alex Certify CSKಗೆ ಐಪಿಎಲ್‌ ಟ್ರೋಫಿ ಗೆದ್ದು ಕೊಟ್ಟ ರವೀಂದ್ರ ಜಡೇಜಾ ಫಿಟ್ನೆಸ್‌ ಸೀಕ್ರೆಟ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

CSKಗೆ ಐಪಿಎಲ್‌ ಟ್ರೋಫಿ ಗೆದ್ದು ಕೊಟ್ಟ ರವೀಂದ್ರ ಜಡೇಜಾ ಫಿಟ್ನೆಸ್‌ ಸೀಕ್ರೆಟ್‌

ಟೀಂ ಇಂಡಿಯಾದ ಸ್ಟಾರ್‌ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಐಪಿಎಲ್‌ ಗೆದ್ದುಕೊಟ್ಟಿದ್ದಾರೆ. ಫೈನಲ್‌ನಲ್ಲಿ ತಮ್ಮ ತಂಡವನ್ನು ಅದ್ಭುತ ಗೆಲುವಿನತ್ತ ಮುನ್ನಡೆಸಿದ್ದಾರೆ. ರವೀಂದ್ರ ಜಡೇಜಾ, ಗುಜರಾತ್ ಟೈಟಾನ್ಸ್ ವಿರುದ್ಧದ ಕೊನೆಯ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸುವ ಮೂಲಕ ಸಿಎಸ್‌ಕೆಗೆ ಜಯ ತಂದುಕೊಟ್ಟರು. ಈ ಮೂಲಕ ಅದ್ಭುತ ಫಿನಿಶರ್‌ ಎನಿಸಿಕೊಂಡಿರೋ ಜಡೇಜಾ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಕ್ರಿಕೆಟ್‌ ಜಗತ್ತಿನಲ್ಲಿ ಜಡ್ಡು ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ರವೀಂದ್ರ ಜಡೇಜಾ ಅವರ ಫಿಟ್‌ನೆಸ್ ಮೊದಲಿನಿಂದಲೂ ಚೆನ್ನಾಗಿದೆ. ದೇಹವನ್ನು ಫಿಟ್‌ ಆಗಿಟ್ಟುಕೊಳ್ಳಲು ಅವರು ಸಾಕಷ್ಟು ಕಸರತ್ತು ಮಾಡ್ತಾರೆ. ಉತ್ತಮ ಫಿಟ್ನೆಸ್ ಇಲ್ಲದೇ ಇದ್ದರೆ ಪಂದ್ಯದಲ್ಲಿ ಇಷ್ಟು ಬಲಿಷ್ಠವಾಗಿ ಆಡುವುದು ಸುಲಭದ ಮಾತಲ್ಲ. ರವೀಂದ್ರ ಜಡೇಜಾ ಅವರ ಫಿಟ್‌ನೆಸ್ ದಿನಚರಿ ಹೇಗಿದೆ ಅನ್ನೋದನ್ನ ನೋಡೋಣ.

ರವೀಂದ್ರ ಜಡೇಜಾ ತಮ್ಮ ತ್ರಾಣ ಮತ್ತು ಶಕ್ತಿಯನ್ನು ಹೆಚ್ಚಿಸಲು ಕಾರ್ಡಿಯೋ ವ್ಯಾಯಾಮಗಳನ್ನು ಮಾಡಲು ಇಷ್ಟಪಡುತ್ತಾರೆ. ಮುಖ್ಯವಾಗಿ ದೇಹದ ತೂಕವನ್ನು ಸಮತೋಲನದಲ್ಲಿಡಲು ಕಾರ್ಡಿಯೋ ತರಬೇತಿ ಮತ್ತು ಓಟವನ್ನು ಅವಲಂಬಿಸಿದ್ದಾರೆ. ಕಾರ್ಡಿಯೋ ವ್ಯಾಯಾಮಗಳು ಅವರ ವರ್ಕೌಟ್‌ನ ಪ್ರಮುಖ ಭಾಗವಾಗಿದೆ. ಇದು ಹೃದಯ ರಕ್ತನಾಳದ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ರವೀಂದ್ರ ಜಡೇಜಾ ಅವರು ತಮ್ಮ ದೇಹವನ್ನು ಸಕ್ರಿಯವಾಗಿ ಮತ್ತು ಬಲವಾಗಿ ಇರಿಸಿಕೊಳ್ಳಲು ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ದೇಹಕ್ಕೆ ಕೋರ್ ಸ್ಟ್ರೆಂತ್ ಅತ್ಯಗತ್ಯ ಎಂದು ಅವರು ತಿಳಿದಿದ್ದಾರೆ. ಕೋರ್ ಸ್ಟ್ರೆಂಥ್‌ ಹೆಚ್ಚಿಸಲು ಮತ್ತು ದೇಹದ ಸ್ಥಿರತೆಯನ್ನು ಕಾಪಾಡಿಕೊಳ್ಳಲು ವೇಯ್ಟ್‌ ಟ್ರೈನಿಂಗ್‌ ಮಾಡ್ತಾರೆ. ಇದು ಅವರಿಗೆ ಆಂತರಿಕ ಶಕ್ತಿ ಮತ್ತು ದೇಹದ ಸ್ಥಿರತೆಯನ್ನು ಒದಗಿಸುತ್ತದೆ.

ದೇಹದ ಶಕ್ತಿಯನ್ನು ಹೆಚ್ಚಿಸಲು ವೇಯ್ಟ್‌ ಟ್ರೈನಿಂಗ್‌ ಬಹಳ ಮುಖ್ಯ. ಇದು ಕೋರ್ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ರವೀಂದ್ರ ಜಡೇಜಾ ಇದನ್ನು ತಪ್ಪಿಸುವುದಿಲ್ಲ. ರವೀಂದ್ರ ಜಡೇಜಾರನ್ನು ಫಿಟ್ ಮತ್ತು ಆರೋಗ್ಯಕರವಾಗಿರಿಸುವಲ್ಲಿ ವರ್ಕೌಟ್ ಮಾತ್ರವಲ್ಲದೇ ಅವರ ಆಹಾರ ಕ್ರಮವೂ ಪ್ರಮುಖ ಪಾತ್ರ ವಹಿಸುತ್ತದೆ. ದೇಹದ ತೂಕವನ್ನು ಸಮತೋಲನದಲ್ಲಿಡಲು ಮತ್ತು ಸಕ್ರಿಯವಾಗಿರಿಸಿಕೊಳ್ಳಲು ಸಮತೋಲಿತ ಆಹಾರವನ್ನು ಅನುಸರಿಸುತ್ತಾರೆ.

ಪ್ರತಿದಿನ ಸಾಕಷ್ಟು ನೀರು ಕುಡಿಯುತ್ತಾರೆ. ಇದರಿಂದ ದೇಹಕ್ಕೆ ತೇವಾಂಶದ ಕೊರತೆಯಾಗುವುದಿಲ್ಲ. ವರದಿಗಳ ಪ್ರಕಾರ ರವೀಂದ್ರ ಜಡೇಜಾ ಪ್ರೋಟೀನ್ ಮತ್ತು ಮಲ್ಟಿವಿಟಮಿನ್ ಪೂರಕಗಳನ್ನು ಸಹ ಬಳಸುತ್ತಾರೆ. ಇದು ಅವರ ಚಟುವಟಿಕೆಗೆ ಸಹಾಯ ಮಾಡುತ್ತದೆ ಮತ್ತು ಫಿಟ್ನೆಸ್ ಅನ್ನು ಹೆಚ್ಚಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...