alex Certify BIG NEWS: ವೇಶ್ಯಾವಾಟಿಕೆ ಅಡ್ಡೆಯಲ್ಲಿದ್ದ ಮಾಡೆಲ್ ರಕ್ಷಣೆ, ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ಕರೆತಂದು ದಂಧೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವೇಶ್ಯಾವಾಟಿಕೆ ಅಡ್ಡೆಯಲ್ಲಿದ್ದ ಮಾಡೆಲ್ ರಕ್ಷಣೆ, ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ಕರೆತಂದು ದಂಧೆ

ಚೆನ್ನೈ: ತಮಿಳುನಾಡಿನ ಚೆನ್ನೈ ಮಹಾನಗರ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ರಾಜಧಾನಿಯ ಹೋಟೆಲ್ ನಲ್ಲಿ ಇರಿಸಲಾಗಿದ್ದ ಇಬ್ಬರು ಮಾಡೆಲ್ ಗಳನ್ನು ರಕ್ಷಿಸಿದ್ದಾರೆ.

ದೆಹಲಿ ಮೂಲದ ಇಬ್ಬರು ಮಾಡೆಲ್ ಗಳನ್ನು ತಮಿಳು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ಕೊಡಿಸುವ ಭರವಸೆ ನೀಡಿ ಕರೆದುಕೊಂಡು ಬಂದು ವೇಶ್ಯಾವಾಟಿಕೆಗೆ ತಳ್ಳಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಚೆನ್ನೈ ಮಹಾನಗರದ ಟಿಯಾಂಪೇಟ್ ಪ್ರದೇಶದ ಫೈವ್ ಸ್ಟಾರ್ ಹೋಟೆಲ್ ಮೇಲೆ ದಾಳಿ ಮಾಡಿ ಮಾಡೆಲ್ ಗಳನ್ನು ರಕ್ಷಿಸಿದ್ದಾರೆ.

ಇಬ್ಬರನ್ನು ಸರ್ಕಾರಿ ಆಶ್ರಯ ತಾಣದಲ್ಲಿರಿಸಲಾಗಿದೆ. ದೆಹಲಿ ಮೂಲದ ಸೂರಜ್ ಮಲೋತ್ರ ಮತ್ತು ರಾಹುಲ್ ದಾಳಿಯ ವೇಳೆ ಪರಾರಿಯಾಗಿದ್ದಾರೆ. ಮಾಡೆಲ್ ಗಳ ಜೊತೆಗಿದ್ದ ತಿರುಮುಲ್ಲೈವಯ್ಲ್ ನಿವಾಸಿ ಸೆಂಥಿಲ್ ಮತ್ತು ಕೊಟ್ಟಿವಕ್ಕಂ ನಿವಾಸಿ ಸರವಣನ್ ಎಂಬ ಪಿಂಪ್ ಗಳನ್ನು ಬಂಧಿಸಲಾಗಿದೆ. ತಮಿಳು ಸಿನಿಮಾದಲ್ಲಿ ಪ್ರಮುಖ ಪಾತ್ರ ಕೊಡಿಸುವುದಾಗಿ ಕಳೆದ ವಾರ ದೆಹಲಿಯಿಂದ ಇಬ್ಬರು ಮಾಡೆಲ್ ಗಳನ್ನು ಕರೆದುಕೊಂಡು ಬಂದು ವೇಶ್ಯಾವಾಟಿಕೆಯಲ್ಲಿ ತೊಡಗಿಸಲು ಮುಂದಾಗಿದ್ದಾಗಿ ಎಂದು ಬಂಧಿತ ಪಿಂಪ್ ಗಳು ಪೊಲೀಸರಿಗೆ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...