಈ ದಾಖಲೆ ತೂಕದ ಮೂಲಂಗಿ ಬೆಳೆದವರಾಗಿದ್ದು, ಇವರು ಬೆಳೆದ ಕೇವಲ ಒಂದು ಮೂಲಂಗಿ ಮಾತ್ರ 5 ಕೆ.ಜಿ. ತೂಕವಿಲ್ಲ. 15 ಕ್ಕಿಂತಲೂ ಅಧಿಕ ಮೂಲಂಗಿಗಳು ತಲಾ 5 ಕೆಜಿ ತೂಗುತ್ತಿವೆ.

ಸಾಮಾನ್ಯವಾಗಿ ಬೆಳೆಯುವ ಮೂಲಂಗಿಗಳು ಕಾಲು ಕೆಜಿಯಿಂದ ಗರಿಷ್ಠ ಎಂದರೆ 1 ಕೆ.ಜಿ.ಯವರೆಗೆ ತೂಗಬಹುದು. ಆದರೆ ಜ್ಞಾನದೇವ್ ಬೆಳೆದಿರುವ ಮೂಲಂಗಿ ತಲಾ 5 ಕೆಜಿ ತೂಗುತ್ತಿವೆ. ಆಧುನಿಕ ಕೃಷಿ ತಂತ್ರಜ್ಞಾನ ಬಳಸಿಕೊಂಡು ಅವರು ಈ ಸಾಧನೆ ಮಾಡಿದ್ದಾರೆ ಎನ್ನಲಾಗಿದೆ.

Farmer Grows Giant Radishes With Each Weighing Over Five Kg in Maharashtra’s Beed District (News18)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...