alex Certify ಕೊರೋನಾ ಲಸಿಕೆ ಕುರಿತಂತೆ ಮತ್ತೊಂದು ಗುಡ್ ನ್ಯೂಸ್: ಭಾರತದಲ್ಲೇ ರಷ್ಯಾ ಲಸಿಕೆ ಉತ್ಪಾದನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಲಸಿಕೆ ಕುರಿತಂತೆ ಮತ್ತೊಂದು ಗುಡ್ ನ್ಯೂಸ್: ಭಾರತದಲ್ಲೇ ರಷ್ಯಾ ಲಸಿಕೆ ಉತ್ಪಾದನೆ

ನವದೆಹಲಿ: ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತದೆ. ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ರಷ್ಯಾ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ವಿ ಲಸಿಕೆ 2021 ರಿಂದ ಭಾರತದಲ್ಲಿ ರೆಡಿಯಾಗಲಿದೆ.

ಹೆಟೆರೋ ಫಾರ್ಮಸ್ಯುಟಿಕಲ್ ಕಂಪನಿ ಸಹಯೋಗದಲ್ಲಿ 100 ಮಿಲಿಯನ್ ಡೋಸ್ ಲಸಿಕೆಯನ್ನು ಉತ್ಪಾದಿಸಲಾಗುತ್ತದೆ. ಆಗಸ್ಟ್ 11 ರಂದು ಮೊದಲ ಬಾರಿಗೆ ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ರಷ್ಯಾ ಹೇಳಿದ್ದು, ಈಗಾಗಲೇ ರಷ್ಯಾದಲ್ಲಿ ಲಸಿಕೆಯನ್ನು ನೀಡಲಾಗ್ತಿದೆ.

ಗಮಾಲೆಯ ನ್ಯಾಷನಲ್ ರಿಸರ್ಚ್ ಸೆಂಟರ್ ನಲ್ಲಿ ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ರಷ್ಯಾದ ಆರೋಗ್ಯ ಸಚಿವಾಲಯದ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾದ ಲಸಿಕೆಯನ್ನು ಭಾರತದಲ್ಲಿಯೂ ಉತ್ಪಾದಿಸಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...