alex Certify ಮೆಸ್​ ಊಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮತ್ತೊಬ್ಬ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಸ್​ ಊಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮತ್ತೊಬ್ಬ ಪೊಲೀಸ್

ಉತ್ತರ ಪ್ರದೇಶದ ಪೊಲೀಸ್​ ಮೆಸ್​ನಲ್ಲಿ ನೀಡಲಾದ ಆಹಾರದ ಗುಣಮಟ್ಟದ ಬಗ್ಗೆ ಕಾನ್​ ಸ್ಟೇಬಲ್​ ಅಸಮಾಧಾನ ವ್ಯಕ್ತಪಡಿಸಿ ಸಾರ್ವಜನಿಕವಾಗಿ ಕಣ್ಣೀರಿಟ್ಟ ವಿಡಿಯೋ ಕ್ಲಿಪ್​ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿತ್ತು. ಇದಾದ ಒಂದು ವಾರದ ನಂತರ ಇದೇ ರೀತಿಯ ಮತ್ತೊಂದು ವಿಡಿಯೋ ಹೊರಹೊಮ್ಮಿದ್ದು, ಮೈನ್​ಪುರಿ ಜಿಲ್ಲಾ ಪೊಲೀಸ್​ ಮುಖ್ಯಸ್ಥ ಕಮಲೇಶ್​ ದೀಕ್ಷಿತ್​ ದಾಲ್​-ರೋಟಿ ಬಗ್ಗೆ ದೂರು ಹೇಳಿಕೊಂಡಿದ್ದಾರೆ.

ಸ್ಥಳೀಯ ಪೊಲೀಸ್​ ವ್ಯವಸ್ಥೆ ಅವ್ಯವಸ್ಥೆಯನ್ನು ತೋರಿಸಿದ್ದು, ದಾಲ್​ನ ದೊಡ್ಡ ಪಾತ್ರೆಯೊಳಗೆ ಒಂದು ಚಮಚವನ್ನು ಹಾಕಿ ನಂತರ, “ಇದು ಕೇವಲ ನೀರು” ಎಂದು ಹೇಳುವುದೂ ಸಹ ವಿಡಿಯೋದಲ್ಲಿ ಕಾಣಿಸುತ್ತದೆ.

ಆಗಸ್ಟ್​ 11ರಂದು ಫಿರೋಜಾಬಾದ್​ ಕಾನ್ ​ಸ್ಟೇಬಲ್​ ಮನೋಜ್​ ಕುಮಾರ್​ ಅವರು ಒಂದು ತಟ್ಟೆಯಲ್ಲಿ ದಾಲ್​, ರೊಟ್ಟಿ ಮತ್ತು ಅನ್ನವನ್ನು ತಂದು ರಸ್ತೆಯಲ್ಲಿ ಅಳುತ್ತಿದ್ದರು ಆಗ ಹಿರಿಯ ಅಧಿಕಾರಿ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದರು. ಆಹಾರದ ಗುಣಮಟ್ಟದ ಬಗ್ಗೆ ದೂರು ನೀಡಿದರೂ ಯಾವುದೇ ಸುಧಾರಣೆಯಾಗಿಲ್ಲ ಎಂದು ಅವರು ಆರೋಪಿಸಿದ್ದರು.

ನಮ್ಮೆಲ್ಲರಿಗೂ ಮೆಸ್​ನಲ್ಲಿ ನೀರಿರುವ ದಾಲ್​ ಮತ್ತು ಬೇಯಿಸದ ರೊಟ್ಟಿಗಳನ್ನು ನೀಡಲಾಗುತ್ತದೆ. ಪೊಲೀಸ್​ ಸಿಬ್ಬಂದಿಗೆ ಪೌಷ್ಠಿಕ ಆಹಾರ ನೀಡಲು ರಾಜ್ಯ ಸರ್ಕಾರ ಭತ್ಯೆ ನೀಡುತ್ತದೆ ಎಂದು ಸಿಎಂ ಘೋಷಿಸಿದ್ದರು. ಆದರೆ 12 ಗಂಟೆಗಳ ಕರ್ತವ್ಯದ ನಂತರ ನಮಗೆ ಸಿಗುವುದು ಇದೇ. ಸರಿಯಾದ ಆಹಾರ ತೆಗೆದುಕೊಳ್ಳದಿದ್ದರೆ ನಾವು ಹೇಗೆ ಕೆಲಸ ಮಾಡಬೇಕು ಎಂದು ಕಾನ್​ ಸ್ಟೇಬಲ್​ ವಿಡಿಯೋದಲ್ಲಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...
http://divna.freepage.cz/oftalmologie/ https://bgmarathon.cz/?topic=nejlepsi-metody-obnovy-zraku-po-operacich-oci-v-cesku http://www.amkhorice.cz/forum/topic728-prevence-glaukomu-v-cesku-zakladni-opatreni.html https://console-forum.net/tema/1122729-inovativn%C3%AD-metody-diagnostiky-a-l%C3%A9%C4%8Dby-keratokonusu-v-%C4%8Desku/ https://olomouc.hnutiduha.cz/nase-aktivity/ekoporadna/forum/ostatni/ucinna-lecba-herpeticke-keratitidy-v-cesku/ https://www.phpbb.cz/viewtopic.php?t=24501 https://diskuse.jakpsatweb.cz/?action=vthread&forum=2&topic=174770