alex Certify ಪೊಲೀಸರೇ ಶೇರ್‌ ಮಾಡಿದ್ದಾರೆ ಈತನ ಸ್ಕೂಟರ್‌ ಸವಾರಿ ವಿಡಿಯೋ…! ಇದರ ಹಿಂದಿದೆ ಒಂದು ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರೇ ಶೇರ್‌ ಮಾಡಿದ್ದಾರೆ ಈತನ ಸ್ಕೂಟರ್‌ ಸವಾರಿ ವಿಡಿಯೋ…! ಇದರ ಹಿಂದಿದೆ ಒಂದು ಕಾರಣ

ಬೈಕ್ ರೈಡ್ ಮಾಡುವವರು ಸ್ಟಂಟ್ ಮಾಡೋದನ್ನ ನೀವೆಲ್ಲ ನೋಡಿರ್ತಿರಾ ! ವೀಲ್ಹಿಂಗ್ ಮಾಡೋದೇನು, ಬ್ಯಾಲೆನ್ಸಿಂಗ್ ಮಾಡೋದೇನು..! ನೋಡ್ತಿದ್ರೆನೇ ಮೈ ಝುಂ ಅಂತ ಅನಿಸಿಬಿಡುತ್ತೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ ಇದ್ದಾನೆ ನೋಡಿ ಈತ ಮಾಡ್ತಿರೋ ಸ್ಟಂಟ್ ಕ್ರೇಜ್ ಗೆ ಅಲ್ಲ, ಹೊಟ್ಟೆ ಪಾಡಿಗಾಗಿ ಮಾಡ್ತಿರೋ ಸ್ಟಂಟ್ ಇದು.

ಇಲ್ಲಿ ಈ ವ್ಯಕ್ತಿ ತನ್ನ ಸ್ಕೂಟರ್ ನಲ್ಲಿ ಒಂದು ಆಟೋದಲ್ಲಿ ತುಂಬುವಷ್ಟು ಸಾಮಾನುಗಳನ್ನು ತುಂಬಿಕೊಂಡು ಹೋಗುತ್ತಿದ್ದಾನೆ. ಇಲ್ಲಿ ಆತನಿಗೆ ಕೂರಲು ಜಾಗ ಕೂಡಾ ಇಲ್ಲ. ಸ್ಕೂಟರ್ ನ ತುತ್ತತುದಿಯಲ್ಲಿ ಕೂತು ಅಷ್ಟರಲ್ಲೇ ಬ್ಯಾಲೆನ್ಸ್ ಮಾಡಿಕೊಂಡು ಹೈವೇಯಲ್ಲಿ ಹೋಗುತ್ತಿರೋ ವಿಡಿಯೋ ಇದು. ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ಈಗಾಗಲೇ ಈ ಕ್ಲಿಪ್ ನ್ನು 7ಲಕ್ಷ 18 ಸಾವಿರ ಜನರು ವೀಕ್ಷಿಸಿದ್ದಾರೆ, ಹಾಗೂ 24 ಸಾವಿರ ಜನರು ಲೈಕ್ ಮಾಡಿದ್ದಾರೆ.

ಈ ವ್ಯಕ್ತಿಯ ಗಾಡಿ ಓಡಿಸುವ ಸ್ಟೈಲ್ ನೋಡಿ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಇನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಈ ವಿಡಿಯೋ ಅಪ್ಲೋಡ್ ಮಾಡಿದ್ದು ಯಾರು ಗೊತ್ತಾ‌ ? ತೆಲಂಗಾಣ ಪೊಲೀಸರು.

ಈ ವಿಡಿಯೋವನ್ನ ಗಂಭೀರವಾಗಿ ಪರಿಗಣಿಸಿ ತೆಲಂಗಾಣ ಪೊಲೀಸರು ಈ ರೀತಿಯ ಸಾಹಸ ಮಾಡಿದವರಿಗೆ ಶಿಕ್ಷೆ ತಪ್ಪಿದ್ದಲ್ಲ ಅನ್ನೊ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋವನ್ನ ನೋಡಿದವರು ಇದಕ್ಕೆ ಥರಾವರಿ ಕಾಮೆಂಟ್ ಗಳನ್ನ ಹಾಕುತ್ತಿದ್ದಾರೆ. ಇನ್ನೂ ಈ ವಿಡಿಯೋ ಶೇರ್ ಮಾಡಿಕೊಂಡಿರೋ ಸಾಗರ್ ಎಂಬುವರು ಈ ವಿಡಿಯೋಗೆ ಕೊಟ್ಟಿರೋ ಕ್ಯಾಪ್ಷನ್ ತುಂಬಾ ಇಂಟ್ರಸ್ಟಿಂಗ್ ಆಗಿದೆ. “ನನ್ನ 32GB ಇನ್ ಬಿಲ್ಟ್ ಮೆಮೊರಿ ಇರುವ ಫೋನ್ ನಲ್ಲಿ 31.9 GB ಡೇಟಾ ಫುಲ್ ಆದಾಗ ಇದೇ ರೀತಿ ಆಗುತ್ತೆ” ಅನ್ನೋ ಕ್ಯಾಪ್ಷನ್ ಕೊಟ್ಟಿದ್ದಾರೆ.

ಸ್ಕೂಟರ್ ನಲ್ಲಿ ಆಗಾಗ ಈ ರೀತಿ ಅಗತ್ಯಕ್ಕಿಂತ ಹೆಚ್ಚಿನ ಸರಕುಗಳನ್ನ ತೆಗೆದುಕೊಂಡು ಹೋಗುವುದನ್ನ ನೋಡ್ತಾ ಇರ್ತೆವೆ. ಇದರಿಂದ ಅಪಾಯವೇ ಹೆಚ್ಚು. ಎಷ್ಟೋ ಜನರು ಜೀವವನ್ನೇ ಕಳೆದುಕೊಂಡಿದ್ದು ಇದೆ. ನಿಮ್ಮ ಪ್ರಾಣ ಮಾತ್ರವಲ್ಲದೆ ಬೇರೆಯವರ ಜೀವದ ಜೊತೆಗೂ ಆಟವಾಡಬೇಡಿ ಅಂತ ತೆಲಂಗಾಣ ಪೊಲೀಸರು ಟ್ವಿಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...