alex Certify ಐದು ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಬರ್ತಿದೆ ಈ ಕಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐದು ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಬರ್ತಿದೆ ಈ ಕಾರು

Top 6 Budget Friendly Cars Under 5 lakh 2021 - 2022 - Fincashಕಾರು ಖರೀದಿಸಬೇಕೆಂಬುದು ಎಲ್ಲರ ಆಸೆ. ಕಾರಿನ ಬೆಲೆ ಕೇಳಿ ಅನೇಕರು ಸುಮ್ಮನಾಗ್ತಾರೆ. ಆದ್ರೆ 5 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಕಾರುಗಳು ಸಾಕಷ್ಟಿವೆ. ಕಡಿಮೆ ಬೆಲೆ ಜೊತೆ ಉತ್ತಮ ಮೈಲೇಜ್ ಹಾಗೂ ಅನೇಕ ವೈಶಿಷ್ಟ್ಯಗಳೊಂದಿಗೆ ಬರುವ ಕಾರುಗಳ ವಿವರ ಇಲ್ಲಿದೆ.

ಮಾರುತಿ ಆಲ್ಟೊ 800 : ಮಾರುತಿ ಆಲ್ಟೊ 800 ಕಾರಿನ ಬೆಲೆ 3.15 ಲಕ್ಷ ರೂಪಾಯಿಯಿಂದ 4.82 ಲಕ್ಷ ರೂಪಾಯಿವರೆಗಿದೆ. ಈ ಕಾರು 796 ಸಿಸಿ ಎಂಜಿನ್ ಹೊಂದಿದ್ದು, ಇದು 47 ಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. ಇದು 31.59 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇದರಲ್ಲಿ 4-5 ಜನರು ಕುಳಿತುಕೊಳ್ಳಬಹುದು.

ಮಾರುತಿ ವ್ಯಾಗನ್ ಆರ್ : ಮಾರುತಿಯ ಇನ್ನೊಂದು ಕಾರ್ ಮಾರುತಿ ವ್ಯಾಗನ್ ಆರ್ ಬೆಲೆ 4.93 ಲಕ್ಷ ರೂಪಾಯಿಯಿಂದ 6.45 ಲಕ್ಷ ರೂಪಾಯಿ ಒಳಗಿದೆ. ಇದು 1197 cc ಎಂಜಿನ್ ಹೊಂದಿದೆ. ಇದು 81.8 hp ಶಕ್ತಿಯನ್ನು ಉತ್ಪಾದಿಸುತ್ತದೆ. ಕಾರು ಒಂದು ಲೀಟರ್ ಇಂಧನದಲ್ಲಿ 32.52 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

ಮಾರುತಿ ಸೆಲೆರಿಯೊ : ಮಾರುತಿ ಸೆಲೆರಿಯೊ ಕಾರಿನ ಬೆಲೆ 4.99 ಲಕ್ಷದಿಂದ 7 ಲಕ್ಷದವರೆಗಿದೆ. ಈ ಕಾರಿನಲ್ಲಿ 5 ಜನರು ಕುಳಿತುಕೊಳ್ಳಬಹುದು. ಇದರಲ್ಲಿ 313 ಲೀಟರ್ ಬೂಟ್ ಸ್ಪೇಸ್ ನೀಡಲಾಗಿದೆ. ಈ ಕಾರು 26.68 ಕಿಲೋಮೀಟರ್ ಮೈಲೇಜ್  ನೀಡುತ್ತದೆ.

ಟಾಟಾ ಟಿಯಾಗೊ : ಟಾಟಾ ಟಿಯಾಗೊ ಆರಂಭಿಕ ಬೆಲೆ 4.99 ಲಕ್ಷ ರೂಪಾಯಿಯಾಗಿದೆ. ಉನ್ನತ ರೂಪಾಂತರದ ಬೆಲೆ 7 ಲಕ್ಷದವರೆಗಿದೆ. ಈ ಕಾರಿಗೆ 1199 ಸಿಸಿಯ ಎಂಜಿನ್ ನೀಡಲಾಗಿದ್ದು, ಇದು 84.48 ಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ.

ರೆನಾಲ್ಟ್ KWID : ರೆನಾಲ್ಟ್ KWID ಕಾರಿನ ಬೆಲೆ 4.11 ಲಕ್ಷದಿಂದ 5.66 ಲಕ್ಷದವರೆಗಿದೆ. ಈ ಕಾರಿನಲ್ಲಿ 999 ಸಿಸಿ ಎಂಜಿನ್ ನೀಡಲಾಗಿದೆ. ಇದು 67 ಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. 5 ಸೀಟ್ ಸಾಮರ್ಥ್ಯವನ್ನು ಇದು ಹೊಂದಿದೆ. ಈ ಕಂಪನಿ ವೆಬ್ಸೈಟ್ ಪ್ರಕಾರ, ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...