alex Certify ಮೊಟ್ಟೆ ಸೇವನೆ ಹಿಂದಿನ ಸಿಕ್ರೇಟ್​​ ಬಿಚ್ಚಿಟ್ಟ ದಿ ಗ್ರೇಟ್​ ಖಲಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಟ್ಟೆ ಸೇವನೆ ಹಿಂದಿನ ಸಿಕ್ರೇಟ್​​ ಬಿಚ್ಚಿಟ್ಟ ದಿ ಗ್ರೇಟ್​ ಖಲಿ..!

ಉತ್ತಮ ದೇಹಕ್ಕೆ ಅತ್ಯುತ್ತಮ ಆಹಾರದ ಅವಶ್ಯಕತೆ ಕೂಡ ಇದೆ ಅನ್ನೋದು ವೈಜ್ಞಾನಿಕವಾಗಿ ಸಾಬೀತಾದ ಮಾತು. ದಲೀಪ್​​ ಸಿಂಗ್​ ರಾಣಾ ಅಲಿಯಾಸ್​ ಗ್ರೇಟ್​ ಖಲಿ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಡಬ್ಲುಡಬ್ಲುಇನ ಕುಸ್ತಿಪಟು ಖಲಿ ಕೂಡ ಈ ಮಾತನ್ನು ಪದೇ ಪದೇ ಹೇಳ್ತಿರ್ತಾರೆ.

ಸೋಶಿಯಲ್​ ಮೀಡಿಯಾದಲ್ಲಿ ಈ ಸಂಬಂಧ ಸಾಕಷ್ಟು ವಿಡಿಯೋಗಳನ್ನು ಖಲಿ ಶೇರ್​ ಮಾಡುತ್ತಲೇ ಇರ್ತಾರೆ. ಈ ಬಾರಿ ಖಲಿ ಬೇಯಿಸಿದ ಮೊಟ್ಟೆಯನ್ನು ಸೇವಿಸುತ್ತಿರುವ ವಿಡಿಯೋವನ್ನ ಶೇರ್​ ಮಾಡಿದ್ದಾರೆ. ತಮ್ಮ ಮುಂದೆ ಮೊಟ್ಟೆ ಇರುವ ತಟ್ಟೆಯನ್ನು ಇಟ್ಟುಕೊಂಡಿರುವ ಖಲಿ ವೀಕ್ಷಕರಿಗೂ ಬೇಯಿಸಿದ ಮೊಟ್ಟೆಯನ್ನು ಪ್ರತಿ ದಿನ ಸೇವಿಸುವಂತೆ ಹೇಳಿದ್ದಾರೆ.

ಗ್ರೇಟ್​ ಖಲಿ ಈ ಹಿಂದೆ 32 ಮೊಟ್ಟೆಯನ್ನು ಸೇವಿಸುತ್ತಿರುವ ವಿಡಿಯೋವನ್ನು ಶೇರ್​ ಮಾಡಿದ್ದರು. ಅಲ್ಲದೇ ಈ ವಿಡಿಯೋವು ತಮ್ಮ ಯಾವುದೇ ಫಾಲೋವರ್ಸ್​ನ್ನು ಚಕಿತಗೊಳಿಸಬಹುದು ಎಂದು ಹೇಳಿದ್ದರು .

ಚಾರಣ ಪ್ರಿಯರ ತವರು ಕುಮಾರ ಪರ್ವತ

ಆದರೆ ಈ ಪೋಸ್ಟ್​ ಸೋಶಿಯಲ್​ ಮೀಡಿಯಾದಲ್ಲಿ ಕೇವಲ ನಾಲ್ಕು ಗಂಟೆಗಳ ಅವಧಿಯಲ್ಲಿ 1.19 ಲಕ್ಷ ವೀವ್ಸ್​​ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಖಲಿಯ ಈ ಪೋಸ್ಟ್​ಗೆ ಅನೇಕರು ಸಂಡೇ ಹೋ ಯಾ ಮಂಡೇ ರೋಜ್​ ಕಾವೋ ಅಂಡೆ ( ರವಿವಾರವಿರಲಿ, ಸೋಮವಾರವಿರಲಿ ನಿತ್ಯವೂ ಮೊಟ್ಟೆ ಸೇವಿಸಿ) ಎಂದು ಕಮೆಂಟ್​ ಮಾಡ್ತಿದ್ದಾರೆ .

ಖಲಿಗೆ ಮೊಟ್ಟೆಗಳಷ್ಟೇ ಕೇಕ್​ಗಳಂದರೂ ಪಂಚಪ್ರಾಣ. ಈ ಹಿಂದೆ ಖಲಿ ಕೇಕ್​​ಗಳನ್ನು ಸೇವಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದರು.

View this post on Instagram

A post shared by The Great Khali (@thegreatkhali)

https://www.instagram.com/reel/CTsETkWpLnJ/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...