alex Certify ಅತ್ಯಾಚಾರವೆಸಗಲು ಯತ್ನಿಸಿದವನನ್ನ ಹತ್ಯೆಗೈದ ವಿವಾಹಿತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಾಚಾರವೆಸಗಲು ಯತ್ನಿಸಿದವನನ್ನ ಹತ್ಯೆಗೈದ ವಿವಾಹಿತೆ

ಲೈಂಗಿಕ ದೌರ್ಜನ್ಯ ಮಾಡಲು ಮುಂದಾಗಿದ್ದ 40 ವರ್ಷದ ವ್ಯಕ್ತಿಯನ್ನ 21 ವರ್ಷದ ಯುವತಿ ಕೊಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಯುವತಿಯನ್ನ ಬಂಧಿಸಿದ ಪೊಲೀಸರು ಬಳಿಕ ಯಾವುದೇ ಆರೋಪಗಳನ್ನೂ ಹೊರಿಸದೆ ಬಿಡುಗಡೆ ಮಾಡಿದ್ದಾರೆ.

ಚೆನ್ನೈನ ಮಿಂಜೂರ್​ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಯುವತಿಯು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕೆ ಒಬ್ಬಳೇ ಇದ್ದಿದ್ದನ್ನ ಗಮನಿಸಿದ ಮೃತ ವ್ಯಕ್ತಿ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆತನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಸಂತ್ರಸ್ತೆ ವ್ಯಕ್ತಿಯನ್ನ ನೆಲಕ್ಕೆ ತಳ್ಳಿದಳು ಈ ವೇಳೆ ಆತನ ತಲೆ ಕಲ್ಲಿಗೆ ಬಡಿದ ಕಾರಣ ಆತ ಪ್ರಜ್ಞಾಹೀನನಾದನು. ಬಳಿಕ ಆ ವ್ಯಕ್ತಿಯನ್ನ ಯುವತಿ ರಸ್ತೆ ಬದಿಗೆ ಎಳೆದುಕೊಂಡು ಬಂದಳು. ಇದೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪತಿಗೆ ಆಕೆ ಸಂಪೂರ್ಣ ವಿವರಣೆ ನೀಡಿದಳು. ಕೂಡಲೇ ಪತಿ ಸಹಕೆಲಸಗಾರರ ಜೊತೆ ಘಟನೆ ನಡೆದ ಸ್ಥಳಕ್ಕೆ ಧಾವಿಸಿದ್ದು, ಈ ವೇಳೆಗಾಗಲೇ ಆರೋಪಿ ಸಾವನ್ನಪ್ಪಿದ್ದ ಎನ್ನಲಾಗಿದೆ.

ಮಹಿಳೆಯ ವಿರುದ್ಧ ಪೊಲೀಸರು ಸೆಕ್ಷನ್​ 100(ರಕ್ಷಣೆಗಾಗಿ ವ್ಯಕ್ತಿಯ ಕೊಲೆ)ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಆಕೆಯನ್ನ ಬಿಡುಗಡೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...