alex Certify ಔಷಧಿ ತರಲು ಹೋಗಿದ್ದ ಬಾಲಕಿ ಮೇಲೆ ವೈದ್ಯನಿಂದಲೇ ಲೈಂಗಿಕ ಕಿರುಕುಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಔಷಧಿ ತರಲು ಹೋಗಿದ್ದ ಬಾಲಕಿ ಮೇಲೆ ವೈದ್ಯನಿಂದಲೇ ಲೈಂಗಿಕ ಕಿರುಕುಳ

ವೈದ್ಯೋ ನಾರಾಯಣೋ ಹರಿ ಎಂದು ಹೇಳುತ್ತಾರೆ. ಆದರೆ ಇಲ್ಲೊಬ್ಬ ವೈದ್ಯ ಈ ಮಾತಿಗೆ ತದ್ವಿರುದ್ಧವಾಗಿ ವರ್ತಿಸಿದ್ದಾನೆ. ದೆಹಲಿಯ ಕರಾಲಾದ ಶಿವವಿಹಾರ ಎಂಬ ಪ್ರದೇಶದಲ್ಲಿರುವ ಮೊಹಲ್ಲಾ ಕ್ಲಿನಿಕ್​ಗೆ ತೆರಳಿದ್ದ 12 ವರ್ಷದ ದಲಿತ ಬಾಲಕಿಗೆ ವೈದ್ಯ ಲೈಂಗಿಕ ಕಿರುಕುಳ ನೀಡಿದ ಘಟನೆಯು ವರದಿಯಾಗಿದೆ. ಆರೋಪಿ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ, ಅನಾರೋಗ್ಯ ಇದ್ದ ಕಾರಣ ಬಾಲಕಿಯು ಕ್ಲಿನಿಕ್​ಗೆ ತೆರಳಿದ್ದಳು ಎನ್ನಲಾಗಿದೆ. ಈ ಸಂದರ್ಭದ ಲಾಭ ಪಡೆಯಲು ಯತ್ನಿಸಿದ ವೈದ್ಯ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ತಿಳಿದು ಬಂದಿದೆ.

ಕ್ಲಿನಿಕ್​ನಿಂದ ಮನೆಗೆ ವಾಪಸ್ಸಾಗುತ್ತಿದ್ದಂತೆಯೇ ಬಾಲಕಿಯು ತನ್ನ ಮನೆಯವರಿಗೆ ನಡೆದ ವಿಚಾರವನ್ನು ವಿವರಿಸಿದ್ದಾಳೆ. ಮಾರನೇ ದಿನ ಬಾಲಕಿಯ ತಂದೆ ಕ್ಲಿನಿಕ್​ಗೆ ಬಾಲಕಿಯ ಜೊತೆ ತೆರಳಿದ್ದಾರೆ. ಕುಟುಂಬಸ್ಥರು ಹಾಗೂ ನೆರೆಹೊರೆಯವರೂ ಸಹ ಕ್ಲಿನಿಕ್​ನತ್ತ ಧಾವಿಸಿದ್ದಾರೆ.

ಪೊಲೀಸರಿಗೂ ಪೋಷಕರು ಮಾಹಿತಿ ನೀಡಿದ್ದ ಹಿನ್ನೆಲೆ ಕ್ಲಿನಿಕ್​ಗೆ ಪೊಲೀಸ್​ ಕೂಡ ಆಗಮಿಸಿದ್ದರು. ಬಾಲಕಿ ನೀಡಿದ ಹೇಳಿಕೆಯನ್ನು ಆಧರಿಸಿ ಪೋಸ್ಕೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ವೈದ್ಯನನ್ನು ಬಂಧಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...