alex Certify ಪೋಸ್ಟರ್​​ ಕಿತ್ತ ಕಾರ್ಪೋರೇಷನ್​ ಸಿಬ್ಬಂದಿಗೆ ಥಳಿಸಿದ ಮಾಜಿ ಶಾಸಕ ಅಂದರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಸ್ಟರ್​​ ಕಿತ್ತ ಕಾರ್ಪೋರೇಷನ್​ ಸಿಬ್ಬಂದಿಗೆ ಥಳಿಸಿದ ಮಾಜಿ ಶಾಸಕ ಅಂದರ್

ದೆಹಲಿಯ ಮುನ್ಸಿಪಲ್​ ಕಾರ್ಪೋರೇಷನ್​​ ಸಿಬ್ಬಂದಿಯನ್ನು ನಿಂದಿಸಿ ಹಲ್ಲೆ ಮಾಡಿದ ಕಾರಣಕ್ಕಾಗಿ ದೆಹಲಿ ಪೊಲೀಸರು ಕಾಂಗ್ರೆಸ್​ನ ಮಾಜಿ ಶಾಸಕ ಆಸಿಫ್​ ಮೊಹಮ್ಮದ್​ ಖಾನ್​ರನ್ನು ಬಂಧಿಸಿದ್ದಾರೆ. ರಾಷ್ಟ್ರ ರಾಜಧಾನಿಯ ಶಾಹೀನ್​ ಭಾಗ್​ ಪ್ರದೇಶದಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಆಸಿಫ್​ ಅವರನ್ನು ಬಂಧಿಸಲಾಗಿದೆ.

ಮಾಜಿ ಶಾಸಕ ಆಸಿಫ್​ ಮೊಹಮ್ಮದ್, ತಮ್ಮ ಫೋಟೋ ಇರುವ ಪೋಸ್ಟರ್​​ ತೆಗೆದು ಹಾಕಿದ್ರು ಎಂಬ ಕಾರಣಕ್ಕೆ ಕೋಪಗೊಂಡು ಕಾರ್ಪೋರೇಷನ್ ಸಿಬ್ಬಂದಿಯನ್ನು ನಿಂದಿಸಿದ್ದು ಮಾತ್ರವಲ್ಲದೇ ಥಳಿಸಿ ಕಿರುಕುಳ ನೀಡಿದ್ದಾರೆ. ಅಲ್ಲದೇ ಕಿವಿ ಹಿಡಿದುಕೊಂಡು ಉಠ್ ಬೈಸ್ ಮಾಡುವಂತೆ ಒತ್ತಾಯಿಸಿದ್ದಾರೆ.

ಈ ಘಟನೆ ಸಂಬಂಧ ಲಜಪತ್​​ ನಗರ ಝೋನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸಿಫ್​ ಮೊಹಮ್ಮದ್​ ವಿರುದ್ಧ ಸೆಕ್ಷನ್​ 186, 353, 332 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮಾಜಿ ಶಾಸಕನನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...