alex Certify ಪ್ರವಾಹದ ಭೀತಿ ಕಡಿಮೆ ಮಾಡಲು ಅಣೆಕಟ್ಟನ್ನೆ ಸ್ಫೋಟಿಸಿದೆ ಈ ರಾಷ್ಟ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಹದ ಭೀತಿ ಕಡಿಮೆ ಮಾಡಲು ಅಣೆಕಟ್ಟನ್ನೆ ಸ್ಫೋಟಿಸಿದೆ ಈ ರಾಷ್ಟ್ರ

ಅತೀ ಹೆಚ್ಚು ಜನಸಂಖ್ಯೆಯನ್ನ ಹೊಂದಿರುವ ಪ್ರದೇಶದಲ್ಲಿ ಪ್ರವಾಹ ಭೀತಿಯನ್ನ ತಪ್ಪಿಸುವ ಸಲುವಾಗಿ ಚೀನಾದ ಮಿಲಿಟರಿ ಅಣೆಕಟ್ಟನ್ನು ಸ್ಫೋಟ ಮಾಡಿದ್ದು ಇದರಿಂದಾಗಿ ಕನಿಷ್ಟ 25 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಲ್ಯುಯಾಂಗ್​ ನಗರದಲ್ಲಿ ಮಂಗಳವಾರ ರಾತ್ರಿ ಮಿಲಿಟರಿ ಪಡೆ ಅಣೆಕಟ್ಟು ಕಾರ್ಯಾಚರಣೆ ನಡೆಸಿದ್ರು. ಕಳೆದೊಂದು ದಿನದಿಂದ ಚೀನಾದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಹೆನಾನ್​ ಪ್ರಾಂತ್ಯದ Zhengzhou ಎಂಬಲ್ಲಿ ರಸ್ತೆಗಳು, ಶಾಲಾ ಕಟ್ಟಡಗಳು, ಸೇರಿದಂತೆ ಅನೇಕ ಮನೆಗಳು ಮುಳುಗಡೆಯಾಗಿದೆ. ಹೀಗಾಗಿ ಪ್ರವಾಹದ ದಿಕ್ಕನ್ನ ತಪ್ಪಿಸಬೇಕು ಎಂಬ ಉದ್ದೇಶದಿಂದ ಚೀನಾ ಮಿಲಿಟರಿ ಪಡೆ ಈ ಕಾರ್ಯಾಚರಣೆ ನಡೆಸಿದೆ.

ಇನ್ನು 7 ಮಂದಿ ಕಾಣೆಯಾಗಿದ್ದು ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಚೀನಾದ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ದಿ ಪೇಪರ್​ ತನ್ನ ಟ್ವಿಟರ್​ ಖಾತೆಯಲ್ಲಿ ಚೀನಾದ ಫೋಟೋವನ್ನ ಶೇರ್​ ಮಾಡಿದೆ.

ಭಾರೀ ಮಳೆಯಿಂದಾಗಿ 10ಕ್ಕೂ ಹೆಚ್ಚು ರೈಲುಗಳ ಓಡಾಟ ಸ್ಥಗಿತಗೊಂಡಿದೆ. ಪ್ರಯಾಣಿಕರನ್ನ ಹೊತ್ತ ಕನಿಷ್ಟ ಮೂರು ರೈಲುಗಳಂತೂ 40 ಗಂಟೆಗೂ ಅಧಿಕ ಕಾಲ ಒಂದೇ ಸ್ಥಳದಲ್ಲಿ ನಿಂತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಭಾರೀ ಮಳೆಯಿಂದಾಗಿ 26ಕ್ಕೂ ಅಧಿಕ ಹೆದ್ದಾರಿಗಳು ಬಂದ್​ ಆಗಿದೆ ಎಂದು ಸಾರಿಗೆ ಸಚಿವಾಲಯ ತನ್ನ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...